Multiple personality disorder: ಕಾಡುವ ಬಹುವ್ಯಕ್ತಿತ್ವ ಅಸ್ವಸ್ಥತೆಯ ಲಕ್ಷಣಗಳ ಬಗ್ಗೆ ಇಲ್ಲಿದೆ ಮಾಹಿತಿ
ಮಾನಸಿಕ ಅನಾರೋಗ್ಯಕ್ಕೆ ಮೊದಲ ಕಾರಣ ಎಂದರೆ ಒತ್ತಡ. ಕೆಲಸದ ಒತ್ತಡ, ಜೀವನದಲ್ಲಿ ಎದುರಾಗುವ ಸಮಸ್ಯೆಗಳ ಒತ್ತಡಗಳು ಹೀಗೇ ಒಂದೊಂದೆ ಬೆಸೆದು ಮನಸ್ಸು ಬಗ್ಗಡವಾಗುತ್ತದೆ. ಇದರಿಂದ ಬಹುವ್ಯಕ್ತಿತ್ವ ಅಸ್ವಸ್ಥತೆ ಕಾಡುತ್ತದೆ.
ಮಾನಸಿಕ ಆರೋಗ್ಯ (Mental Health) ಎಲ್ಲಕ್ಕಿಂತ ಮುಖ್ಯ. ಬದುಕಿನ ಪ್ರತೀ ಹಂತದ , ಪ್ರತೀ ಕ್ಷಣದಲ್ಲಿಯೂ ಮಾನಸಿಕವಾಗಿ ಸಬಲತೆ ಹೊಂದಿದ್ದರೆ ದೈಹಿಕವಾಗಿಯೂ ಆರೋಗ್ಯವಾಗಿರಲು ಸಾಧ್ಯ. ಕೆಲಸದ ಒತ್ತಡ, ಕೀಳರಿಮೆ, ಆತಂಕ ಎಲ್ಲವೂ ಮಾನಸಿಕ ಅನರೋಗ್ಯಕ್ಕೆ ಕಾರಣವಾಗುತ್ತದೆ. ಚಂಚಲ ಮನಸ್ಥಿತಿಯಿಂದ ಸಮಸ್ಯೆಗಳೇ ಹೆಚ್ಚು. ಅದನ್ನು ಬಹುವ್ಯಕ್ತಿತ್ವ ಅಸ್ವಸ್ಥತೆ (Multiple personality disorder) ಎಂದು ಕರೆಯುತ್ತಾರೆ. ಒಂದೇ ತೆರನಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದೇ ಇರುವುದು, ಕ್ಷಣ ಕ್ಷಣಕ್ಕೂ ನಿರ್ಧಾರಗಳನ್ನು ಬದಲಿಸುವುದು. ಒಂದೇ ವ್ಯಕ್ತಿ ಒಂದೇ ಸಮಯದಲ್ಲಿ ಎರಡು ರೀತಿಯಲ್ಲಿ ವರ್ತಿಸುವುದನ್ನು ಬಹುವ್ಯಕ್ತಿತ್ವ ಮಾನಸಿಕ ಅಸ್ವಸ್ಥತೆ ಎಂದು ಕರೆಯುತ್ತಾರೆ. ಮಾನಸಿಕ ಆರೋಗ್ಯದ ಮಹತ್ವನ್ನು ತಿಳಿಸಲು ಪ್ರತೀ ವರ್ಷ ಮಾರ್ಚ್ 5 ರಂದು ಬಹುವ್ಯಕ್ತಿತ್ವ ಅಸ್ವಸ್ಥತೆ ದಿನ (Multiple personality disorder day 2022) ಎಂದು ಆಚರಿಸಲಾಗುತ್ತದೆ. ಹಾಗಾದರೆ ಈ ಬಹುವ್ಯಕ್ತಿತ್ವ ಸಮಸ್ಯೆಯುಳ್ಳವರು ಯಾವೆಲ್ಲಾ ಲಕ್ಷಣಗಳನ್ನು ಹೊಂದಿರುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಿ. ಇಲ್ಲಿದೆ ಮಾಹಿತಿ,
ಪ್ರಪಂಚದಿಂದ ಹೊರಗುಳಿದ ಅನುಭವ: ಬಹುವ್ಯಕ್ತಿತ್ವ ಅಸ್ವಸ್ಥತೆಯನ್ನು ಹೊಂದಿರುವ ವ್ಯಕ್ತಿಗಳು ಪ್ರಪಂಚದಿಂದ ಹೊರಗುಳಿದಂತೆ ಯೋಚಿಸುತ್ತಾರೆ. ತಮ್ಮ ಸುತ್ತಮುತ್ತಲು ಏನಾಗುತ್ತಿದೆ ಎನ್ನುವುದನ್ನು ಮರೆತು ತಮ್ಮದೇ ದೃಷ್ಟಿಕೋನದಲ್ಲಿ ಯೋಚಿಸುತ್ತಾರೆ. ಸದಾ ಕಾಲ ಯೋಚನೆ, ಸುತ್ತಮುತ್ತಲಿನ ಪ್ರಪಂಚದಿಂದ ದೂರವುಳಿಯಲು ಬಯಸುತ್ತಾರೆ. ಇದು ಅಸ್ವಸ್ಥತೆಯನ್ನು ಹೊಂದಿರುವವರಲ್ಲಿ ಕಾಣಿಸಿಕೊಳ್ಳುವ ಮೊದಲ ಲಕ್ಷಣವಾಗಿದೆ.
ಒತ್ತಡದಿಂದ ಕುಗ್ಗುವುದು: ಮಾನಸಿಕ ಅನಾರೋಗ್ಯಕ್ಕೆ ಮೊದಲ ಕಾರಣ ಎಂದರೆ ಅದು ಒತ್ತಡ. ಕೆಲಸದ ಒತ್ತಡ, ಜೀವನದಲ್ಲಿ ಎದುರಾಗುವ ಸಮಸ್ಯೆಗಳ ಒತ್ತಡಗಳು ಹೀಗೇ ಒಂದೊಂದೆ ಬೆಸೆದು ಮನಸ್ಸು ಬಗ್ಗಡವಾಗುತ್ತದೆ. ಇದರಿಂದ ಬಹುವ್ಯಕ್ತಿತ್ವ ಅಸ್ವಸ್ಥತೆ ಕಾಡುತ್ತದೆ. ಆದ್ದರಿಂದ ಅತಿ ಹೆಚ್ಚು ಒತ್ತಡದಿಂದ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು ವರ್ತಿಸುವುದು ಕೂಡ ಈ ರೀತಿಯ ಸಮಸ್ಯೆ ಉಂಟಾಗಲು ಕಾರಣವಾಗುತ್ತದೆ.
ಅತಿಯಾದ ಯೋಚನೆ: ಮಾನಸಿಕವಾಗಿ ಕುಗ್ಗಿದಾಗ ಬೇಡದ ಆಲೋಚನೆಗಳೇ ಹೆಚ್ಚು ಒಳನುಸುಳುತ್ತವೆ. ಮಾನಸಿಕ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು ಅದರಲ್ಲಿಯೂ ಬಹುವ್ಯಕ್ತಿತ್ವವನ್ನು ಹೊಂದಿರುವ ಜನರು ಸದಾ ಕಾಲ ನಕಾರಾತ್ಮಕ ಯೋಚನೆಗಳನ್ನು ಹೊಂದಿರುತ್ತಾರೆ.
ಭಯ: ಬಹುವ್ಯಕ್ತಿತ್ವ ಮಾನಸಿಕ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳಲ್ಲಿ ಅವ್ಯಕ್ತ ಭಯ ಕಾಡುತ್ತದೆ. ಪ್ರತೀ ಕೆಲಸದಲ್ಲಿ ಹೇಳಿಕೊಳ್ಳಲಾಗದ ಭಯ ಆವರಿಸುತ್ತದೆ. ಅಂತಹ ವ್ಯಕ್ತಿಗಳು ಒಂಟಿಯಾಗಿರಲು ಭಯ ಪಡುತ್ತಾರೆ, ಕತ್ತಲೆ ನೀರು ಹೀಗೆ ಸಣ್ಣ ವಿಚಾರಗಳಿಗೂ ಹೆಚ್ಚು ಭಯಗೊಳ್ಳುತ್ತಾರೆ. ಇದು ಬಹುವ್ಯಕ್ತಿತ್ವ ಮಾನಸಿಕ ಅಸ್ವಸ್ಥತೆಯ ತೀವ್ರವಾದ ಹಂತವಾಗಿದೆ. ಹೀಗಾಗಿ ಆರಂಭದಲ್ಲಿಯೇ ವ್ಯದ್ಯರನ್ನು ಸಂಪರ್ಕಿಸುವುದು ಒಳಿತು ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ: