ವಿಮಾನದಲ್ಲಿ ಹೃದಯಾಘಾತಕ್ಕೊಳಗಾದ ಯುವತಿಯನ್ನು ಕಾಪಾಡಿದ ವೈದ್ಯ ದಂಪತಿ; ಸಿಪಿಆರ್​ ಬಗ್ಗೆ ತಿಳಿಯಲೇಬೇಕಾದ ಮಾಹಿತಿಯಿದು

ವಿಮಾನದಲ್ಲಿ ಹೃದಯಾಘಾತಕ್ಕೊಳಗಾದ ಯುವತಿಯನ್ನು ಕಾಪಾಡಿದ ವೈದ್ಯ ದಂಪತಿ; ಸಿಪಿಆರ್​ ಬಗ್ಗೆ ತಿಳಿಯಲೇಬೇಕಾದ ಮಾಹಿತಿಯಿದು
ಸಾಂದರ್ಭಿಕ ಚಿತ್ರ

ಯುಪಿಎಂಸಿಯಲ್ಲಿ ಕಾರ್ಡಿಯಾಕ್ ಎಲೆಕ್ಟ್ರೋಫಿಸಿಯಾಲಜಿಯ ನಿರ್ದೇಶಕರಾದ ಕಾಶಿಫ್ ಎನ್ ಚೌಧರಿ ಅವರು ಇತ್ತೀಚೆಗೆ ಸರಣಿ ಟ್ವೀಟ್‌ಗಳಲ್ಲಿ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಾಗ ಮಾರ್ಗಮಧ್ಯೆ ಉಂಟಾದ ಹಾರ್ಟ್​ ಅಟ್ಯಾಕ್​ನ ಸಂದರ್ಭದ ಬಗ್ಗೆ ಕುತೂಹಲದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

TV9kannada Web Team

| Edited By: Sushma Chakre

Mar 05, 2022 | 6:49 PM

ವಿಮಾನದಲ್ಲಿ ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ಹೃದಯಾಘಾತವಾದರೆ (Heart Attack) ಆಗಿನ ಪರಿಸ್ಥಿತಿ ಹೇಗಿರಬಹುದು? ಎಂದು ಊಹಿಸಿಕೊಂಡರೆ ಭಯ ಹೆಚ್ಚಾಗುತ್ತದೆ. ಈಗಂತೂ ಹಾರ್ಟ್​ ಅಟ್ಯಾಕ್​ ಬಹಳ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಮಕ್ಕಳು, ಯುವಕರಲ್ಲಿ ಕೂಡ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಮೊದಲೆಲ್ಲ ಮಧ್ಯವಯಸ್ಸು ದಾಟಿದ ನಂತರ ಕಾಣಿಸಿಕೊಳ್ಳುತ್ತಿದ್ದ ಹೃದಯಾಘಾತಕ್ಕೆ ಇದೀಗ ಯುವಕರೇ ಹೆಚ್ಚು ಬಲಿಯಾಗುತ್ತಿದ್ದಾರೆ. ವಿಮಾನದಲ್ಲಿ ಹೋಗುವಾಗ ಪೈಲಟ್​ ಒಬ್ಬರಿಗೆ ಹೃದಯಾಘಾತ ಉಂಟಾದ ಬಗ್ಗೆ ಕೆಲವು ತಿಂಗಳ ಹಿಂದೆ ವರದಿಯಾಗಿತ್ತು. ಅದೃಷ್ಟವಶಾತ್ ಆ ದಿನ ವಿಮಾನದಲ್ಲಿ ವೈದ್ಯರು ಕೂಡ ಪ್ರಯಾಣ ಮಾಡುತ್ತಿದ್ದುದರಿಂದ ಅವರು ಆ ಪೈಲಟ್​​ಗೆ ತುರ್ತು ಚಿಕಿತ್ಸೆ ನೀಡಿದ್ದರಿಂದ ಆ ಪೈಲಟ್​ ಪ್ರಾಣಾಪಾಯದಿಂದ ಪಾರಾದರು. ಕೇವಲ ವೈದ್ಯರಿಗೆ ಮಾತ್ರವಲ್ಲ ನಿಮಗೂ ಇಂತಹ ತುರ್ತು ಸಂದರ್ಭದಲ್ಲಿ ಹೇಗೆ ಸಿಪಿಆರ್​ ಮಾಡಬೇಕು ಎಂಬುದು ತಿಳಿದಿದ್ದರೆ ನೀವು ಕೂಡ ಆಪತ್ತಿನಲ್ಲಿರುವ ಜೀವವೊಂದನ್ನು ಉಳಿಸಬಹುದು.

ಯುಪಿಎಂಸಿಯಲ್ಲಿ ಕಾರ್ಡಿಯಾಕ್ ಎಲೆಕ್ಟ್ರೋಫಿಸಿಯಾಲಜಿಯ ನಿರ್ದೇಶಕರಾದ ಕಾಶಿಫ್ ಎನ್ ಚೌಧರಿ ಅವರು ಇತ್ತೀಚೆಗೆ ಸರಣಿ ಟ್ವೀಟ್‌ಗಳಲ್ಲಿ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಾಗ ಮಾರ್ಗಮಧ್ಯೆ ಉಂಟಾದ ಹಾರ್ಟ್​ ಅಟ್ಯಾಕ್​ನ ಸಂದರ್ಭದ ಬಗ್ಗೆ ಕುತೂಹಲದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಫೀನಿಕ್ಸ್‌ಗೆ ಅವರು ವಿಮಾನದಲ್ಲಿ ಹೋಗುತ್ತಿದ್ದಾಗ ಆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 20 ವರ್ಷದ ಯುವತಿಯೊಬ್ಬಳಿಗೆ ಹೃದಯ ಸ್ತಂಭನ ಉಂಟಾಗಿತ್ತು. ಆಗ ಆಕೆಗೆ ಸರಿಯಾದ ಸಮಯದಲ್ಲಿ CPR ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆ ಸಿಕ್ಕಿದ್ದರಿಂದ ಆಕೆ ಕೂದಲೆಳೆ ಅಂತರದಲ್ಲಿ ಬದುಕುಳಿದಳು ಎಂದು ವಿವರಿಸಿದ್ದಾರೆ.

ವಿಮಾನದಲ್ಲಿ 20 ವರ್ಷದ ಯುವತಿಯೊಬ್ಬಳು ಕುಸಿದು ಬಿದ್ದಿದ್ದಾಳೆ ಎಂಬ ವಿಷಯ ತಿಳಿಯುತ್ತಿದ್ದಂತೆ ನಾನು ಕೂಡಲೇ ಆಕೆಯ ಸೀಟಿನ ಬಳಿ ಓಡಿದೆ. ಆಕೆ ಕೆಳಗೆ ಬಿದ್ದಿದ್ದಳು, ಆಕೆಯ ಕಣ್ಣುಗಳು ಮೇಲಕ್ಕೆ ಹೋಗಿತ್ತು. ನಾನು ಅವಳ ಕ್ಯಾರೋಟಿಡ್ ಮತ್ತು ರೇಡಿಯಲ್ ಪಲ್ಸ್​ಗಳನ್ನು ಪರಿಶೀಲಿಸಿದೆ. ಅವ್ಯಾವುದೂ ಗೊತ್ತಾಗಲಿಲ್ಲ. ತಕ್ಷಣ ನಾನು ಅಲ್ಲಿದ್ದ ಕೆಲವರಿಗೆ ಸೂಚನೆ ನೀಡಿ, ಅದರಂತೆ CPR ಪ್ರಾರಣಭಿಸಿದೆವು. ನನ್ನ ಹೆಂಡತಿ ನೈಲಾ ಶೆರೀನ್ ಮತ್ತು ಬೋರ್ಡ್‌ನಲ್ಲಿರುವ ಇನ್ನೊಬ್ಬ ಹೃದ್ರೋಗ ತಜ್ಞರು ಆಕೆಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಿದೆವು. ಅಷ್ಟರಲ್ಲಿ ವಿಮಾನದಲ್ಲಿದ್ದ ಇತರ ಹೃದ್ರೋಗ ತಜ್ಞರು ವಿಮಾನದ ಪ್ರಥಮ ಚಿಕಿತ್ಸಾ ಕಿಟ್‌ನಿಂದ AED ತೆಗೆದುಕೊಂಡು ಬಂದರು. ಅದನ್ನು ಆ ರೋಗಿಗೆ ಹಾಕಲಾಯಿತು. ನನ್ನ ಹೆಂಡತಿ ನೈಲಾ ಆ ರೋಗಿಯ ಜೊತೆಗಿರುವ ಸ್ನೇಹಿತರಿಂದ ಆಕೆಗೆ ಸಂಬಂಧಿಸಿದ ಆರೋಗ್ಯದ ಹಿನ್ನಲೆಯನ್ನು ಸಂಗ್ರಹಿಸಿದರು ಮತ್ತು ಅವರೊಂದಿಗೆ ಮಾತುಕತೆ ನಡೆಸಿದರು. ಅದೃಷ್ಟವಶಾತ್, 90 ಸೆಕೆಂಡುಗಳ CPR ನಂತರ, ನಮಗೆ ಆ ರೋಗಿಯು ನಾಡಿಮಿಡಿತ ಸಿಕ್ಕಿತು. ಆಕೆ ಜೋರಾಗಿ ಉಸಿರಾಡಲು ಪ್ರಾರಮಭಿಸಿದ್ದಳು. ನಾವು ತುರ್ತಾಗಿ ಆಕೆಗೆ ಚಿಕಿತ್ಸೆ ನೀಡಿದ್ದರಿಂದ 10 ನಿಮಿಷಗಳಲ್ಲಿ ಅವಳು ಎದ್ದು ಕುಳಿತುಕೊಳ್ಳಲು ಸಾಧ್ಯವಾಯಿತು. ನಂತರ ಆಕೆಯನ್ನು ಸೀಟಿನಲ್ಲಿ ಕೂರಿಸಿ, ನಾವು ನಮ್ಮ ಸೀಟಿಗೆ ವಾಪಾಸಾದೆವು. ಇದೆಲ್ಲ ಆಗಿದ್ದು ಭೂಮಿಯಿಂದ 35,000 ಅಡಿ ಎತ್ತರದಲ್ಲಿ ವಿಮಾನದಲ್ಲಿ ಹೋಗುತ್ತಿದ್ದಾಗ. ಆ ದಿನ ಆ ವಿಮಾನದಲ್ಲಿ ಯಾರೂ ವೈದ್ಯರು ಇರದಿದ್ದರೆ ಆಕೆಯ ಪ್ರಾಣ ಉಳಿಯುವ ಸಾಧ್ಯತೆಗಳು ಇರಲಿಲ್ಲ ಎಂದು ಅವರು ಸರಣಿ ಟ್ವೀಟ್​ಗಳಲ್ಲಿ ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಆ ರೋಗಿಗೆ ತುರ್ತು ಚಿಕಿತ್ಸೆ ನೀಡಿದ ಬಳಿಕ ವಿಮಾನವನ್ನು ಹತ್ತಿರದ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು. ವಿಮಾನದಿಂದ ಇಳಿಯುವಷ್ಟರಲ್ಲಿ ಆ ಯುವತಿ ಚೇತರಿಸಿಕೊಂಡಿದ್ದಳು. ನಂತರ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಟ್ವೀಟ್ ಮಾಡಿರುವ ಕಾಶಿಫ್ ಚೌಧರಿ, ನಾವು ಮಾಡಿದಂತೆ ನೀವು ಕೂಡ ಇಂತಹ ತುರ್ತು ಸಂದರ್ಭದಲ್ಲಿ ಸಿಪಿಆರ್​ ಮಾಡಬಹುದು. ಸಮಯಕ್ಕೆ ಸರಿಯಾಗಿ CPR ಮಾಡಿದರೆ ರೋಗಿಯನ್ನು ಸಾವಿನ ದವಡೆಯಿಂದ ಪಾರು ಮಾಡಬಹುದು ಎಂದು ಟ್ವೀಟ್ ಮಾಡಿದ್ದಾರೆ.

ಮೆಡಿಕಲ್ ನ್ಯೂಸ್ ಟುಡೇ ಪ್ರಕಾರ, CPR ಅನ್ನು ನಿರ್ವಹಿಸುವ ಹಂತಗಳು ಇಲ್ಲಿವೆ:

1. 911ಗೆ ಕರೆ ಮಾಡಿ ಅಥವಾ ಬೇರೆಯವರನ್ನು ಕೇಳಿ

2. ವ್ಯಕ್ತಿಯನ್ನು ಅವರ ಬೆನ್ನಿನ ಮೇಲೆ ಮಲಗಿಸಿ ಮತ್ತು ಅವರ ದೇಹಕ್ಕೆ ಗಾಳಿ ಹೋಗುವಂತೆ ಮಾಡಿ. ಅವರ ಬಟ್ಟೆಯನ್ನು ಸಡಿಲಗೊಳಿಸಿ.

3. ಅವರು ಉಸಿರಾಡದಿದ್ದರೆ CPR ಅನ್ನು ಪ್ರಾರಂಭಿಸಿ

4. ಎದೆಯನ್ನು ಜೋರಾಗಿ ಒತ್ತಿ

6. ಆಂಬ್ಯುಲೆನ್ಸ್ ಅಥವಾ AED ಬರುವವರೆಗೆ ಪುನರಾವರ್ತಿಸಿ

ಇದನ್ನೂ ಓದಿ: Health Tips: ವರ್ಕ್​ಔಟ್ ಮಾಡುವಾಗ ಎಷ್ಟು ಲೀಟರ್ ನೀರು ಕುಡಿಯಬೇಕು?; ಸರಿಯಾಗಿ ನೀರು ಕುಡಿಯದಿದ್ದರೆ ಏನಾಗುತ್ತದೆ?

Heart Attack: ಹೃದಯಾಘಾತದ ಸಾಮಾನ್ಯ ಲಕ್ಷಣಗಳಾವುವು? ತಿಳಿಯಲೇಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ

Follow us on

Related Stories

Most Read Stories

Click on your DTH Provider to Add TV9 Kannada