Health Tips: ವರ್ಕ್ಔಟ್ ಮಾಡುವಾಗ ಎಷ್ಟು ಲೀಟರ್ ನೀರು ಕುಡಿಯಬೇಕು?; ಸರಿಯಾಗಿ ನೀರು ಕುಡಿಯದಿದ್ದರೆ ಏನಾಗುತ್ತದೆ?
Workout Tips: ನೀರಿನ ಸೇವನೆಯ ಬಗ್ಗೆ ಗಮನ ಹರಿಸದೆ ನೀವು ಕೆಲಸ ಮಾಡುತ್ತಲೇ ಇದ್ದರೆ ದಣಿವು, ತಲೆ ತಿರುಗುವಿಕೆ, ಗಂಟಲು ಒಣಗುವುದು ಮತ್ತು ತುಟಿಗಳು ಒಣಗುವುದು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ನೀವು ಜಿಮ್ಗೆ ಹೋಗುವವರಾದರೆ, ಜಾಗಿಂಗ್, ವ್ಯಾಯಾಮ ಮಾಡುವವರಾದರೆ ನಿಮ್ಮ ದೇಹಕ್ಕೆ ಬೇರೆಯವರಿಗಿಂತಲೂ ಹೆಚ್ಚಿನ ನೀರು ಬೇಕು. ವರ್ಕ್ಔಟ್ (Workout) ಅಥವಾ ವ್ಯಾಯಾಮ ಮಾಡುವಾಗ ನಿಮ್ಮ ದೇಹ ಹೆಚ್ಚು ಬೆವರುವುದರಿಂದ ಹೆಚ್ಚು ನೀರು ಕುಡಿದಷ್ಟೂ ನಿಮ್ಮ ಶರೀರದಲ್ಲಿ ತೇವಾಂಶ ಹೆಚ್ಚಾಗುತ್ತದೆ. ಇಲ್ಲವಾದರೆ ಡಿಹೈಡ್ರೇಷನ್ (De-hydration) ಆಗುತ್ತದೆ. ಹೀಗಾಗಿ, ನೀರು ಕುಡಿಯುವುದನ್ನು ಎಂದಿಗೂ ನಿರ್ಲಕ್ಷಿಸಬಾರದು. ದೇಹಕ್ಕೆ ಸರಿಯಾದ ಪ್ರಮಾಣದ ನೀರಿನ ಪೂರೈಕೆಯಿಲ್ಲದೆ ವರ್ಕ್ಔಟ್ ಅವಧಿಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯವು ಕಾಲಾನಂತರದಲ್ಲಿ ಕ್ಷೀಣಿಸಬಹುದು.
ಹೈಡ್ರೇಷನ್ ದೈಹಿಕ ಮತ್ತು ಮಾನಸಿಕ ಕಾರ್ಯಕ್ಷಮತೆ ಎರಡರ ಮೇಲೂ ಆಳವಾದ ಪರಿಣಾಮಗಳನ್ನು ಬೀರುತ್ತದೆ. PubMed.gov ಲೇಖನದ ಪ್ರಕಾರ ಅಧಿಕ ಹೈಡ್ರೇಷನ್ ಮತ್ತು ಅಂಡರ್‌ಹೈಡ್ರೇಶನ್ ಎರಡೂ ಹೆಚ್ಚಾದರೆ ಜನರ ದೇಹದ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ ಮತ್ತು ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ. ನೀವು ಸಾಕಷ್ಟು ನೀರಿನ ಅಂಶವನ್ನು ಸೇವಿಸುತ್ತಿಲ್ಲ ಎಂಬುದರ ಸಂಕೇತಗಳು ಯಾವುವು? ನೀರಿನ ಸೇವನೆಯ ಬಗ್ಗೆ ಗಮನ ಹರಿಸದೆ ನೀವು ಕೆಲಸ ಮಾಡುತ್ತಲೇ ಇದ್ದರೆ ದಣಿವು, ತಲೆ ತಿರುಗುವಿಕೆ, ಗಂಟಲು ಒಣಗುವುದು ಮತ್ತು ತುಟಿಗಳು ಒಣಗುವುದು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಕೆಲಸ ಮಾಡುವಾಗ ನಮ್ಮ ದೇಹ ಸಾಕಷ್ಟು ಬೆವರಿನ ಮೂಲಕ ನೀರು ಮತ್ತು ಲವಣಾಂಶವನ್ನು ಕಳೆದುಕೊಳ್ಳುತ್ತದೆ. ಇದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಆದ್ದರಿಂದ ನೀವು ಪ್ರತಿದಿನ ವ್ಯಾಯಾಮ ಮಾಡುತ್ತಿದ್ದರೆ, ನೀವು ವರ್ಕ್ಔಟ್ ಸಮಯದಲ್ಲಿ ನಿಜವಾಗಿಯೂ ಎಷ್ಟು ನೀರನ್ನು ಕುಡಿಯಬೇಕು ಎಂಬುದನ್ನು ನೀವು ತಿಳಿದಿರಬೇಕು ಎಂದು ಫಿಟ್ ಇಂಡಿಯಾ ಮೂವ್‌ಮೆಂಟ್ ರಾಯಭಾರಿ ಮತ್ತು Pmftraining ಸಂಸ್ಥಾಪಕ ಮುಕುಲ್ ನಾಗ್ಪಾಲ್ ಹೇಳಿದ್ದಾರೆ.
ಹಾರ್ವರ್ಡ್ ಹೆಲ್ತ್ ಪ್ರಕಾರ, ಹೆಚ್ಚಿನ ಜನರು ಸೇವಿಸಲು ದಿನಕ್ಕೆ ನಾಲ್ಕರಿಂದ ಆರು ಕಪ್ ದ್ರವಾಂಶವನ್ನು ಸೇವಿಸಲು ಶಿಫಾರಸು ಮಾಡಲಾಗುತ್ತದೆ. ವ್ಯಾಯಾಮ ಮಾಡುವಾಗ ಹೆಚ್ಚು ನೀರು ಕುಡಿಯಲು ಶಿಫಾರಸು ಮಾಡುತ್ತದೆ. ಅದರ ಅನ್ವಯ,
– ನೀವು ವರ್ಕ್ಔಟ್ ಮಾಡುವುದಕ್ಕೂ 2ರಿಂದ 3 ಗಂಟೆ ಮೊದಲು 500ರಿಂದ 600 ಮಿ.ಲೀ. ನೀರು ಕುಡಿಯಬೇಕು. – ನಿಮ್ಮ ವರ್ಕ್ಔಟ್ ಪ್ರಾರಂಭಿಸುವ ಮೊದಲು 20ರಿಂದ 30 ನಿಮಿಷ ಮೊದಲು 230 ಮಿ.ಲೀ. ನೀರು ಕುಡಿಯಬೇಕು. – ವರ್ಕ್ ಔಟ್ ಶುರು ಮಾಡುವ ಪ್ರತಿ 10ರಿಂದ 20 ನಿಮಿಷಗಳ ಮೊದಲು 300 ಮಿ.ಲೀ. ನೀರು ಕುಡಿಯಬೇಕು. – ವರ್ಕ್ಔಟ್ ಆದ ನಂತರ 230 ಮಿ.ಲೀ. ನೀರು ಕುಡಿಯಬೇಕು.
ನಿಮ್ಮ ದೇಹದ ತೂಕ, ಲಿಂಗ, ಟೆಂಪರೇಚರ್, ನೀವು ಹೇಗೆ ಉಸಿರಾಡುತ್ತೀರಿ ಮತ್ತು ಬೆವರು ಮಾಡುತ್ತೀರಿ ಎಂಬುದಕ್ಕೆ ಅನುಗುಣವಾಗಿ ನೀರಿನ ಸೇವನೆಯು ಭಿನ್ನವಾಗಿರುತ್ತದೆ. ನೀವು ವರ್ಕ್ಔಟ್ ಮಾಡುವಾಗ ಎಷ್ಟು ನೀರು ಕುಡಿಯಬೇಕು ಎಂಬ ಬಗ್ಗೆ ನಿಮ್ಮ ವೈದ್ಯರೊಂದಿಗೆ ಮಾತನಾಡಿ. ಅವರ ಸಲಹೆಯಂತೆ ನಿಮ್ಮ ದೇಹಕ್ಕೆ ಅನುಗುಣವಾಗಿ ನೀರು ಸೇವಿಸುವುದನ್ನು ಮರೆಯಬೇಡಿ. ನೀರು ಕುಡಿಯಲು ಸಾಧ್ಯವಾಗದಿದ್ದರೆ ಜ್ಯೂಸ್, ಎಳನೀರು, ಮಜ್ಜಿಗೆಯಂತಹ ದ್ರವ ಪದಾರ್ಥವನ್ನು ಸೇವಿಸಬಹುದು.
ಇದನ್ನೂ ಓದಿ: Weight Loss: ತೂಕ ಇಳಿಸಿಕೊಳ್ಳಲು ಜಿಮ್ನಲ್ಲಿ ಗಂಟೆಗಟ್ಟಲೆ ವರ್ಕ್ಔಟ್ ಮಾಡೋ ಬದಲು ಹೀಗೆ ಮಾಡಿ ನೋಡಿ
Weight Loss: ಸುಖವಾದ ನಿದ್ರೆಯಿಂದಲೂ ತೂಕ ಇಳಿಸಿಕೊಳ್ಳಬಹುದೆಂದು ನಿಮಗೆ ಗೊತ್ತಾ?