ಈ ಕಾರಣಕ್ಕೆ ನೀವು ಪ್ರತಿದಿನ ಮರ ಸೇಬು ಹಣ್ಣನ್ನು ಸೇವಿಸಬೇಕು
ಒಂದು ಮರ ಸೇಬು ಹಣ್ಣಿನಲ್ಲಿ ಸರಿಸುಮಾರು 22 ಗ್ರಾಂನಷ್ಟು ಫೈಬರ್ ಅಂಶವಿರುತ್ತದೆ. ಹೀಗಾಗಿ ನಿಮ್ಮ ದೇಹಕ್ಕೆ ಮರ ಸೇಬು ಹಣ್ಣು ಅತೀ ಅಗತ್ಯವಾದ ಹಣ್ಣು ಎಂದು ಹೇಳಬಹುದು.
ದೇಹದ ಆರೋಗ್ಯ ಉತ್ತಮವಾಗಲು ಹಣ್ಣುಗಳು ಪ್ರಮುಖ ಪಾತ್ರವಹಿಸುತ್ತವೆ. ಸಮೃದ್ಧವಾದ ಪೌಷ್ಟಿಕಾಂಶ ಮತ್ತು ದೇಹಕ್ಕೆ ಬೇಕಾದ ಪ್ರೋಟೀನ್ ಅಂಶಗಳನ್ನು ನೀಡುತ್ತವೆ. ಅಂತಹ ಹಣ್ಣುಗಳಲ್ಲಿ ಮರ ಸೇಬು ಹಣ್ಣು ಕೂಡ ಒಂದು. ಸುಲಭವಾಗಿ ಸಿಗುವ ಮರ ಸೇಬು ಹಣ್ಣುಗಳಲ್ಲಿ ಯಥೇಚ್ಛವಾದ ಫೈಬರ್ ಅಂಶ ಅಡಕವಾಗಿದೆ. ಅದೇ ರೀತಿ ಕೊಕೋ ಮತ್ತು ಸೇಬುಹಣ್ಣುಗಳಲ್ಲಿರುವ ಕ್ಯಾಟೆಷಿನ್ಗಳು ಮರ ಸೇಬು ಹಣ್ಣಿನಲ್ಲಿವೆ. ಇವು ದೇಹವನ್ನು ಸುರಕ್ಷಿತವಾಗಿಡುತ್ತವೆ. ಇನ್ನೂ ಮುಖ್ಯವಾಗಿ ದೇಹದ ತೂಕ ಇಳಿಕೆಗೆ ಇದು ಸಹಾಯಕ ಏಕೆಂದರೆ ಮರ ಸೇಬು ಹಣ್ಣಿನಲ್ಲಿ ಕಡಿಮೆ ಕ್ಯಾಲೋರಿ ಅಂಶವಿದೆ. ಹೀಗಾಗಿ ಡಯೆಟ್ ಆಹಾರಕ್ಕೆ ಇದು ಅತಿ ಮುಖ್ಯವಾಗಿದೆ. ಮರ ಸೇಬುವಿನಲ್ಲಿ ಫೈಬರ್, ಕಾರ್ಬೋಹೈಡ್ರೇಟ್ಸ್, ವಿಟಮಿನ್ ಸಿ, ಮ್ಯಾಗ್ನಿಶಿಯಂ, ಪೊಟ್ಯಾಶಿಯಂ ಸೇರಿದಂತೆ ದೇಹಕ್ಕೆ ಅಗತ್ಯವಾದ ಅಂಶಗಳನ್ನು ಪೂರೈಸುತ್ತದೆ. ಮರ ಸೇಬುವಿನಿಂದ ಮತ್ತಿನ್ನಿನೇನು ಪ್ರಯೋಜನಗಳಿವೆ ಎಂದು ಇಲ್ಲಿದೆ ನೋಡಿ ಮಾಹಿತಿ.
ಕರುಳಿನ ಆರೋಗ್ಯ: ಮರ ಸೇಬು ಹಣ್ಣು ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಹೀಗಾಗಿ ಪ್ರತಿದಿನ ಒಂದುಮರ ಸೇಬು ಹಣ್ಣು ಸೇವಿಸಿ. ಮರ ಸೇಬು ಹಣ್ಣು ಜೀರ್ಣ ಶಕ್ತಿಯನ್ನು ಉತ್ತಮಗೊಳಿಸುತ್ತದೆ. ಜತೆಗೆ ಇದರಲ್ಲಿನ ಫೈಬರ್ ಅಂಶಗಳು ಕರುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ, ಒಂದು ಮರ ಸೇಬು ಹಣ್ಣಿನಲ್ಲಿ ಸರಿಸುಮಾರು 22 ಗ್ರಾಂನಷ್ಟು ಫೈಬರ್ ಅಂಶವಿರುತ್ತದೆ. ಹೀಗಾಗಿ ನಿಮ್ಮ ದೇಹಕ್ಕೆ ಮರ ಸೇಬು ಹಣ್ಣು ಅತೀ ಅಗತ್ಯವಾದ ಹಣ್ಣು ಎಂದು ಹೇಳಬಹುದು.
ಹಸಿವೆಯನ್ನು ನಿಯಂತ್ರಿಸುತ್ತದೆ: ಫೈಬರ್ ಅಂಶಗಳನ್ನು ಹೊಂದಿರುವ ಮರ ಸೇಬು ಹಣ್ಣು ಹಸಿವೆಯನ್ನು ನಿಯಂತ್ರಿಸುತ್ತದೆ. ಇದೇ ಕಾರಣದಿಂದ ಡಯೆಟ್ಗೂ ಕೂಡ ಮರ ಸೇಬುಅತ್ಯುತ್ತಮ ಆಹಾರವಾಗಿದೆ. ಮಧುಮೇಹಿಗಳಿಗೂ ಉತ್ತಮ ಆಹಾರವಾಗಿರುವ ಮರ ಸೇಬು ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ.
ಹೃದಯದ ಆರೋಗ್ಯ: ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರಕಾರ ಫಯಬರ್ ಅಂಶವುಳ್ಳ ಆಹಾರ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲಿ ಮರ ಸೇಬು ಹಣ್ಣು ಕೂಡ ಒಂದು. ಹೀಗಾಗಿ ಪ್ರತಿದಿನ ಮರ ಸೇಬು ಹಣ್ಣು ಸೇವಿಸುವುದರಿಂದ ನಿಮ್ಮ ಹೃದಯದ ಆರೋಗ್ಯವೂ ಉತ್ತಮವಾಗಿರುತ್ತದೆ. ಇದೇ ಕಾರಣದಿಂದ ದಿನಕ್ಕೊಂದು ಮರ ಸೇಬು ನಿಮ್ಮ ಡಯೆಟ್ ಪಟ್ಟಿಯಲ್ಲಿರಲಿ.
ಫ್ರೀ ರಾಡಿಕಲ್ಸ್ಗಳ ತಡೆ: ಮಾನಸಿಕ ಒತ್ತಡವನ್ನು ಉಂಟುಮಾಡುವ ಫ್ರೀ ರಾಡಿಕಲ್ಸ್ಗಳನ್ನು ಮರ ಸೇಬು ಹಣ್ಣು ತಡೆಯುತ್ತದೆ. ಅಲ್ಲದೆ ಮರ ಸೇಬು ಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶಗಳು ಮಧುಮೇಹ, ಕೆಲವು ಬಗೆಯ ಕ್ಯಾನ್ಸರ್ಗಳು ಹಾಗೂ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯನ್ನು ತಡೆಯುತ್ತದೆ.
(ಇಲ್ಲಿರುವ ಮಾಹಿತಿ ಟಿವಿ9 ಡಿಜಿಟಲ್ನ ಅಭಿಪ್ರಾಯವಾಗಿರುವುದಿಲ್ಲ. ಟೈಮ್ಸ್ ನೌ ವರದಿ ಆದರಿಸಿ ಸಲಹೆಗಳನ್ನು ನೀಡಲಾಗಿದೆ)
ಇದನ್ನೂ ಓದಿ:
Curd: ರಾತ್ರಿ ವೇಳೆ ಮೊಸರು ತಿಂದರೆ ಏನಾಗುತ್ತದೆ?; ಆಯುರ್ವೇದ ತಜ್ಞರ ಸಲಹೆ ಹೀಗಿದೆ