Sign In

By signing in or creating an account, you agree with Associated Broadcasting Company's Terms & Conditions and Privacy Policy.

Women Health: ಅನಿಯಮಿತ ಮುಟ್ಟಿನ ಸಮಸ್ಯೆ ಎದಿರಿಸುತ್ತಿದ್ದೀರಾ? ಕಾರಣ ಏನು ತಿಳಿಯಿರಿ

ನಿಮಗೆ 28 ದಿನಗಳು ಮತ್ತು 30 ದಿನಗಳವರೆಗೆ ಮುಟ್ಟಾಗದಿದ್ದರೆ, ನಂತರ ಅದನ್ನು ನಿರ್ಲಕ್ಷಿಸಬೇಡಿ. ಆದರೆ ಈ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವೂ ಕೂಡ ಇಲ್ಲ. ಆದರೆ 40 ದಿನಗಳಿಗಿಂತ ಹೆಚ್ಚು ಅಂದರೆ ಕೊನೆಯ ಮುಟ್ಟಿನ ನಂತರ 6 ವಾರಗಳವರೆಗೆ ಮತ್ತೆ ಮುಟ್ಟಾಗದಿದ್ದರೆ, ಅದನ್ನು ತಡವಾದ ಮುಟ್ಟು ಅಥವಾ ಅನಿಯಮಿತ ಮುಟ್ಟು ಎಂದು ಪರಿಗಣಿಸಲಾಗುತ್ತದೆ.

Women Health: ಅನಿಯಮಿತ ಮುಟ್ಟಿನ ಸಮಸ್ಯೆ ಎದಿರಿಸುತ್ತಿದ್ದೀರಾ? ಕಾರಣ ಏನು ತಿಳಿಯಿರಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on: Feb 24, 2022 | 7:09 AM

ಮುಟ್ಟು ನೈಸರ್ಗಿಕ ಸಮಸ್ಯೆಯಾಗಿದ್ದು, ಇದು ಪ್ರತಿ ತಿಂಗಳು ಮಹಿಳೆಯರಿಗೆ ಸಂಭವಿಸುತ್ತದೆ. ಮುಟ್ಟಿನ(Periods) ಸಮಯದಲ್ಲಿ, ಮಹಿಳೆಯರು ಅನೇಕ ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಕೆಲವೊಮ್ಮೆ ಋತುಚಕ್ರ ವಿಳಂಬವಾಗುವುದು ಸಹ ಸಂಭವಿಸುತ್ತದೆ. ಇದನ್ನು ಸಾಮಾನ್ಯ ಸಮಸ್ಯೆ ಎಂದು ಪರಿಗಣಿಸಲಾಗುತ್ತದೆ. ಋತುಚಕ್ರದ(menstrual cycle) ವಿಳಂಬದ ಹಿಂದೆ, ಜೀವನಶೈಲಿಯಿಂದ(Lifestyle) ಹಿಡಿದು, ಇನ್ನಿತರ ಕಾಯಿಲೆಗಳ ಕಾರಣಗಳಿರಬಹುದು. ಸಾಮಾನ್ಯವಾಗಿ, ಋತುಚಕ್ರವು 21 ರಿಂದ 35 ದಿನಗಳವರೆಗೆ ಇರುತ್ತದೆ. ಈ ಚಕ್ರವು ಪ್ರತಿ ಮಹಿಳೆಗೆ ವಿಭಿನ್ನವಾಗಿರಬಹುದು. ಏಕೆಂದರೆ ಇದು ಕೆಲವು 28 ದಿನಗಳು, ಕೆಲವು 30 ಮತ್ತು ಕೆಲವು 35 ದಿನಗಳವರೆಗೆ ಸಂಭವಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮಗೆ 28 ದಿನಗಳು ಮತ್ತು 30 ದಿನಗಳವರೆಗೆ ಮುಟ್ಟಾಗದಿದ್ದರೆ, ನಂತರ ಅದನ್ನು ನಿರ್ಲಕ್ಷಿಸಬೇಡಿ. ಆದರೆ ಈ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವೂ ಕೂಡ ಇಲ್ಲ. ಆದರೆ 40 ದಿನಗಳಿಗಿಂತ ಹೆಚ್ಚು ಅಂದರೆ ಕೊನೆಯ ಮುಟ್ಟಿನ ನಂತರ 6 ವಾರಗಳವರೆಗೆ ಮತ್ತೆ ಮುಟ್ಟಾಗದಿದ್ದರೆ, ಅದನ್ನು ತಡವಾದ ಮುಟ್ಟು ಅಥವಾ ಅನಿಯಮಿತ ಮುಟ್ಟು ಎಂದು ಪರಿಗಣಿಸಲಾಗುತ್ತದೆ.

ಮುಟ್ಟಿನ ವಿಳಂಬಕ್ಕೆ ಕೆಲವು ಪ್ರಮುಖ ಕಾರಣಗಳು

ತೂಕ ಹೆಚ್ಚಿಸಿಕೊಳ್ಳುವುದು

ಮುಟ್ಟಿನ ವಿಳಂಬಕ್ಕೆ ತೂಕ ಹೆಚ್ಚಾಗುವುದು ಸಹ ಕಾರಣ ಎಂದು ನಂಬಲಾಗಿದೆ. ನಿಮ್ಮ ತೂಕ ಸ್ವಲ್ಪ ಹೆಚ್ಚಾದರೂ, ನಿಮ್ಮ ಋತುಚಕ್ರಕ್ಕೆ ತೊಂದರೆಗೊಳಗಾಗಬಹುದು. ತೂಕ ಹೆಚ್ಚಾಗುವುದು ಅಥವಾ ಹಾರ್ಮೋನ್ ಅಸಮತೋಲನದಿಂದಾಗಿ, ಮುಟ್ಟು ಹೆಚ್ಚಾಗಿ ತಪ್ಪಿಹೋಗುತ್ತವೆ. ಇದರೊಂದಿಗೆ ಹೆಚ್ಚು ಡಯಟ್ ಮಾಡಿದ್ದರೂ ಸಹ ಮಹಿಳೆಯರಿಗೆ ಋತುಚಕ್ರದ ಈ ಸಮಸ್ಯೆ ಉಂಟಾಗುತ್ತದೆ.

ಹೆಚ್ಚು ಒತ್ತಡವನ್ನು ತೆಗೆದುಕೊಳ್ಳುವುದು

ಒತ್ತಡವನ್ನು ತೆಗೆದುಕೊಳ್ಳುವುದರಿಂದ ದೇಹದಲ್ಲಿ ಹಲವಾರು ಇತರ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಮುಟ್ಟಿನ ಸಮಯದಲ್ಲಿ ನೀವು ಒತ್ತಡವನ್ನು ತೆಗೆದುಕೊಂಡಾಗ, ಅದು ಈ ವ್ಯವಸ್ಥೆಯಲ್ಲಿನ ಒತ್ತಡವನ್ನು ಸಮತೋಲನಗೊಳಿಸುವ ಹಾರ್ಮೋನುಗಳನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಮಹಿಳೆಯರ ಸಂತಾನೋತ್ಪತ್ತಿ ಹಾರ್ಮೋನುಗಳಿಗೆ ತೊಂದರೆಗೊಳಗಾಗುತ್ತವೆ. ನಿರಂತರ ಒತ್ತಡದಲ್ಲಿರುವ ಮಹಿಳೆಯರು ಮುಟ್ಟಿನ ಅವಧಿಯಲ್ಲಿ ಅಸಮತೋಲನ ಎದುರಿಸಬೇಕಾಗುತ್ತದೆ.

ಪಿಸಿಒಎಸ್​ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಅನ್ನು ತಡವಾಗಿ ಅಥವಾ ಅವಧಿಗೂ ಮುನ್ನ ಮುಟ್ಟಾಗುವುದರ ಸಾಮಾನ್ಯ ಕಾರಣವೆಂದು ಪರಿಗಣಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಮಹಿಳೆಯರಲ್ಲಿ ವೇಗವಾಗಿ ಹರಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಸಾಮಾನ್ಯವಾಗುತ್ತಿದೆ. ಈ ಸಮಸ್ಯೆ ಉಂಟಾದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಹೊಟ್ಟೆಯಲ್ಲಿ ಗಡ್ಡೆ ಅನೇಕ ಬಾರಿ ನೀವು ಯಾವುದೇ ಕಾರಣವಿಲ್ಲದೆ ಒಂದು ತಿಂಗಳು ಮುಟ್ಟಾಗದೆ ಇರಬಹುದು. ಇಂತಹ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಏಕೆಂದರೆ ಕೆಲವೊಮ್ಮೆ ಹೊಟ್ಟೆಯಲ್ಲಿ ಯಾವುದೇ ರೀತಿಯ ಗಡ್ಡೆ ಇದ್ದರೂ ಸಹ ಅನಿಯಮಿತ ಮುಟ್ಟಿನ ಸಮಸ್ಯೆ ಎದುರಿಸಬೇಕಾಗುತ್ತದೆ.

ಇದನ್ನೂ ಓದಿ:

ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ದಾಲ್ಚಿನ್ನಿ; ಇದನ್ನು ಆರೋಗ್ಯಕ್ಕೆ ಪೂರಕವಾಗಿ ಬಳಸುವ ಕ್ರಮ ಹೇಗೆ ಗೊತ್ತಾ?

ಮೂತ್ರ ವಿಸರ್ಜನೆಯನ್ನು ಹೆಚ್ಚು ಹೊತ್ತು ತಡೆಯುವುದರಿಂದಾಗುವ ಆರೋಗ್ಯ ಸಮಸ್ಯೆಗಳೇನು?

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!