Updated on:Mar 05, 2022 | 5:21 PM
ಅಸ್ತಮಾ ಸೇರಿದಂತೆ ಉಸಿರಾಟದ ಸಮಸ್ಯೆಗಳನ್ನು ನಿವಾರಿಸಲು ಮೆಣಸು ಕೂಡ ಉತ್ತಮ ಮಾರ್ಗವಾಗಿದೆ. ಒಂದು ಲೋಟ ಬಿಸಿನೀರಿನಲ್ಲಿ ಒಂದು ಚಮಚ ಕರಿಮೆಣಸಿನ ಪುಡಿ ಮತ್ತು ಎರಡು ಚಮಚ ಜೇನುತುಪ್ಪವನ್ನು ಸೇರಿಸಿ ಸೇವಿಸುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ.
ಮೆಣಸು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲದ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆ ಚೆನ್ನಾಗಿದ್ದರೆ ಮಲಬದ್ಧತೆ, ಅತಿಸಾರದಂತಹ ಸಮಸ್ಯೆಗಳಿಂದ ದೂರವಿರಬಹುದು.
ನಿಮ್ಮ ಹಲ್ಲುಗಳಲ್ಲಿ ಕುಳಿಗಳು ಅಥವಾ ನೋವು ಇದ್ದರೆ, ನೀವು ನಿಮ್ಮ ಬಾಯಿಯಲ್ಲಿ ಮೆಣಸು ಹಾಕಬಹುದು. ನೋವು ನಿವಾರಿಸಲು ಮೆಣಸು ಸಹಾಯ ಮಾಡುತ್ತದೆ.
ಚರ್ಮ ರೋಗಗಳ ಚಿಕಿತ್ಸೆಯಲ್ಲಿ ಮೆಣಸು ಉಪಯುಕ್ತವಾಗಿದೆ. ಕಾಳುಮೆಣಸಿನ ಪುಡಿಯನ್ನು ಸ್ಕ್ರಬ್ಬರ್ ಆಗಿ ಬಳಸಬಹುದು. ಇದು ಚರ್ಮದಿಂದ ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ.
Published On - 3:57 pm, Sat, 5 March 22