Updated on: Mar 05, 2022 | 3:05 PM
ಸಂಬಂಧದಲ್ಲಿ ಆಗಾಗ ತಪ್ಪು ಕಲ್ಪನೆಗಳು ಬರುವುದು ಸಹಜ. ಅಂತಹ ಸಂದರ್ಭಗಳಲ್ಲಿ ವಿಚ್ಛೇದನದಂತಹ ದುಡುಕು ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ಸರಿಪಡಿಸಿಕೊಳ್ಳುವುದನ್ನು ನೋಡಬೇಕು. ಅದಕ್ಕಾಗಿ ಹೀಗೆ ಮಾಡಿ.
ಸಂಬಂಧ ಹದಗೆಡುತ್ತಿದೆ ಎನ್ನುವುದು ನಿಮ್ಮ ಗಮನಕ್ಕೆ ಬಂದಾಗ ಸಂಗಾತಿಯೊಂದಿಗೆ ಕುಳಿತು ಮಾತನಾಡಿ. ಎಲ್ಲಿ ಯಾವ ವಿಷಯಕ್ಕೆ ತಪ್ಪು ಕಲ್ಪನೆ ಉಂಟಾಗಿದೆ ಎನ್ನುವುದನ್ನು ಮುಕ್ತವಾಗಿ ಮಾತನಾಡಿ. ಆಗ ಹಾಳಾಗುತ್ತಿರುವ ಸಂಬಂಧವನ್ನು ಸರಿಪಡಿಸಿಕೊಳ್ಳಬಹುದು.
ಕೆಲವೊಮ್ಮೆ ಸಣ್ಣ ವಿಷಯಗಳಿಂದ ಆರಂಭವಾಗುವ ಜಗಳ ಅತಿರೆಕಕ್ಕೆ ಹೋಗುತ್ತದೆ. ಅಂತಹ ಸಂದರ್ಭಗಳಲ್ಲಿ ಸಂಗಾತಿಗೆ ಎಚ್ಚರಿಕೆ ನೀಡಿ, ಪ್ರೀತಿ ಸೋಲುತ್ತಿದೆ ಎನ್ನುವುದನ್ನು ವಿವರಿಸಿ ಹೇಳಿ. ನಿಮ್ಮ ನಡುವಿನ ಅಂತರ ಕಾಯ್ದುಕೊಳ್ಳಿ.
ಸಂಗಾತಿಯ ಯಾವುದೇ ಕೆಲಸಗಳಿರಲಿ ಅದಕ್ಕೆ ಹೆಗಲಾಗಿ. ಜೊತೆಯಾಗಿ ಮಾಡೋಣ ಎನ್ನುವ ಭರವಸೆ ನೀಡಿ. ಆಗ ಅವರಲ್ಲಿ ಒಬ್ಬನೇ ಎಲ್ಲವನ್ನು ನಿರ್ವಹಿಸಿಬೇಕು ಎನ್ನುವ ಒತ್ತಡದ ಭಾವನೆ ಕಡಿಮೆಯಾಗುತ್ತದೆ.
ದೂಷಿಸುವುದನ್ನು ನಿಲ್ಲಿಸಿ. ಒಬ್ಬರಿಗೊಬ್ಬರು ದೂಷಣೆ ಮಾಡಿಕೊಳ್ಳುವುದರಿಂದ ಯಾವ ಸಮಸ್ಯೆಯುಬಗೆಹರಿಯುವುದಿಲ್ಲ. ಅದರ ಬದಲು ನಿಮ್ಮಲ್ಲೇ ನೀವು ಮಾತನಾಡಿಕೊಂಡು, ಆಡುವ ಮಾತುಗಳಲ್ಲಿ ಎಚ್ಚರವಹಿಸಿ.
ಕುಟುಂಬದೊಂದಿಗೆ ಬೆರೆಯಿರಿ. ಹೆಚ್ಚು ಮನೆಯ ಇತರ ಸದಸ್ಯರೊಂದಿಗೆ ಬೆರೆತಾಗ ನಿಮ್ಮ ಭಾವನೆಗಳು ಸಂಗಾತಿಗೆ ಅರ್ಥವಾಗುತ್ತದೆ. ಜತೆಗೆ ನಿಮ್ಮ ನಡುವಿನ ತಪ್ಪುಕಲ್ಪನೆಗಳೂ ಕೂಡ ತಿಳಿಯಾಗಿ, ಮನಸ್ಸು ಪ್ರೀತಿಯನ್ನು ಬಯಸುತ್ತದೆ.