ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನ ವರಿಷ್ಠರೇ ತೀರ್ಮಾನಿಸ್ತಾರೆ: ರಾಜ್ಯಾಧ್ಯಕ್ಷ ವಿಜಯೇಂದ್ರ‌

| Updated By: ಗಂಗಾಧರ​ ಬ. ಸಾಬೋಜಿ

Updated on: Feb 02, 2024 | 4:16 PM

ತುಮಕೂರಿನಲ್ಲಿ ಆಯೋಜಿಸಿದ್ದ ಶಕ್ತಿ ವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ‌, ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನ ವರಿಷ್ಠರೇ ತೀರ್ಮಾನಿಸುತ್ತಾರೆ. ಅಭ್ಯರ್ಥಿಗಳ ಹೆಸರು ವರಿಷ್ಠರು ಫೈನಲ್ ಮಾಡುತ್ತಾರೆ. ತುಮಕೂರು ಜಿಲ್ಲೆಯಲ್ಲಿ ಸೋಮಣ್ಣ ಸ್ಪರ್ಧಿಸುವುದಕ್ಕೆ ಯಾರ ವಿರೋಧವೂ ಇಲ್ಲ ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನ ವರಿಷ್ಠರೇ ತೀರ್ಮಾನಿಸ್ತಾರೆ: ರಾಜ್ಯಾಧ್ಯಕ್ಷ ವಿಜಯೇಂದ್ರ‌
BJP ರಾಜ್ಯಾಧ್ಯಕ್ಷ ವಿಜಯೇಂದ್ರ‌
Follow us on

ತುಮಕೂರು, ಫೆಬ್ರುವರಿ 2: ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನ ವರಿಷ್ಠರೇ ತೀರ್ಮಾನಿಸುತ್ತಾರೆ. ಅಭ್ಯರ್ಥಿಗಳ ಹೆಸರು ವರಿಷ್ಠರು ಫೈನಲ್ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ‌ (BY Vijayendra) ಹೇಳಿದ್ದಾರೆ. ನಗರದಲ್ಲಿ ಆಯೋಜಿಸಿದ್ದ ಶಕ್ತಿ ವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ 28 ಲೋಕಸಭಾ ಚುನಾವಣೆಯಲ್ಲಿ ಯಾರು ಸ್ಪರ್ಧೆ ಮಾಡಬೇಕೆಂದು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಕಳಿಸಲಾಗುತ್ತೆ ಎಂದಿದ್ದಾರೆ.

ಸೋಮಣ್ಣ ಸ್ಪರ್ಧಿಸುವುದಕ್ಕೆ ಯಾರ ವಿರೋಧವೂ ಇಲ್ಲ

ತುಮಕೂರು ಜಿಲ್ಲೆಯಲ್ಲಿ ಸೋಮಣ್ಣ ಸಂಚಾರ ವಿಚಾರವಾಗಿ ಮಾತನಾಡಿದ ಅವರು, ಕೇಂದ್ರದ ವರಿಷ್ಠರು ಒಪ್ಪಿಗೆ ಸೂಚಿಸಿದರೆ ನಮ್ಮದೇನು ಅಭ್ಯಂತರ ಇಲ್ಲ. ಸೋಮಣ್ಣ ಎಲ್ಲರಿಗಿಂತ ಹಿರಿಯರಿದ್ದಾರೆ. ಪಕ್ಷ ಒಗ್ಗಟ್ಟಾಗಿ ಎಲ್ಲಾ ತೀರ್ಮಾನ ಮಾಡುತ್ತದೆ. ತುಮಕೂರು ಲೋಕಸಭಾ ಕ್ಷೇತ್ರದಿಂದ ಸೋಮಣ್ಣ ಸ್ಪರ್ಧಿಸುವುದಕ್ಕೆ ಯಾರ ವಿರೋಧವೂ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಡಿಕೆ ಸುರೇಶ್ ವಿವಾದ: ವ್ಯಕ್ತಿಗತವಾಗಿ ಹೇಳಿರಬಹುದು, ಇದು ಕಾಂಗ್ರೆಸ್‌ ನಿರ್ಣಯವಲ್ಲ ಎಂದ ದೇವೇಗೌಡ

ಎಷ್ಟು ಮಹಿಳೆಯರಿಗೆ ಲೋಕಸಭಾ ಚುನಾವಣೆಯ ಟಿಕೆಟ್ ಸಿಗುತ್ತೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಬರುವ ದಿನಗಳಲ್ಲಿ ನಿಮ್ಮ ಪ್ರಶ್ನೆಗೆ ಉತ್ತರ ಸಿಗುತ್ತದೆ ಎಂದು ಸುಮ್ಮನಾದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ

ಬಡವರ ಜೊತೆಗೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಈ‌ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ 40% ಅಂತಾ ಹೇಳಿದ್ದರು. ಆದರೆ ಇಂದು ಕಾಂಗ್ರೆಸ್ ಮುಖಂಡ ಶಿವರಾಮ್​ರವರು ಆರೋಪಿಸಿದ್ದಾರೆ. ಕಾಂಗ್ರೆಸ್ ಸರ್ಕಾರವೇ 40 ಕಮಿಷನ್ ಪಡೆದಿದ್ದಾರೆ ಅಂತಾ ಆರೋಪಿಸಿದ್ದಾರೆ. ಅವರ ಪಕ್ಷದ ಮುಖಂಡರು ಆರೋಪಿಸಿದ್ದಾರೆ. ಹೀಗಾಗಿ ಜನರು ಅರ್ಥಮಾಡಿಕೊಂಡು ಕೆಲಸ ಮಾಡಬೇಕಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಬಡವರಿಗಾಗಿ ಮಹಿಳೆಯರಿಗೆ ರೈತರಿಗೆ ಯುವಕರಿಗೆ ಬಜೆಟ್ ಮಂಡಿಸಲಾಗಿದೆ. ದೇಶದಲ್ಲಿ ಇರುವ ನಾಲ್ಕು ಜಾತಿಗಳು, ಒಂದು ರೈತ, ಬಡವರು, ಮಹಿಳೆಯರು ಹಾಗೂ ಯುವಕರು ಇವರ ಸಹಕಾರದಿಂದ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಮೋದಿಯವರು ನಂಬಿಕೆ ಇಟ್ಟಿದ್ದಾರೆ. ಬಿಜೆಪಿ ಅಂದರೆ ಅಲ್ಪಸಂಖ್ಯಾತ ವಿರೋದಿಗಳು ಅಂತಾ ಕಾಂಗ್ರೆಸ್​ನವರು ಬಿಂಬಿಸುತ್ತಾರೆ. ಆದರೆ ಇಲ್ಲಿ‌ ಅಲ್ಪಸಂಖ್ಯಾತ ಮಹಿಳೆಯರು ಇದಾರೆ. ಹೀಗಾಗಿ ತ್ರಿಬಲ್ ತಲಾಕ್ ತೆಗೆದುಹಾಕಿ ಅಲ್ಪಸಂಖ್ಯಾತ ಮಹಿಳೆಯರಿಗೂ ನ್ಯಾಯ ಕೊಡಿಸುವ ಕೆಲಸ ಮೋದಿ ಮಾಡಿದ್ದಾರೆ ಎಂದರು.

ಭಾರತ ಅಭಿವೃದ್ಧಿ ಆಗಲು‌ ಮಹಿಳೆಯರ ಪಾತ್ರ ಬಹುಮುಖ್ಯ

ಚಿಂತನೆ ಜೊತೆಗೆ ಅನುಷ್ಠಾನ ಮಾಡುತ್ತಿರುವುದು ನಮ್ಮ ಪ್ರಧಾನ ಮಂತ್ರಿಯವರು. ಕೇಂದ್ರದಲ್ಲಿ ಸಾಕಷ್ಟು ಯೋಜನೆ ನೀಡಿದೆ‌. ಭಾರತ ಅಭಿವೃದ್ಧಿ ಆಗಲು‌ ಮಹಿಳೆಯರ ಪಾತ್ರ ಬಹುಮುಖ್ಯ. ಈ ತಿಂಗಳು 22 ಅಥವಾ 23 ರಂದು ಪ್ರಧಾನಿ ಮೋದಿಯವರು ಶಕ್ತಿ ವಂದನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಸಾಕಷ್ಟು ಸದ್ದು ಮಾಡುತ್ತಿದೆ. 200 ಯುನಿಟ್ ವಿದ್ಯುತ್ ಕೊಡುತ್ತೇವೆ ಅಂತಾ ರಾಜ್ಯ ಸರ್ಕಾರ ಹೇಳುತ್ತಿದ್ದಾರೆ. ರೈತರಿಗೆ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ಬೆಳೆಗಳಿಗೆ ವಿದ್ಯುತ್ ಸರಿಯಾಗಿ ಕೊಡುತ್ತಿಲ್ಲ.

ಇದನ್ನೂ ಓದಿ: ಇದು ಜನರ ಭಾವನೆ, ತಮ್ಮ ಪ್ರತ್ಯೇಕ ರಾಷ್ಟ್ರ ಹೇಳಿಕೆಗೆ ಸ್ಪಷ್ಟನೆ ನೀಡಿದ ಸಂಸದ ಡಿಕೆ ಸುರೇಶ್​​​

ರಾಜ್ಯದಲ್ಲಿ 500 ಕ್ಕೂ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ಸರಿಯಾಗಿ ವಿದ್ಯುತ್ ಕೊಡದೆ ಇರದಿದ್ದು. ಮಹಿಳೆಯರಿಗೆ ಉಚಿತ ಬಸ್ ಅಂತಾರೆ ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ 50% ಮಕ್ಕಳು ಶಾಲಾ ಕಾಲೇಜುಗಳಲ್ಲಿ ಹೋಗಲು ಆಗುತ್ತಿಲ್ಲ. ಮಹಿಳೆಯರಿಗೆ 2000 ಕೊಡುತ್ತಿದ್ದಾರೆ ಅಂದರು, ಪ್ರದಾನಿ ಹಾಗೂ ನಮ್ಮ ಯಡಿಯೂರಪ್ಪನವರು ಸಿಎಂ ಆದಾಗ ಕಿಸಾನ್ ಸಮ್ಮಾನ್ ಯೋಜನೆಯಡಿ 6 ಸಾವಿರ ರಾಜ್ಯ ಸರ್ಕಾರ 4 ಸಾವಿರ ಕೊಡ್ತಿದ್ದರು ಇದೆಲ್ಲಾ ಬಂದ್ ಆದವು.

ಮತ್ತೊಂದು ಕಡೆ ರಾಜ್ಯದಲ್ಲಿ ಮದ್ಯ ದರ ಹೆಚ್ಚಾಗಿದೆ, ಬೇರೆ ರಾಜ್ಯದಲ್ಲಿ ಇಷ್ಟೊಂದು ದರ ಇಲ್ಲ. ಇಲ್ಲಿ 2 ಸಾವಿರ ಕೊಟ್ಟು 4-5 ಸಾವಿರ ಖರ್ಚು ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಕೊಡುತ್ತಿರುವ ಗ್ಯಾರಂಟಿಗಳಿಂದ ನಮಗೆನು ಭಯ ಇಲ್ಲ. ನಮಗೆ ಮೋದಿಯವರ ಸಾಧನೆ, ಕೆಲಸ ಸಾಕು. ಈ ರಾಜ್ಯದಲ್ಲಿ 28 ಕ್ಕೆ 28 ಸ್ಥಾನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.