ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದ್ರಾ ಶಾಸಕ ಷಡಕ್ಷರಿ? ಕೆಲಸ ಕಳೆದುಕೊಂಡ ಬಡ ಚಾಲಕ

ತುಮಕೂರು ಜಿಲ್ಲೆ ತಿಪಟೂರಿನಲ್ಲಿ ಶಾಸಕ ಕೆ.ಷಡಕ್ಷರಿ ಅವರ ಆದೇಶದ ಮೇರೆಗೆ ಬಡ ಚಾಲಕ ಕೆಲಸ ಕಳೆದುಕೊಂಡಿದ್ದಾರೆ. ನನ್ನ ಪತ್ನಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯ್ತಿ ಸದಸ್ಯೆಯಾಗಿದ್ದಾರೆ. ರಾಜಕೀಯ ದುರುದ್ದೇಶದಿಂದ ನನ್ನ ಹೊಟ್ಟೆ ಮೇಲೆ ಹೊಡೆದಿದ್ದಾರೆ ಎಂದು ಚಾಲಕ ಕಣ್ಣೀರಿಟ್ಟಿದ್ದಾರೆ.

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದ್ರಾ ಶಾಸಕ ಷಡಕ್ಷರಿ? ಕೆಲಸ ಕಳೆದುಕೊಂಡ ಬಡ ಚಾಲಕ
ಕೆಲಸ ಕಳೆದುಕೊಂಡ ಚಾಲಕ ಸುರೇಶ್
Updated By: ಆಯೇಷಾ ಬಾನು

Updated on: Oct 22, 2023 | 10:34 AM

ತುಮಕೂರು, ಅ.22: ಕಳೆದ 9 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚಾಲಕ ಸುರೇಶ್ ಅವರನ್ನು ಶಾಸಕ ಕೆ.ಷಡಕ್ಷರಿ (MLA k Shadakshari) ಅವರ ಆದೇಶದ ಮೇರೆಗೆ ಕೆಲಸದಿಂದ ತೆಗೆದು ಹಾಕಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ತುಮಕೂರು ಜಿಲ್ಲೆ ತಿಪಟೂರಿನಲ್ಲಿ ಶಾಸಕ ಕೆ.ಷಡಕ್ಷರಿ ಅವರ ಆದೇಶದ ಮೇರೆಗೆ ಬಡ ಚಾಲಕ ಕೆಲಸ ಕಳೆದುಕೊಂಡಿದ್ದಾರೆ. ನನ್ನ ಪತ್ನಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯ್ತಿ ಸದಸ್ಯೆಯಾಗಿದ್ದಾರೆ. ರಾಜಕೀಯ ದುರುದ್ದೇಶದಿಂದ ನನ್ನ ಹೊಟ್ಟೆ ಮೇಲೆ ಹೊಡೆದಿದ್ದಾರೆ ಎಂದು ಚಾಲಕ ಕಣ್ಣೀರಿಟ್ಟಿದ್ದಾರೆ.

ಗುತ್ತಿಗೆ ನೌಕರ ಸುರೇಶ್ ಅವರು ಕೊನೆಹಳ್ಳಿ ಸರ್ಕಾರಿ ಪಶುಸಂಗೋಪನೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಳೆದ 9 ವರ್ಷಗಳಿಂದ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಆದರೆ ಈಗ ಕಾರಣವಿಲ್ಲದೆ ಏಕಾಏಕಿ ಚಾಲಕ ವೃತ್ತಿಯಿಂದ ತೆಗೆದುಹಾಕಲಾಗಿದೆ. ಶಾಸಕ ಕೆ.ಷಡಕ್ಷರಿ ಅವರ ಆದೇಶದ ಮೇರೆಗೆ ಪ್ರಾಂಶುಪಾಲರು ಗುತ್ತಿಗೆ ನೌಕರ ಸುರೇಶ್​ನನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಇದರಿಂದ ನೊಂದ ಚಾಲಕ ಸುರೇಶ್, ಶಾಸಕರನ್ನ ಭೇಟಿ ಮಾಡಿ ಮನವಿ ಮಾಡಿದ್ದಾರೆ. ಆಗ ಶಾಸಕ ಷಡಕ್ಷರಿ ಅವರು, ನಿನ್ನನ್ನು ಕೆಲಸದಿಂದ ತೆಗೆಯಲು ಹೇಳಿದ್ದೇನೆ ಎಂದು ಹೇಳಿ ಕಳಿಸಿದ್ದಾರೆ. ಹೀಗಾಗಿ ನನ್ನ ಪತ್ನಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯ್ತಿ ಸದಸ್ಯೆಯಾಗಿದ್ದಾರೆ. ರಾಜಕೀಯ ದುರುದ್ದೇಶದಿಂದ ನನ್ನ ಹೊಟ್ಟೆಮೇಲೆ ಹೊಡೆದಿದ್ದಾರೆ ಎಂದು ಸುರೇಶ್ ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಪಾಲಿಕೆ ಸೂಪರ್ ಸೀಡ್: ಅಭಯ್​​ ಪಾಟೀಲ್​, ಸತೀಶ ಜಾರಕಿಹೊಳಿ ಮಧ್ಯೆ ವಾಗ್ಯುದ್ಧ

ಇನ್ನು ಈ ಬಗ್ಗೆ ಟಿವಿ9 ಮುಂದೆ ಚಾಲಕ ಸುರೇಶ್ ಅವರು ಅಳಲು ತೋಡಿಕೊಂಡಿದ್ದಾರೆ. 9 ವರ್ಷ ಅವಧಿಯಲ್ಲಿ ಪ್ರಾಮಾಣಿಕವಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಕೊರೊನಾ ಸಂಕಷ್ಟದಲ್ಲಿ ಪ್ರತಿ ದಿನ ಜೀವ ಒತ್ತೆಯಿಟ್ಟು ಕೆಲಸ ಮಾಡಿದ್ದೇನೆ. ಇದೀಗ ಕಾರಣವಿಲ್ಲದೆ ಏಕಾ ಏಕಿ ಕೆಲಸದಿಂದ ತೆಗೆದಿರುವುದು ನೊವುಂಟು ಮಾಡಿದೆ. ಮಗಳ ಮದುವೆ ನಿಶ್ಚಯದ ಬೆನ್ನಲ್ಲೆ ಕೆಲಸ ರದ್ದು ಮಾಡಿದ್ದಾರೆ. ನನಗೆ 53 ವರ್ಷ ವಯಸ್ಸಾಗಿ ಇಳಿ ವಯಸ್ಸಿನಲ್ಲಿ ಬೇರೆ ಯಾರು ಕೆಲಸ ಕೊಡ್ತಾರೆ. ಮಗಳ ಮದುವೆ, ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಮಾಧ್ಯಮದ ಮುಂದೆ ಬಂದು ಚಾಲಕ ಸುರೇಶ್ ಅಳಲು ತೋಡಿಕೊಂಡಿದ್ದಾರೆ.

ಇನ್ನು ಇದೇ ವೇಳೆ ಸುರೇಶ್​ ಅವರು ಗಂಭೀರ ಆರೋಪ ಮಾಡಿದ್ದಾರೆ. ಶಾಸಕರನ್ನ ಭೇಟಿ ಮಾಡಿದಾಗ ನಿನ್ನನ್ನು ಕೆಲಸದಿಂದ ತೆಗೆಯಲು ಹೇಳಿದ್ದೇನೆ ಎಂದರು. ನನ್ನ ಪತ್ನಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯ್ತಿ ಸದಸ್ಯೆಯಾಗಿದ್ದಾರೆ. ರಾಜಕೀಯ ದುರುದ್ದೇಶದಿಂದ ನನ್ನ ಹೊಟ್ಟೆ ಮೇಲೆ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ