ತುಮಕೂರು ಜಿಲ್ಲೆಯಲ್ಲಿ ಹೆಚ್ಚಾದ ಡೆಂಗ್ಯೂ; ಮನೆ ಮನೆಗೂ ಲಾರ್ವಾ ಸರ್ವೆ ನಡೆಸಲು ಡಿಎಚ್​ಓ ಸೂಚನೆ

| Updated By: Rakesh Nayak Manchi

Updated on: Sep 21, 2023 | 10:00 AM

ತುಮಕೂರು ಜಿಲ್ಲೆಯಲ್ಲಿ ಡೆಂಘೀ/ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಒಂಬತ್ತು ತಿಂಗಳಲ್ಲಿ ಒಟ್ಟು 138 ಪ್ರಕರಣಗಳು ದೃಢಪಟ್ಟಿದ್ದು, ಡೆಂಘೀ ಎದುರಿಸಲು ಜಿಲ್ಲಾ ಆರೋಗ್ಯ ಇಲಾಖೆ ಸಕಲ ಸಿದ್ಧತೆ ನಡೆಸಿದೆ. ಅದರಂತೆ ಪ್ರತಿ ಶುಕ್ರವಾರದಂದು ಮನೆ ಮನೆಗೂ ಲಾರ್ವಾ ಸರ್ವೆ ನಡೆಸಲು ಡಿಎಚ್​ಓ ಸೂಚನೆ ನೀಡಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಹೆಚ್ಚಾದ ಡೆಂಗ್ಯೂ; ಮನೆ ಮನೆಗೂ ಲಾರ್ವಾ ಸರ್ವೆ ನಡೆಸಲು ಡಿಎಚ್​ಓ ಸೂಚನೆ
ತುಮಕೂರಿನಲ್ಲಿ ಹೆಚ್ಚಾದ ಡೆಂಗ್ಯೂ ಪ್ರಕರಣ
Follow us on

ತುಮಕೂರು, ಸೆ.21: ಜಿಲ್ಲೆಯಲ್ಲಿ ಡೆಂಘೀ/ ಡೆಂಗ್ಯೂ (Dengue) ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಒಂಬತ್ತು ತಿಂಗಳಲ್ಲಿ ಒಟ್ಟು 138 ಪ್ರಕರಣಗಳು ದೃಢಪಟ್ಟಿದ್ದು, ಡೆಂಘೀ ಎದುರಿಸಲು ಜಿಲ್ಲಾ ಆರೋಗ್ಯ ಇಲಾಖೆ ಸಕಲ ಸಿದ್ಧತೆ ನಡೆಸಿದೆ. ಅದರಂತೆ ಪ್ರತಿ ಶುಕ್ರವಾರದಂದು ಮನೆ ಮನೆಗೂ ಲಾರ್ವಾ ಸರ್ವೆ ನಡೆಸಲು ಡಿಎಚ್​ಓ ಸೂಚನೆ ನೀಡಿದ್ದಾರೆ.

ಮಾನ್ಸೂನ್ ಮಳೆಯಿಂದ ಡೆಂಘೀ ಜ್ವರದ ಪ್ರಕರಣ ಹೆಚ್ಚಳವಾಗುತ್ತಿದ್ದು, ಟಯರ್, ಚಿಪ್ಪುತೊಟ್ಟಿಗಳಲ್ಲಿ ನಿಂತ ಮಳೆನೀರಿನಿಂದ ರೋಗ ಹರಡುವ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಇಡಿಸಿಜಿಪಿ ಎಂಬ ಸೊಳ್ಳೆ ಮೂಲಕವೂ ವೈರಸ್ ಹರಡುತ್ತಿದೆ. ಇಡಿಸಿಜಿಪಿ ಸೊಳ್ಳೆ ಶುದ್ಧ ನೀರಿನ ಮೂಲಕ ಉತ್ಪತ್ತಿಯಾಗುತ್ತವೆ.

ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಾದ ಡೆಂಗ್ಯೂ ಪ್ರಕರಣಗಳು; ಆರೋಗ್ಯ ಇಲಾಖೆಯಿಂದ ಗೈಡ್​​ಲೈನ್ಸ್ ಬಿಡುಗಡೆ

ಜಿಲ್ಲೆಯಲ್ಲಿ ಡೆಂಘೀ ಎದುರಿಸಲು ಜಿಲ್ಲಾ ಆರೋಗ್ಯ ಇಲಾಖೆ ಸಕಲ ಸಿದ್ಧತೆ ನಡೆಸಿದ್ದು, ಮಳೆ‌ನೀರು ಶೇಖರಣೆ ಮಾಡದಂತೆ ಡಿಎಚ್​ಓ ಮಂಜುನಾಥ್ ಸೂಚನೆ ನೀಡಿದ್ದಾರೆ. ಅಲ್ಲದೆ, ಡೆಂಘೀ ತಡೆಗಟ್ಟಲು ಪ್ರತಿ ಶುಕ್ರವಾರ ಮನೆ ಮನೆಗೂ ಲಾರ್ವಾ ಸರ್ವೆ ನಡೆಸಲು ಸೂಚಿಸಿದ್ದಾರೆ.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಮಹಾನಗರ ಪಾಲಿಕೆ, ಎಲ್ಲಾ ತಾಲೂಕು ಅಧಿಕಾರಿಗಳಿಗೆ ಪತ್ರ ಬರೆದಿರುವ ಮಂಜುನಾಥ್, ಹೆಚ್ಚು ಸೊಳ್ಳೆಯಿರುವ ಪ್ರದೇಶದಲ್ಲಿ ಓಂದು ವಾರ ಔಷಧಿ ಸಿಂಪಡಣೆಗೆ ಸೂಚನೆ ನೀಡಿದ್ದಾರೆ.

ಸಾರ್ವಜನಿಕರು ಸೊಳ್ಳೆಪರದೆ ಬಳಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದ್ದು, ಜ್ವರ ಬಂದ ತಕ್ಷಣ ಚಿಕಿತ್ಸೆ ಪಡೆದು ರಕ್ತ ಪರೀಕ್ಷೆ ಮಾಡಿಸಲು ಸೂಚನೆ ನೀಡಿದೆ. ಯಾವುದೇ ಕಾರಣಕ್ಕೂ ಸಾರ್ವಜನಿಕರು ಭಯಪಡುವ ಅವಶ್ಯಕತೆ ಇಲ್ಲ ಅಂತಾನೂ ಹೇಳಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ