ತುಮಕೂರಿನಲ್ಲಿ ಕೇಂದ್ರ ಸಚಿವ ಸೋಮಣ್ಣ, ಶಾಲಿನಿ ರಜನೀಶ್ ಹೆಸರಲ್ಲಿ ವಂಚಿಸಿದವನ ಬಂಧನ

| Updated By: ಸುಷ್ಮಾ ಚಕ್ರೆ

Updated on: Jan 01, 2025 | 6:23 PM

ಗೃಹ ಸಚಿವರ ಹೆಸರಲ್ಲಿ ವಚನೆ ಬಳಿಕ, ಕೇಂದ್ರ ಸಚಿವರ ಹೆಸರಲ್ಲಿಯೂ ವಂಚನೆ ಮಾಡಿರುವ ಪ್ರಕರಣವೊಂದು ತುಮಕೂರಿನಲ್ಲಿ ಬೆಳಕಿಗೆ ಬಂದಿದೆ. ಕೇಂದ್ರ ಸಚಿವ ವಿ. ಸೋಮಣ್ಣ ಹಾಗೂ ಕಾರ್ಯದರ್ಶಿ ಶಾಲಿನಿ ರಜನೀಶ್ ಹೆಸರಲ್ಲಿ ವಂಚನೆ ಯತ್ನ ಮಾಡಿದ್ದ ವ್ಯಕ್ತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಕೇಂದ್ರ ಸಚಿವ, ತುಮಕೂರು ಸಂಸದ ಸೋಮಣ್ಣ ಅವರ ಸಹಿ ಮತ್ತು ಲೆಟರ್ ಹೆಡ್ ನಕಲು ಮಾಡಿದ್ದ ಮಧುಗಿರಿ ತಾಲೂಕಿನ ಮಿಡಿಗೆಶಿ ಮೂಲದ ಗೋವರ್ಧನ್ ಎಂಬಾತನನ್ನು ಬಂಧಿಸಲಾಗಿದೆ.

ತುಮಕೂರಿನಲ್ಲಿ ಕೇಂದ್ರ ಸಚಿವ ಸೋಮಣ್ಣ, ಶಾಲಿನಿ ರಜನೀಶ್ ಹೆಸರಲ್ಲಿ ವಂಚಿಸಿದವನ ಬಂಧನ
Fraud
Follow us on

ತುಮಕೂರು: ಕೇಂದ್ರ ಸಚಿವ ವಿ. ಸೋಮಣ್ಣ ಮತ್ತು ಅಧಿಕಾರಿಗಳ ಹೆಸರಲ್ಲಿ ವಂಚನೆ ಮಾಡಿದವನನ್ನು ಬಂಧಿಸಲಾಗಿದೆ. ನಕಲಿ ಲೆಟರ್ ಹೆಡ್ ಮತ್ತು ಸಹಿ ಹಾಕಿ ವಂಚಿಸಿದ ಹಿನ್ನೆಲೆ ಓರ್ವನನ್ನು ಬಂಧನ ಮಾಡಲಾಗಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ನಿವಾಸಿ ಗೋವರ್ಧನ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಸಚಿವ ವಿ. ಸೋಮಣ್ಣ ಮತ್ತು ಕಾರ್ಯದರ್ಶಿಯ ಹೆಸರಲ್ಲಿ ಗೋವರ್ಧನ ಎಂಬುವವನಿಂದ ವಂಚನೆ ಯತ್ನ ನಡೆದಿತ್ತು ಎನ್ನಲಾಗಿದೆ.

ಆತ ಗೃಹ ಸಚಿವರ ಹೆಸರಲ್ಲಿ ವಂಚನೆ ಬಳಿಕ ಕೇಂದ್ರ ಸಚಿವರ ಹೆಸರಲ್ಲಿ ವಂಚನೆಗೆ ಯತ್ನ ಮಾಡಿದ್ದ. ಕೇಂದ್ರ ಸಚಿವ ಸೋಮಣ್ಣ, ಕಾರ್ಯದರ್ಶಿ ಶಾಲಿನಿ ರಜನೀಶ್ ಹೆಸರಲ್ಲಿ ವಂಚನೆಗೆ ಯತ್ನ ಮಾಡಿದ್ದ. ಸರ್ಕಾರದ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಸಹಿ, ಲೆಟರ್ ಹೆಡ್ ನಕಲು ಮಾಡಿದ್ದ ಗೋವರ್ಧನ್  ಶಾಲಿನಿ ರಜನೀಶ್​ ಹೆಸರಲ್ಲಿ ನಕಲಿ ಆದೇಶ ಪ್ರತಿಯನ್ನೂ ನೀಡಿದ್ದ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ವರನ ಸೋಗಿನಲ್ಲಿ ಯುವತಿಯರಿಗೆ 62 ಲಕ್ಷ ರೂ. ವಂಚಿಸಿದ ಆರೋಪಿ ಬಂಧನ

ಈ ಕುರಿತು ಕೇಂದ್ರ ಸಚಿವ ಸೋಮಣ್ಣ ಅವರ ಆಪ್ತ ಸಹಾಯಕನ ದೂರಿನ ಮೇರೆಗೆ ಗೋವರ್ಧನ ಎಂಬಾತನನ್ನು ಬಂಧಿಸಲಾಗಿದೆ. ಸೋಮಣ್ಣ ಅವರ ಕಚೇರಿಯ ಆಪ್ತ ಸಹಾಯಕ ಮಹೇಶ್ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಪ್ರಭಾವಿಗಳ ಹೆಸರಲ್ಲಿ ನಕಲಿ ಸಹಿ ಮತ್ತು ದಾಖಲೆ ಸೃಷ್ಟಿಸಿ ವಂಚಿಸುತ್ತಿರುವ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಸಿನಿಮಾ ಶೈಲಿಯಲ್ಲಿ ಬ್ಯಾಂಕಿಗೆ ವಂಚನೆ: ತಂಗಿ ಮದ್ವೆ ಸಾಲಕ್ಕೆ ಅಣ್ಣ ಜೈಲು ಸೇರುವ ಪರಿಸ್ಥಿತಿ

ಅಷ್ಟೇ ಅಲ್ಲದೆ, ಕೇಂದ್ರ ಸಚಿವರು, ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ಹೆಸರಲ್ಲೂ ಆತ ವಂಚನೆ ಮಾಡುತ್ತಿದ್ದ. ದೂರು ದಾಖಲಿಸಿಕೊಂಡ ಎನ್​ಇಪಿಎಸ್​ ಪೊಲೀಸರಿಂದ ಆರೋಪಿಯನ್ನು ಬಂಧಿಸಲಾಗಿದೆ. ಫಲಾನುಭವಿಗಳ ಹೆಸರು ಹಾಕಿ ಬೋರ್​ವೆಲ್​ ಕೊರೆಸಿ ಕೊಡಬೇಕು ಮತ್ತು ಪಂಪ್​ಸೆಟ್​ ಮೋಟಾರ್​​ ನೀಡುವಂತೆ ನಕಲಿ ಆದೇಶ ಪ್ರತಿ ನೀಡಿ ವಂಚನೆ ಮಾಡಿದ್ದ. ಆರೋಪಿ ಗೋವರ್ಧನ ನಕಲಿ ಆದೇಶ ಪ್ರತಿ ನೀಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಎನ್​ಇಪಿಎಸ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ