ವರನ ಸೋಗಿನಲ್ಲಿ ಯುವತಿಯರಿಗೆ 62 ಲಕ್ಷ ರೂ. ವಂಚಿಸಿದ ಆರೋಪಿ ಬಂಧನ

ದಾವಣಗೆರೆಯಲ್ಲಿ 62 ಲಕ್ಷ ರೂಪಾಯಿಗಳ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಮ್ಯಾಟ್ರಿಮೋನಿ ಸೈಟ್‌ಗಳ ಮೂಲಕ ಯುವತಿಯರನ್ನು ಪರಿಚಯಿಸಿಕೊಂಡ ಆರೋಪಿ ಎಂ. ಮಧು, ಸರ್ಕಾರಿ ಉದ್ಯೋಗದ ಆಮಿಷವೊಡ್ಡಿ ಹಣ ಪಡೆದು ವಂಚಿಸಿದ್ದಾನೆ. ಪೊಲೀಸರು ಆತನನ್ನು ಬಂಧಿಸಿದ್ದು, ಹಲವು ಯುವತಿಯರು ವಂಚನೆಗೆ ಒಳಗಾಗಿದ್ದಾರೆ.

ವರನ ಸೋಗಿನಲ್ಲಿ ಯುವತಿಯರಿಗೆ 62 ಲಕ್ಷ ರೂ. ವಂಚಿಸಿದ ಆರೋಪಿ ಬಂಧನ
ಆರೋಪಿ ಮಧು
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ವಿವೇಕ ಬಿರಾದಾರ

Updated on: Nov 15, 2024 | 11:20 AM

ದಾವಣಗೆರೆ, ನವೆಂಬರ್​ 15: ವರನ ಸೋಗಿನಲ್ಲಿ ಅಮಾಯಕ ಯುವತಿಯರಿಗೆ 62 ಲಕ್ಷ ರೂ. ವಂಚಿಸಿದ್ದ ಆರೋಪಿಯನ್ನು ದಾವಣಗೆರೆ (Davangere) ಸಿಇಎನ್ ಠಾಣೆಯ ಪೊಲೀಸರು (Police) ಬಂಧಿಸಿದ್ದಾರೆ. ಎಂ.ಮಧು (31) ಯುವತಿಯರಿಗೆ ವಂಚಿಸಿದ ಆರೋಪಿ. ಮಂಡ್ಯ ತಾಲೂಕಿನ ಮಾಚನಹಳ್ಳಿ ನಿವಾಸಿ ಎಂ‌.ಮಧು, ವಧು-ವರ ಶೋಧ ತಾಣಗಳಾದ ಮ್ಯಾಟ್ರಿಮೋನಿಯಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದನು. ಬಳಿಕ, “ನಿಮಗೆ ಸರ್ಕಾರಿ ನೌಕರಿ ಕೊಡಿಸಿ, ನಂತರ ಮದುವೆ ಆಗುತ್ತೇನೆ” ಅಂತ ನಂಬಿಸಿ ಅವರಿಂದ ಹಣ ಪಡೆದು ವಂಚಿಸಿದ್ದಾನೆ.

ದಾವಣಗೆರೆ ಮೂಲದ ಯುವತಿಯೊಬ್ಬಳಿಗೆ ಮೈಸೂರು ರೇಲ್ವೆ ವರ್ಕಶಾಪ್​ನಲ್ಲಿ ಕೆಲಸ ಕೊಡಿಸುವುದಾಗಿ ಆರೋಪಿ ಮಧು 21 ಲಕ್ಷ ರೂಪಾಯಿ ತನ್ನ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದಾನೆ. ಹಣ ಖಾತೆಗೆ ಬಂದ ಬಳಿಕ ಸಂಪರ್ಕಕ್ಕೆ ಸಿಕ್ಕಿಲ್ಲ. ತಾನು ವಂಚನೆಗೆ ಒಳಗಾಗಿದ್ದೇನೆಂದು ಯುವತಿ ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಇದನ್ನೂ ಓದಿ: IPS ಅಧಿಕಾರಿಗಳ ಹೆಸರಿನಲ್ಲಿ ಫೇಸ್‌ಬುಕ್ ನಕಲಿ ಖಾತೆ ಸೃಷ್ಟಿಸಿದ್ದ ಆರೋಪಿಯ ಬಂಧನ

ಇದೇ ರೀತಿ ಆರೋಪಿ ಮಧು, ಚಿಕ್ಕಮಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಯುವತಿಯಿಂದ 3.80 ಲಕ್ಷ ರೂ., ಮಂಡ್ಯ ಸಿಇಎನ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿನ ಯುವತಿಯಿಂದ 26 ಲಕ್ಷ ರೂ., ಬೆಂಗಳೂರು ಕಾಟನ್ ಪೇಟ್​ ಠಾಣೆ ವ್ಯಾಪ್ತಿಯಲ್ಲಿನ ಯುವತಿಯಿಂದ 2.8 ಲಕ್ಷ ರೂ., ಮೈಸೂರು ಸಿಇಎನ್ ಠಾಣೆಯ ಸೇರಿದಂತೆ ಏಳು ‌ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ ಯುವತಿರಿಂದ ಒಟ್ಟು 62 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾನೆ.

ಮ್ಯಾಟ್ರಿಮೋನಿಗಳ ಮೂಲಕ ವಂಚಕರು ಪರಿಚಯ ಮಾಡಿಕೊಂಡು ಹೆಣ್ಣು ಮಕ್ಕಳಿಗೆ ನಯವಾಗಿ ಮಾತನಾಡಿ ವಂಚಿಸುವವರ ಬಗ್ಗೆ ಹಾಗೂ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಹಾಕಿಸಿಕೊಂಡು ವಂಚಿಸುವವರ ಬಗ್ಗೆ ಜಾಗೃತರಾಗಿರಿ. ಇಂತಹ ಘಟನೆಗಳು ಕಂಡುಬಂದರೆ ಕೂಡಲೇ ಸ್ಥಳೀಯ ಠಾಣೆಗೆ ಹೋಗಿ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಬೀದಿ ಕಾಮಣ್ಣರ ಕಾಟ.

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಬೀದಿ ಕಾಮಣ್ಣರ ಹಾವಳಿ ಹೆಚ್ಚಾಗಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆಯೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪುಂಡರು ಅಡ್ಡಹಾಕಿ ಚುಡಾಯಿಸಿದ್ದಾರೆ. ಬೀದಿ ಕಾಮಣ್ಣರ ಕಾಟದಿಂದ ಬೇಸತ್ತು ಬಾಲಕಿ ಓಡಿಹೋಗಿದ್ದಾಳೆ. ಇಷ್ಟಕ್ಕೆ ಬಿಡದ ಪುಂಡರು ಬೈಕ್​ ಮೇಲೆ ಬಂದು ಅಡ್ಡ ಹಾಕಿದ್ದಾರೆ.

ಆಗ, ಸ್ಥಳೀಯರು ಪ್ರಶ್ನೆ ಮಾಡುತ್ತಲೇ ಅಲ್ಲಿಂದ ಪರಾರಿಯಾಗಿದ್ದಾರೆ. ಪುಂಡರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಮತ್ತು ಬಾಲಕಿ ಪೋಷಕರು ಪೊಲೀಸರಿಗೆ ಆಗ್ರಹಿಸಿದ್ದಾರೆ. ಪುಂಡರು ಬಾಲಕಿಗೆ ಅಡ್ಡ ಹಾಕಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

‘ಭೈರತಿ ರಣಗಲ್’ ಸಿನಿಮಾ ನೋಡಿದ ಗೀತಾ ಶಿವರಾಜ್ ಕುಮಾರ್ ಮೊದಲ ರಿಯಾಕ್ಷನ್
‘ಭೈರತಿ ರಣಗಲ್’ ಸಿನಿಮಾ ನೋಡಿದ ಗೀತಾ ಶಿವರಾಜ್ ಕುಮಾರ್ ಮೊದಲ ರಿಯಾಕ್ಷನ್
‘ಭೈರತಿ ರಣಗಲ್’ ಲುಕ್​ನಲ್ಲೇ ಶಿವಣ್ಣನ ಸಿನಿಮಾ ನೋಡಲು ಬಂದ ಡಾಲಿ ಧನಂಜಯ್
‘ಭೈರತಿ ರಣಗಲ್’ ಲುಕ್​ನಲ್ಲೇ ಶಿವಣ್ಣನ ಸಿನಿಮಾ ನೋಡಲು ಬಂದ ಡಾಲಿ ಧನಂಜಯ್
ಜವಾರಿ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಹನುಮಂತ
ಜವಾರಿ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಹನುಮಂತ
Daily Devotional: ಶನಿ ನೇರ ಸಂಚಾರ ಯಾರಿಗೆಲ್ಲ ಅದೃಷ್ಟ? ವಿಡಿಯೋ ನೋಡಿ
Daily Devotional: ಶನಿ ನೇರ ಸಂಚಾರ ಯಾರಿಗೆಲ್ಲ ಅದೃಷ್ಟ? ವಿಡಿಯೋ ನೋಡಿ
ಶನಿದೇವ ಕುಂಬ ರಾಶಿಗೆ ಪ್ರವೇಶಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಶನಿದೇವ ಕುಂಬ ರಾಶಿಗೆ ಪ್ರವೇಶಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ