ಮಂಡ್ಯ: ಪಾಂಡವಪುರ ಪುರಸಭೆ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ

ಮಂಡ್ಯ: ಪಾಂಡವಪುರ ಪುರಸಭೆ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ

ಪ್ರಶಾಂತ್​ ಬಿ.
| Updated By: ನಯನಾ ರಾಜೀವ್

Updated on: Nov 15, 2024 | 9:52 AM

ಮಂಡ್ಯ ಜಿಲ್ಲೆಯ ಪಾಂಡವಪುರ ಪುರಸಭೆ ನಿವೇಶನ ಹಂಚಿಕೆಯಲ್ಲಿ ಭಾರಿ ಅಕ್ರಮ ನಡೆದಿದೆ. ಆಶ್ರಯ ಯೋಜನೆಯಡಿ ಸೈಟ್ ಹಂಚಿಕೆಯಲ್ಲಿ ಗೋಲ್​ಮಾಲ್ ಜರುಗಿದೆ. ನಕಲಿ ಹಕ್ಕುಪತ್ರ ಸೃಷ್ಟಿ ಮಾಡಿ ಒಂದೇ ಸೈಟ್​ನ್ನು ಹಲವರಿಗೆ ಮಾರಾಟ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಹಳ್ಳಿಯ ಮುಗ್ಧ ಜನರು ಏನೂ ತಿಳಿಯುವುದಿಲ್ಲ ಎಂದು ಭಾವಿಸಿ, ಸಾವಿರಾರು ಸೈಟ್​ಗಳನ್ನು ಮಾರಾಟ ಮಾಡಿದ್ದಾರೆ.
ಒಂದೇ ನಿವೇಶನವನ್ನು ಇಬ್ಬರಿಂದ ಮೂವರಿಗೆ ಮಾರಾಟ ಮಾಡಿ ವಂಚಿಸಿದ್ದಾರೆ. ಈ ಬಗ್ಗೆ ಮೂಲ ನಿವೇಶನದಾರರಿಗೆ ಮಾಹಿತಿ ಇಲ್ಲದೇ ನಿವೇಶನ ಮಾರಾಟ ಮಾಡಿದ್ದಾರೆ.

ಹಣ ನೀಡಿ ನಿವೇಶನ ಖರೀದಿಸಿದವರಿಗೂ ಆತಂಕ ಹೆಚ್ಚಾಗಿದೆ, ದಂಧೆಕೋರರ ವಂಚನೆ ವಿಚಾರ ತಿಳಿದು ಶಾಸಕರೇ ಕಂಗಾಲಾಗಿದ್ದಾರೆ. ಹಲವು ವರ್ಷಗಳಿಂದ ಸಾವಿರಾರು ಸೈಟ್​ಗಳನ್ನು ವಂಚಕರು ಮಾರಾಟ ಮಾಡಿದ್ದಾರೆ. ಅಕ್ರಮದಲ್ಲಿ ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಶಾಮೀಲಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ನಿವೇಶನ ಗೋಲ್​ಮಾಲ್ ಬಗ್ಗೆ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ಪತ್ರ ಬರೆಯಲಾಗಿದೆ. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮನವಿ ಮಾಡಿದ್ದಾರೆ. ಗೃಹ ಸಚಿವ ಡಾ. ಜಿ ಪರಮೇಶ್ವರ್​ಗೆ ಪತ್ರ ಬರೆದಿದ್ದು, ಈ ಕುರಿತು ಶಾಸಕರ ದೂರಿನ ಮೇರೆಗೆ ಸಿಐಡಿ ತನಿಖೆ ಆರಂಭಿಸಿದ್ದಾರೆ. ಎನ್​ಒಸಿ ಇದ್ದರೆ ಮಾತ್ರ ಸೈಟ್ ರಿಜಿಸ್ಟರ್ ಮಾಡುವಂತೆ ಸಬರಿಜಿಸ್ಟ್ರಾರ್​ಗೆ ದರ್ಶನ್ ಪುಟ್ಟಣಯ್ಯ ಸೂಚನೆ ನೀಡಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ