ಬಂಡಿಪುರ ರಸ್ತೆಯಲ್ಲಿ ಯಾವುದೇ ಕಾರಣಕ್ಕೆ ರಾತ್ರಿ ಸಂಚಾರ ನಿರ್ಬಂಧವನ್ನು ತೆರವುಗೊಳಿಸಬಾರದು: ವಾಟಾಳ್ ನಾಗರಾಜ್
ಬಂಡಿಪುರ ರಸ್ತೆಯನ್ನು ರಾತ್ರಿ ಸಂಚಾರಕ್ಕೆ ಮುಕ್ತ ಮಾಡಿದರೆ ಹಲವಾರು ಅಕ್ರಮಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ, ಕೇರಳದವರಿಗೆ ಕರ್ನಾಟಕದಲ್ಲಿ ವ್ಯಾಪಾರ ಬೇಕು, ಮರಗಳ್ಳರು ರಾತ್ರಿ ಕಾಡಿಗೆ ನುಗ್ಗಿ ವನ್ಯ ಸಂಪತ್ತನ್ನು ಹಾಳು ಮಾಡುತ್ತಾರೆ. ಸಿದ್ದರಾಮಯ್ಯ ಅನುಮತಿಯೇನಾದರೂ ನೀಡಿದರೆ ಚಳಿಗಾಲದ ಅಧಿವೇಶನ ನಡೆಯುವಾಗ ಸುವರ್ಣ ಸೌಧದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ನಾಗರಾಜ್ ಹೇಳಿದರು.
ಮೈಸೂರು: ವಯನಾಡ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾಡ್ರಾ ಗೆದ್ದರೆ ಬಂಡಿಪುರ ಕಾಡಿನ ಮೂಲಕ ಕೇರಳಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಈಗ ಜಾರಿಯಲ್ಲಿರುವ ರಾತ್ರಿ ಸಂಚಾರ ನಿರ್ಬಂಧವನ್ನು ತೆರವುಗೊಳಿಸಲಾವುಗುವುದು ಎಂಬ ಮಾತು ಕೇಳಿಬರುತ್ತಿದೆ. ಬಂಡಿಪುರದಲ್ಲಿ ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಹಿರಿಯ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ರಾಜಕೀಯಕ್ಕೆ ಮಣಿಯದೆ ರಾತ್ರಿ ರಸ್ತೆ ಸಂಚಾರವನ್ನು ತೆರವುಗೊಳಿಸುವ ಆದೇಶ ಹೊರಡಿಸಬಾರದು ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಡಾ ಹಗರಣದ ನೋಟಿಸ್: ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಿಂತ ವಾಟಾಳ್ ನಾಗರಾಜ್ ಹೇಳಿದ್ದಿಷ್ಟು
Published on: Nov 15, 2024 10:26 AM
Latest Videos