AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟ್ಯಾಧಿಪತಿ ಶೋಗೆ ಅಭಿಷೇಕ್; ‘ಕರೆದು ತಪ್ಪು ಮಾಡಿದೆ’ ಎಂದ ಅಮಿತಾಭ್ ಬಚ್ಚನ್

ಅಮಿತಾಭ್ ಬಚ್ಚನ್ ಅವರ 'ಕೌನ್ ಬನೇಗಾ ಕರೋಡ್ಪತಿ' ಶೋಗೆ ಅಭಿಷೇಕ್ ಬಚ್ಚನ್ ಅತಿಥಿಯಾಗಿ ಆಗಮಿಸಿ, ಅಮಿತಾಭ್ ಅವರ ಅನುಕರಣೆ ಮಾಡಿ ಎಲ್ಲರನ್ನು ನಗಿಸಿದ್ದಾರೆ. ಏಳು ಕೋಟಿ ಗೆಲ್ಲುವವರೆಗೂ ಹೋಗುವುದಿಲ್ಲ ಎಂದು ಬ್ಲ್ಯಾಕ್‌ಮೇಲ್ ಮಾಡಿ ಅಮಿತಾಭ್ ಅವರನ್ನು ಕಂಗಾಲಾಗಿಸಿದ್ದಾರೆ. ನವೆಂಬರ್ 22 ರಂದು ಈ ಎಪಿಸೋಡ್ ಪ್ರಸಾರವಾಗಲಿದೆ.

ಕೋಟ್ಯಾಧಿಪತಿ ಶೋಗೆ ಅಭಿಷೇಕ್; ‘ಕರೆದು ತಪ್ಪು ಮಾಡಿದೆ’ ಎಂದ ಅಮಿತಾಭ್ ಬಚ್ಚನ್
ಅಭಿಷೇಕ್-ಅಮಿತಾಭ್
TV9 Web
| Edited By: |

Updated on: Nov 15, 2024 | 11:13 AM

Share

ಅಮಿತಾಭ್ ಬಚ್ಚನ್ ಅವರು ‘ಕೌನ್ ಬನೇಗಾ ಕರೋಡ್ಪತಿ’ ಶೋ ನಡೆಸಿಕೊಡುತ್ತಿದ್ದಾರೆ. ಈ ಶೋ ಅನೇಕರಿಗೆ ಇಷ್ಟ ಆಗುತ್ತಿದೆ. ಅಮಿತಾಭ್ ಬಚ್ಚನ್ ಅವರು ಬಹಳ ಶ್ರದ್ಧೆಯಿಂದ ಈ ಶೋನ ನಿರೂಪಣೆ ಮಾಡುತ್ತಿದ್ದಾರೆ. ಈ ಶೋಗೆ ಈಗ ವಿಶೇಷ ಅತಿಥಿಯಾಗಿ ಅಭಿಷೇಕ್ ಬಚ್ಚನ್ ಆಗಮಿಸಿದ್ದಾರೆ. ಅವರು ಹಲವು ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಅಲ್ಲದೆ, ಬ್ಲ್ಯಾಕ್​ಮೇಲ್ ಮಾಡಿದ್ದಾರೆ. ಇದನ್ನು ಕೇಳಿ, ಅಮಿತಾಭ್ ಬಚ್ಚನ್ ಕಂಗಾಲಾಗಿದ್ದಾರೆ.

‘ಕೌನ್ ಬನೇಗಾ ಕರೋಡ್ಪತಿ’ ಶೋ ಗೆದ್ದರೆ ಏಳು ಕೋಟಿ ರೂಪಾಯಿ ಸಿಗುತ್ತದೆ. ಹೀಗೆ ಯಾವುದಾದರೂ ಸ್ಪರ್ಧಿ ಗೆದ್ದರೆ ‘ಸಾತ್ ಕರೋಡ್’ ಎಂದು ಅಮಿತಾಭ್ ಅವರು ಕೂಗುತ್ತಾರೆ. ಇದನ್ನು ಅಭಿಷೇಕ್ ಬಚ್ಚನ್ ಅವರು ಮಿಮಿಕ್ರಿ ಮಾಡಿ ತೋರಿಸಿದ್ದಾರೆ. ‘ಸಾತ್ ಕರೋಡ್’ ಎಂದು ಅಮಿತಾಭ್ ಸ್ಟೈಲ್​ನ ಮಿಮಿಕ್ರಿ ಮಾಡಿ ತೋರಿಸಿದ್ದಾರೆ.

ಈ ವೇಳೆ ಒಂದು ಫನ್ನಿ ಘಟನೆ ಕೂಡ ಹೇಳಿದ್ದಾರೆ. ‘ನಮ್ಮ ಮನೆಯಲ್ಲಿ ಎಲ್ಲರೂ ಸೇರುತ್ತೇವೆ. ಯಾರಾದರೂ ಪ್ರಶ್ನೆ ಕೇಳಿದಾಗ ಮಕ್ಕಳು ಸಾತ್ ಕರೋಡ್ ಎಂದು ಕೂಗುತ್ತಾರೆ’ ಎಂದಿದ್ದಾರೆ ಅಭಿಷೇಕ್ ಬಚ್ಚನ್. ಈ ವೇಳೆ ಅಭಿಷೇಕ್ ಅವರು ಬ್ಲ್ಯಾಕ್​ಮೇಲ್ ಕೂಡ ಮಾಡಿದ್ದಾರೆ. ‘ನಾವು ಏಳು ಕೋಟಿ ಗೆಲ್ಲುವವರೆಗೆ ಇಲ್ಲಿಂದ ಹೋಗಲ್ಲ’ ಎಂದಿದ್ದಾರೆ. ‘ಇವನನ್ನು ಕರೆದು ದೊಡ್ಡ ತಪ್ಪು ಮಾಡಿದೆ’ ಎಂದು ಅಮಿತಾಭ್ ನಕ್ಕಿದ್ದಾರೆ.

ಸೋನಿ ಟಿವಿಯಲ್ಲಿ  ‘ಕೌನ್ ಬನೇಗಾ ಕರೋಡ್ಪತಿ’ ಶೋ ಪ್ರಸಾರ ಕಾಣುತ್ತಿದೆ. ಈ ಶೋ ಸಾಕಷ್ಟು ಗಮನ ಸೆಳೆಯುತ್ತಿದೆ. ಅಭಿಷೇಕ್ ಅವರು ಅತಿಥಿಯಾಗಿ ಆಗಮಿಸಿರೋ ಎಪಿಸೋಡ್​ನ ಪ್ರೋಮೋನ ಸೋನಿ ಟಿವಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಹಾಕುತ್ತಿದ್ದಾರೆ. ನವೆಂಬರ್ 22ರಂದು ಈ ಎಪಿಸೋಡ್ ಸೋನಿ ಟಿವಿಯಲ್ಲಿ ಪ್ರಸಾರ ಕಾಣಲಿದೆ.

ಇದನ್ನೂ ಓದಿ: ‘ದುರ್ಬಲ ಪುರುಷ ಪ್ರಬಲ ಮಹಿಳೆಯನ್ನು ಹ್ಯಾಂಡಲ್ ಮಾಡಲಾರ’; ಅಭಿಷೇಕ್ ಬಚ್ಚನ್ ಬಗ್ಗೆ ಟೀಕೆ

ಅಭಿಷೇಕ್ ಬಚ್ಚನ್ ಸದ್ಯ ಸಖತ್ ಸುದ್ದಿಯಲ್ಲಿ ಇದ್ದಾರೆ. ಅವರು ಪತ್ನಿ ಐಶ್ವರ್ಯಾ ಜೊತೆ ವಿಚ್ಛೇದನ ಪಡೆದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಸದ್ಯ ಈ ವಿಚಾರ ಸಖತ್ ಸುದ್ದಿಯಲ್ಲಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್