AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದುರ್ಬಲ ಪುರುಷ ಪ್ರಬಲ ಮಹಿಳೆಯನ್ನು ಹ್ಯಾಂಡಲ್ ಮಾಡಲಾರ’; ಅಭಿಷೇಕ್ ಬಚ್ಚನ್ ಬಗ್ಗೆ ಟೀಕೆ

ಐಶ್ವರ್ಯಾ ರೈ ಬಚ್ಚನ್ ಅವರ 51ನೇ ಹುಟ್ಟುಹಬ್ಬಕ್ಕೆ ಬಚ್ಚನ್ ಕುಟುಂಬದಿಂದ ಯಾವುದೇ ಸಾರ್ವಜನಿಕ ಶುಭಾಶಯಗಳು ಬಂದಿಲ್ಲ. ಇದು ಅಭಿಮಾನಿಗಳಲ್ಲಿ ಅಸಮಾಧಾನ ಉಂಟು ಮಾಡಿದೆ ಮತ್ತು ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ಅವರ ವಿಚ್ಛೇದನದ ಊಹಾಪೋಹಗಳನ್ನು ಮತ್ತೆ ಹುಟ್ಟುಹಾಕಿದೆ.

‘ದುರ್ಬಲ ಪುರುಷ ಪ್ರಬಲ ಮಹಿಳೆಯನ್ನು ಹ್ಯಾಂಡಲ್ ಮಾಡಲಾರ’; ಅಭಿಷೇಕ್ ಬಚ್ಚನ್ ಬಗ್ಗೆ ಟೀಕೆ
ಅಭಿಷೇಕ್-ಐಶ್ವರ್ಯಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 04, 2024 | 4:43 PM

Share

ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಇತ್ತೀಚೆಗೆ ತಮ್ಮ 51 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಆದರೆ ಬಚ್ಚನ್ ಕುಟುಂಬದ ಯಾರೊಬ್ಬರೂ ಅವರ ಹುಟ್ಟುಹಬ್ಬದಂದು ಸಾಮಾಜಿಕ ಜಾಲತಾಣಗಳಲ್ಲಿ ವಿಶ್ ಮಾಡಿಲ್ಲ. ಇದೆಲ್ಲವೂ ಐಶ್ವರ್ಯಾ ಮತ್ತು ಅಭಿಷೇಕ್ ವಿಚ್ಛೇದನದ ಮಾತುಕತೆಗೆ ಮತ್ತೊಮ್ಮೆ ಮುದ್ರೆ ಬಿದ್ದಿದೆ. ಇದು ಅಭಿಮಾನಿಗಳಿಗೆ ಬೇಸರ ತಂದಿದೆ. ಈ ಬಗ್ಗೆ ಅನೇಕರು ಅಭಿಷೇಕ್‌ಗೆ ಕಟುವಾದ ಮಾತುಗಳಿಂದ ಟೀಕೆ ಮಾಡಿದ್ದಾರೆ.

ಐಶ್ವರ್ಯಾ ಅವರ ಅಭಿಮಾನಿಗಳು ಅವರ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ. ಆದರೆ, ಬಚ್ಚನ್ ಕುಟುಂಬದಿಂದ ಯಾವುದೇ ವಿಶ್ ಬಂದಿಲ್ಲ. ಅಭಿಷೇಕ್ ಮತ್ತು ಬಚ್ಚನ್ ಕುಟುಂಬದವರು ಏನಾದರೂ ಪೋಸ್ಟ್ ಮಾಡಿದ್ದಾರೆಯೇ ಅಥವಾ ಐಶ್ವರ್ಯಾಗೆ ಹಾರೈಸಿದ್ದಾರೆಯೇ ಎಂದು ನೋಡಲು ಅಭಿಮಾನಿಗಳು ಕುತೂಹಲದಿಂದ ಅವರ ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಹೋದರು. ಆದರೆ ಸಹಜವಾಗಿಯೇ ಅಭಿಮಾನಿಗಳು ಬೇಸರಗೊಂಡರು. ಏಕೆಂದರೆ ಯಾರ ಖಾತೆಯಿಂದಲೂ ಐಶ್ವರ್ಯಾಗೆ ಹುಟ್ಟುಹಬ್ಬದ ಶುಭಾಶಯಗಳು ಬಂದಿಲ್ಲ, ಯಾರೂ ಪೋಸ್ಟ್ ಮಾಡಿಲ್ಲ. ಇದನ್ನು ನೋಡಿದ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಭಿಷೇಕ್ ತಮ್ಮ ಪತ್ನಿಗೆ ಹುಟ್ಟುಹಬ್ಬದ ಶುಭಾಷಯಗಳನ್ನಾದರೂ ಮಾಡಲಿ ಎಂದು ಅಭಿಮಾನಿಗಳು ಬಯಸಿದ್ದರು. ಆದರೆ ಅದಕ್ಕೆ ಬದಲಾಗಿ ತಮ್ಮ ಹೊಸ ಸಿನಿಮಾದ ಪೋಸ್ಟರ್ ಅನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಅಭಿಷೇಕ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಐಶ್ವರ್ಯಾಗೆ ವಿಶ್ ಮಾಡಿದ್ದೀರಾ ಅಥವಾ ಇಲ್ಲವೇ ಎಂದು ನೋಡಲು ನಾವು ಇಲ್ಲಿಗೆ ಬಂದಿದ್ದೇವೆ ಎಂದು ಹಲವರು ಕಾಮೆಂಟ್‌ಗಳಲ್ಲಿ ಹೇಳಿದ್ದಾರೆ.

ಅಭಿಷೇಕ್ ಅವರ ಈ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ದುರ್ಬಲ ಪುರುಷ ಪ್ರಬಲ ಮಹಿಳೆಯನ್ನು ಹ್ಯಾಂಡಲ್ ಮಾಡಲಾರ’ ಎಂದು ಕೆಲವರು ಹೇಳಿದ್ದಾರೆ. ‘ಕನಿಷ್ಠ ನಿಮ್ಮ ಹೆಂಡತಿಗೆ ಜನ್ಮದಿನದ ಶುಭಾಶಯಗಳನ್ನು ಕೋರಲಾಗುತ್ತದೆ’ ಎಂದಿದ್ದಾರೆ ಕೆಲವರು. ‘ಅವರು ನಿಮ್ಮನ್ನು ಮದುವೆಯಾದರು ಎಂದು ನನಗೆ ನಂಬಲಾಗುತ್ತಿಲ್ಲ’ ಎಂದು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ: ಐಶ್ವರ್ಯಾ ರೈ ಹುಟ್ಟುಹಬ್ಬಕ್ಕೆ ವಿಶ್ ಮಾಡಲೇ ಇಲ್ಲ ಅಭಿಷೇಕ್, ಅಮಿತಾಭ್ ಬಚ್ಚನ್

ಅಭಿಷೇಕ್ ಕೂಡ ಪತ್ನಿಗೆ ವಿಶ್ ಮಾಡದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ಅಮಿತಾಭ್ ಬಚ್ಚನ್ ಅವರ ಹುಟ್ಟುಹಬ್ಬವಿತ್ತು. ಆಗಲೂ ಐಶ್ವರ್ಯಾ ಮತ್ತು ಅಭಿಷೇಕ್ ವಿಚ್ಛೇದನದ ಮಾತುಕತೆ ನಡೆಯುತ್ತಲೇ ಇತ್ತು. ಆಗ ಐಶ್ವರ್ಯಾ ಅವರು ಅಭಿಷೇಕ್​ಗೆ ವಿಶ್​ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.