
ತುಮಕೂರು: ಪಾವಗಡ ತಾಲೂಕಿನ ದೊಮ್ಮತಮರಿ ಗ್ರಾಮದ ಬಳಿ ಗ್ಯಾಸ್ ತುಂಬಿದ್ದ ಟ್ಯಾಂಕರ್ ಪಲ್ಟಿಯಾಗಿರುವ ಘಟನೆ ನಡೆದಿದೆ. ರಸ್ತೆ ಬದಿ ಉರುಳಿಬಿದ್ದ ಟ್ಯಾಂಕರ್ನಿಂದ ಅನಿಲ ಸೋರಿಕೆಯಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕುಣಿಗಲ್ನಿಂದ ಅನಂತಪುರಕ್ಕೆ ಗ್ಯಾಸ್ ಟ್ಯಾಂಕರ್ ತೆರಳುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದಾರೆ.
Published On - 4:45 pm, Mon, 27 April 20