ತುಮಕೂರು: ಸೋಲಾರ್ ಪಾರ್ಕ್ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಆರೋಪ ಮಾಡಿದ್ದಾರೆ. ಜಿಲ್ಲೆಯ ಪಾವಗಡ ತಾಲೂಕಿನ ಅರಸೀಕೆರೆ ಗ್ರಾಮ ಅವರು ಮಾತನಾಡಿ, ಕಾಂಗ್ರೆಸ್ ಅವಧಿಯಲ್ಲಿ ಪಾವಗಡದ ಸೋಲಾರ್ ಪಾರ್ಕ್ ನಿರ್ಮಾಣ ಆಗಿದೆ. ಇದು ಭ್ರಷ್ಟಾಚಾರದ ಒಂದು ಭಾಗ. ಈಗಿನ ಸರ್ಕಾರ ಅಲ್ಲಿನ ಅವ್ಯವಹಾರವನ್ನು ಜನರ ಮುಂದಿಡಬೇಕು. ರೈತರ ಭೂಮಿ ದಾಖಲೆಗಳನ್ನು ತಿದ್ದುಪಡಿ ಅಕ್ರಮ ಮಾಡಿದ್ದಾರೆ. ಬಿಜೆಪಿ ಸರ್ಕಾರ ತನಿಖೆ ಮಾಡ್ತೀವಿ ಎಂದು ಬರೀ ಸುಳ್ಳು ಹೇಳುತ್ತಿದೆ. ಸರ್ಕಾರ ಪ್ರಾಮಾಣಿಕವಾಗಿ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ H.D.ಕುಮಾರಸ್ವಾಮಿ ಆಗ್ರಸಿದರು.
ಪಾವಗಡ ಸೋಲಾರ್ ಪಾರ್ಕ್ ಭ್ರಷ್ಟಾಚಾರ ವಿರುದ್ದ ಸರ್ಕಾರ ಪ್ರಾಮಾಣಿಕವಾಗಿ ತನಿಖೆ ಮಾಡಿ ಕ್ರಮ ಕೈಗೊಳ್ಳಲಿ. ಮಾಹಿತಿ ಇಟ್ಕೊಂಡು, ಇವರು ತನಿಖೆ ಕೇವಲ ಹೇಳಿಕೆಗಷ್ಟೇ ಸಿಮಿತವಾಗಿದೆ. 2016 ರಲ್ಲಿ ಸದನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಶಕ್ತಿ ಇಲಾಖೆಯಲ್ಲಿ ಆದಂತಹ ಭ್ರಷ್ಟಾಚಾರದ ವಿರುದ್ಧ ನಾನು ಸುಧೀರ್ಘವಾಗಿ ಮಾತನಾಡಿದ್ದೆ. ಆಗಿನ ಕಾಂಗ್ರೆಸ್ ಸರ್ಕಾರ ಸದನ ಸಮಿತಿ ರಚನೆ ಮಾಡಿತ್ತು. ಆದರೆ ಇಂಧನ ಸಚಿವರನ್ನೆ ಅಧ್ಯಕ್ಷರನ್ನಾಗಿ ಮಾಡಿ ಲೋಪ ಮಾಡಿತ್ತು.
ಇದನ್ನೂ ಓದಿ: ಜೆಡಿಎಸ್ಗೆ ಬಹುಮತ ಬಂದರೆ ದಲಿತರಿಗೆ ಸಿಎಂ ಪಟ್ಟ: ಎಚ್ಡಿ ಕುಮಾರಸ್ವಾಮಿ
ಕರ್ನಾಟಕದಲ್ಲಿ ಮರಾಠ ಭವನ ನಿರ್ಮಾಣ ಮಾಡುತ್ತೇವೆ ಎಂಬ ಮಹಾ ಸಚಿವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು,
ಮಹಾರಾಷ್ಟ್ರ ಸರ್ಕಾರದ ಜಾಗ ಇದ್ರೆ ಕಟ್ಟಿಕೊಳ್ಳಲಿ. ಬಾಂಬೆಯಲ್ಲಿ ನಮ್ಮ ರಾಜ್ಯ ಸರ್ಕಾರದ ಕೋಟ್ಯಾಂತರ ರೂಪಾಯಿ ಆಸ್ತಿ ಇದೆ. ನಾವು ಅಲ್ಲಿ ಕರ್ನಾಟಕ ಭವನ ಅಥವಾ ಮರಾಠ ಭವನ ಕಟ್ಟಿದರೆ ಆಯ್ತು. ಜನರ ಭಾವನೆಯಲ್ಲಿ ಚೆಲ್ಲಾಟ ಬೇಡ. ಎರಡೂ ಸರ್ಕಾರಗಳು ಆಂತರಿಕವಾಗಿ ತೀರ್ಮಾನ ಮಾಡಿಕೊಂಡೆ ಪರಸ್ಪರ ಆರೋಪ ಪ್ರತ್ಯಾರೋಪದ ಹೇಳಿಕೆ ಕೊಡುತ್ತಿದ್ದಾರೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಜನರ ಭಾವನೆಗಳನ್ನ ಡೈವರ್ಟ್ ಮಾಡಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ದ ಹೆಚ್.ಡಿ ಕುಮಾರಸ್ವಾಮಿ ಆರೋಪ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.