ತುಮಕೂರು: ಮುಸ್ಲಿಮರ ವಿರುದ್ಧ ಹಿಂದೂ ಕಾರ್ಯಕರ್ತರ ಅಭಿಯಾನ ಹಿನ್ನೆಲೆ ಘಟನೆಗಳಿಂದ ಬೇಸತ್ತು ತುಮಕೂರಿನ ವ್ಯಕ್ತಿಯೋರ್ವನಿಂದ ಆತ್ಮಹತ್ಯೆ ಬೆದರಿಕೆ ಕೇಳಿಬಂದಿದೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸಾದಿಕ್ ಪಾಷಾ ಎಂಬ ಹೆಸರಿನ ವ್ಯಕ್ತಿ/ ಖಾತೆ ಟ್ವೀಟ್ ಮಾಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಶಾಂತಿ ವಾತಾವರಣಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಏಪ್ರಿಲ್ 11 ರಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ತುಮಕೂರಿನ SP ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಲಾಗಿದೆ. ನನ್ನ ಸಾವಿಗೆ ಈ ಬಿಜೆಪಿ ಸರ್ಕಾರವೇ ನೇರಹೊಣೆ ಎಂದು ಟ್ವೀಟ್ ಮಾಡಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ, ಹೆಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿಜಿ & ಐಜಿಪಿ, ಎಸ್ಪಿಗೆ ಟ್ಯಾಗ್ ಮಾಡಿ ಸಾದಿಕ್ ಪಾಷಾ ಟ್ವೀಟ್ ಮಾಡಲಾಗಿದೆ.
ನಾನು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಧೈರ್ಯವಂತನಲ್ಲ. ಇದಕ್ಕೆ ನೈಜ ಕಾರಣ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಸೂಕ್ತ ಕ್ರಮ ಕೈಗೊಳ್ಳದೆ ಅಧಿಕಾರಕ್ಕಾಗಿ ಮೌನದಲ್ಲಿರುವ ಮಾನ್ಯ ಬಸವರಾಜ ಬೊಮ್ಮಾಯಿ ಮತ್ತು ಆರಗ ಜ್ಞಾನೇಂದ್ರ ತಾವು ಗೃಹ ಸಚಿವರು ಎಂಬ ಪರಿಜ್ಞಾನವಿಲ್ಲದೆ ಅವೈಜ್ಞಾನಿಕ ಹೇಳಿಕೆ ನೀಡುತ್ತಿರುವುದರಿಂದ ಬೇಸತ್ತು ಈ ನಿರ್ಧಾರ ಮಾಡಿದ್ದೇನೆ ಎಂದು ಅವರು ಟ್ವೀಟ್ ಮೂಲಕ ತಿಳಿಸಲಾಗಿದೆ.
ನಾನು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಧೈರ್ಯವಂತನಲ್ಲ-ಇದಕ್ಕೆ ನೈಜ ಕಾರಣ ರಾಜ್ಯದಲ್ಲಿ L & O ಹದಗೆಟ್ಟಿದೆ-ಸೂಕ್ತ ಕ್ರಮ ಕೈಗೊಳ್ಳದೆ ಅಧಿಕಾರಕ್ಕಾಗಿ ಮೌನದಲ್ಲಿರುವ ಮಾನ್ಯ @BSBommai & @JnanendraAraga ತಾವು ಗೃಹ ಸಚಿವರು ಎಂಬ ಪರಿಜ್ಞಾನವಿಲ್ಲದೆ ಅವೈಜ್ಞಾನಿಕ ಹೇಳಿಕೆ ನೀಡುತ್ತಿರುವುದರಿಂದ ಬೇಸತ್ತು ಈ ನಿರ್ಧಾರ ಮಾಡಿದ್ದೇನೆ.@SPTumkur pic.twitter.com/G3qOlKu4Fx
— S. SadiqPasha@_RTI (@SadiqPashaHRPC1) April 7, 2022
ಆರಗ ಜ್ಞಾನೇಂದ್ರ, ಸಿಟಿ ರವಿ ವಿರುದ್ಧ ಕಾಂಗ್ರೆಸ್ನಿಂದ ದೂರು ದಾಖಲು
ಕೋಮು ಗಲಭೆಗೆ ಪ್ರಚೋದನಕಾರಿ ಹೇಳಿಕೆ ಆರೋಪದಲ್ಲಿ ಚಿತ್ರದುರ್ಗದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಬಿಜೆಪಿ ನಾಯಕ ಸಿ.ಟಿ. ರವಿ ವಿರುದ್ಧ ದೂರು ದಾಖಲು ಮಾಡಲಾಗಿದೆ. ಚಿತ್ರದುರ್ಗದಲ್ಲಿ ಮಾತ್ರ ಅಲ್ಲದೆ, ಪ್ರಚೋದನಾಕಾರಿ ಹೇಳಿಕೆ ಆರೋಪದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಬಿಜೆಪಿ ಶಾಸಕ ಸಿ.ಟಿ ರವಿ ವಿರುದ್ಧ ಕಾಂಗ್ರೆಸ್ನಿಂದ ವಿವಿಧೆಡೆ ದೂರು ನೀಡಲಾಗಿದೆ. ದಾವಣಗೆರೆ ನಗರದ ಬಡಾವಣೆ ಪೊಲೀಸ್ ಠಾಣೆಗೆ ತೆರಳಿ ಕೆಪಿಸಿಸಿ ವಕ್ತಾರ ಡಿ. ಬಸವರಾಜ ನೇತ್ರತ್ವದಲ್ಲಿ ದೂರು ನೀಡಲಾಗಿದೆ. ದೇಶದಲ್ಲಿ ಕರ್ನಾಟಕ ಪೊಲೀಸ್ ಅಂದ್ರೆ ಒಳ್ಳೆಯ ಹೆಸರಿದೆ. ಬೆಂಗಳೂರಿನಲ್ಲಿ ಬೈಕ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಆದ್ರೆ ಗೃಹ ಸಚಿವರು ಮತ್ತು ಶಾಸಕ ಸಿ.ಟಿ ರವಿ ಅವರು ಭಾಷೆಯ ಹೆಸರಿನಲ್ಲಿ ಹೇಳಿಕೆ ನೀಡಿ ಶಾಂತಿ ಸುವ್ಯವಸ್ಥೆಗೆ ದಕ್ಕೆ ತರುವ ಕೆಲಸ ಮಾಡಿದ್ದಾರೆ. ಈ ಬಗ್ಗೆ, ಇವರಿಬ್ಬರ ವಿರುದ್ಧ ಎಫ್ಐಆರ್ ದಾಖಲು ಮಾಡುವಂತೆ ದೂರು ಸಲ್ಲಿಸಲಾಗಿದೆ.
ಗೃಹ ಮಂತ್ರಿ ಆರಗ ಜ್ಞಾನೇಂದ್ರ ಬಂಧನಕ್ಕೆ ಒತ್ತಾಯಿಸಿ ಇತ್ತ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ನೇತೃತ್ವದಲ್ಲಿ ಎಸ್ಪಿ ಕಚೇರಿಗೆ ದೂರು ನೀಡಲಾಗಿದೆ. ಹೆಚ್ಚುವರಿ ಎಸ್ಪಿ ವಿಕ್ರಮ್ ಆಮ್ಟೆಗೆ ಜಿಲ್ಲಾ ಕಾಂಗ್ರೆಸ್ ಮುಖಂಡರು ದೂರು ನೀಡಿದ್ದಾರೆ. ಮಾಜಿ ಶಾಸಕರ ಬೇಳೂರು ಗೋಪಾಲಕೃಷ್ಣ, ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗನಾಥ್ ಸೇರಿ ಹಲವರು ಭಾಗಿ ಆಗಿದ್ದಾರೆ.
ಇದನ್ನೂ ಓದಿ: ಮುಸ್ಲಿಂರ ಜೊತೆ ಮದುವೆಯಾಗುವ ಕುಟುಂಬವನ್ನು ಬಹಿಷ್ಕರಿಸಿ; ಸರ್ಕಾರಿ ಲೆಟರ್ ಹೆಡ್ನಲ್ಲೇ ಪತ್ರ!
ಇದನ್ನೂ ಓದಿ: ಪ್ರಚೋದನಕಾರಿ ಹೇಳಿಕೆ ಆರೋಪ; ಆರಗ ಜ್ಞಾನೇಂದ್ರ, ಸಿಟಿ ರವಿ ವಿರುದ್ಧ ಕಾಂಗ್ರೆಸ್ನಿಂದ ದೂರು ದಾಖಲು
Published On - 3:44 pm, Sat, 9 April 22