ತುಮಕೂರು, ಅ.05: ಪತಿಯ ಪರಸಂಗದ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಪತ್ನಿಯನ್ನ ಪತಿ ಹೊರಹಾಕಿದ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ನಡೆದಿದೆ. ಇಬ್ಬರು ಮಕ್ಕಳೊಂದಿಗೆ ಪತಿ ಮನೆಯಿಂದ ಆಚೆ ಬಂದ ಮಹಿಳೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪತಿ ವಿರುದ್ಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ (Turuvekere Police Station) ದೂರು ದಾಖಲಿಸಿದ್ದು ನ್ಯಾಯ ಕೊಡಿಸಿ ಎಂದು ಅಂಕಲಾಚಿದ್ದಾರೆ. ಇನ್ನು ಮಹಿಳೆಗೆ ಮೋಸ ಮಾಡಿದ ವ್ಯಕ್ತಿ ಎರಡನೇ ಮದುವೆಯಾಗಿರುವುದು ತಿಳಿದು ಬಂದಿದೆ. ಮೊದಲ ಪತ್ನಿಗೆ ವಿಚ್ಚೇದನ ನೀಡದೇ, ಜೀವನಾಂಶ ಕೊಡದೇ ಎರಡನೇ ಮದುವೆ ಆಗಿದ್ದಾನೆ ಎನ್ನಲಾಗುತ್ತಿದೆ.
2018ರ ಡಿಸೆಂಬರ್ನಲ್ಲಿ ರಾಮನಗರ ಮೂಲದ ಮುಸ್ಕಾನ್ ಖಾನ್ ಎಂಬ ಹುಡುಗಿಯನ್ನ ತುರುವೇಕೆರೆ ಜೀಲಾನ್ ಬೇಗ್ ಮದುವೆಯಾಗಿದ್ದ. ಮುಸ್ಕಾನ್ ಕುಟುಂಬ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ಮದುವೆ ಮಾಡಿ ಕೊಟ್ಟಿತ್ತು. ವರದಕ್ಷಿಣೆಯಾಗಿ ಒಂದೂವರೆ ಕೆಜಿ ಒಡವೆ ಹಣ ನೀಡಿದ್ದರು. ಇಷ್ಟೆಲ್ಲಾ ಅದ್ದೂರಿಯಾಗಿ ಮದುವೆ ಆಗಿದ್ದ ಜೀಲಾನ್ ಮದುವೆ ಬಳಿಕವೂ ಹಲವರ ಜೊತೆ ಅಕ್ರಮ ಸಂಬಂಧ ಇಟ್ಟು ಕೊಂಡಿದ್ದನಂತೆ. ದಂಪತಿಗೆ ಇಬ್ಬರು ಮಕ್ಕಳಿದ್ದರೂ ಜೀಲಾನ್ಗೆ ಪರಸಂಗದ ಮಹಿಳೆ ಜೊತೆ ಅಕ್ರಮ ಸಂಬಂಧ ಇತ್ತು. ತನ್ನ ಪತಿಯ ಚಲ್ಲಾಟವನ್ನು ಮೊಬೈಲ್ನಲ್ಲಿ ನೋಡಿದ್ದ ಪತ್ನಿ ಮುಸ್ಕಾನ್ ಖಾನ್ ತನ್ನ ಪತಿಗೆ ಎಚ್ಚರಿಸಿದ್ದಾಳೆ. ಈ ರೀತಿಯ ಕಳ್ಳಾಟ ಬೇಡ ಎಂದು ಮನವಿ ಮಾಡಿದ್ದಾಳೆ. ಆದರೆ ಮೊಬೈಲ್ನಲ್ಲಿ ಬೇರೆ ಹುಡುಗಿಯರ ನಂಬರ್ಗಳು, ಕಾಂಟ್ಯಾಕ್ಟ್ ಹೆಚ್ಚುತ್ತಾ ಹೋಗಿದೆ. ಇದರಿಂದ ನೊಂದ ಮುಸ್ಕಾನ್ ಈ ಬಗ್ಗೆ ಪ್ರಶ್ನೆ ಮಾಡಿದ್ದಾಳೆ. ಆಗ ಪತಿ ಕುಟುಂಬಸ್ಥರೆಲ್ಲ ಸೇರಿಕೊಂಡು ಮುಸ್ಕಾನ್ನನ್ನು ಹೊರ ಹಾಕಿದ್ದಾರೆ. ಇಬ್ಬರು ಮಕ್ಕಳನ್ನು ಸೇರಿದಂತೆ ಮುಸ್ಕಾನ್ಗೆ ಏನೂ ಹಿಂತಿರುಗಿಸದೇ ಮನೆಯಿಂದ ಆಚೆ ಹಾಕಲಾಗಿದೆ.
ಇದನ್ನೂ ಓದಿ: ಬೆಂಗಳೂರು ನಗರ ಪೊಲೀಸ್ ಆಯುಕ್ತರ ಸಮೀಪದ ಬಸ್ ನಿಲ್ದಾಣವನ್ನೇ ಕದ್ದೊಯ್ದ ಖದೀಮರು
ಸದ್ಯ ಮುಸ್ಕಾನ್ ತನ್ನ ಪತಿ ವಿರುದ್ಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿ ನನ್ನನ್ನು ಹೊರ ಹಾಕಿದ್ದಾರೆ. ತನಗೆ ನ್ಯಾಯ ಕೊಡಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇನ್ನು ಜೀಲಾನ್ ಮಧುಗಿರಿ ಮೂಲದ ಮತ್ತೋರ್ವ ಮುಸ್ಕಾನ್ ಎಂಬ ಮಹಿಳೆಯನ್ನ ಎರಡನೇ ಮದುವೆ ಆಗಿದ್ದಾನೆ. ಮೊದಲ ಪತ್ನಿಗೆ ವಿಚ್ಛೇದನ ನೀಡದೇ, ಜೀವನಾಂಶ ಕೊಡದೇ ಎರಡನೇ ಮದುವೆ ಆಗಿದ್ದಾನೆ. ಜೀಲಾನ್ ಮದುವೆಯಾದ ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು ಆಕೆ ಗಂಡನನ್ನು ಬಿಟ್ಟು ಜೀಲಾನ್ನ ಮದುವೆ ಆಗಿದ್ದಾಳೆ ಎನ್ನಲಾಗುತ್ತಿದೆ. ಜೀಲಾನ್ ತುರುವೇಕೆರೆಯಲ್ಲಿ ಜೆಕೆ ಗ್ಯಾಸ್ ಏಜೆನ್ಸಿ ಇಟ್ಟುಕೊಂಡಿದ್ದಾನೆ.
ತುಮಕೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ