ತುಮಕೂರು: ಕೊಲೆ ಸುಪಾರಿ ವಿಚಾರಕ್ಕೆ ಈಗಾಗಲೇ ಎಫ್ಐಆರ್ ದಾಖಲಾಗಿದೆ. ನಾನು ಸ್ಪಷ್ಟವಾಗಿ ಕಂಪ್ಲೇಂಟ್‌ನಲ್ಲಿ ಬರೆದು ಕೊಟ್ಟಿದ್ದೇನೆ. ನಾನು ಯಾವ ದೇವರ ಮುಂದೆ ಬೇಕದ್ರೂ ಪ್ರಮಾಣ ಮಾಡಿ ಹೇಳಲು ಸಿದ್ದನಿದ್ದೇನೆ. ಗೌರಿ ಶಂಕರ್ ಸುಪಾರಿ ಕೊಟ್ಟಿರುವುದು ನಿಜ ಎಂದು ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೂ ನಾನು ದೂರಿನ ಪತ್ರ ರವಾನಿಸಿದ್ದೇನೆ. ಗುಪ್ತಚರ ಮಾಹಿತಿ ಆಧಾರದ ಮೇಲೆ ನಾನು ಕಂಪ್ಲೆಂಟ್ ಕೊಟ್ಟಿದ್ದೇನೆ. ಶಾಸಕ ಗೌರಿಶಂಕರ್ ನನ್ನ ಮೇಲೆ ಆರೋಪ ಮಾಡಿದ್ದಕ್ಕೆ ಬೇಸರವಿಲ್ಲ. ಅವರು ನನ್ನ ಮೇಲೆ ದೂರು ಕೊಟ್ಟಿದ್ದಕ್ಕೆ ದಾಖಲೆ ಸಿಕ್ಕಿಲ್ಲ. ಗೌರಿಶಂಕರ್ ಮೇಲೆ ನನಗೆ ಯಾವುದೇ ದ್ವೇಷವಿಲ್ಲ. ಈ ಕ್ಷೇತ್ರದಲ್ಲಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಯಾವುದೋ ಕಾರಣದಿಂದ ನಾನು ಚುನಾವಣೆಯಲ್ಲಿ ಸೋತಿರಬಹುದು. ಹಳ್ಳಿ ಹಳ್ಳಿಗಳಲ್ಲಿ ಜನರು ಸುರೇಶ್ಗೌಡ ಹೆಸರು ಹೇಳುತ್ತಿದ್ದಾರೆ. ಹತಾಶರಾಗಿ ಗೌರಿಶಂಕರ್ ನನ್ನ ಮೇಲೆ ಸುಪಾರಿ ಕೊಟ್ಟಿದ್ದಾರೆ. ಹಾಗಾಗಿ ಒಂದೂವರೆ ತಿಂಗಳ ಹಿಂದೆಯೇ ದೂರು ದಾಖಲಿಸಿದ್ದೇನೆ ಎಂದು ಮಾಜಿ ಶಾಸಕ ಸುರೇಶ್ ಗೌಡ ಹೇಳಿದರು.
ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದೇನೆ. ಎರಡನೇಯದಾಗಿ ಅವರ ಮೇಲೆ ಸಿಓಡಿ ರಿಪೋರ್ಟ್ ಮಾಡಿದ್ದು, ಚಾರ್ಜ್ ಶೀಟ್ ಆಗಿದೆ. ಮತ್ತೊಂದು ಕರೋನಾ ವ್ಯಾಕ್ಸಿನೇಷನ್ನಲ್ಲಿ ನಕಲಿ ವ್ಯಾಕ್ಸಿನ್ ಹಾಕಿರುವ ಆರೋಪಯಿದೆ. ಈಗ ಮೂರನೇಯದು ಕೊಲೆಗೆ ಸುಪಾರಿ ಕೊಟ್ಟಿರುವ ಕೇಸ್ ಇದೆ. ಇವರು ಶಾಸಕರಾಗಿ ಬಂದಾಗಿನಿಂದ ಒಂದಲ್ಲ ಒಂದು ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಈ ಕ್ಷೇತ್ರದಲ್ಲಿ ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜನ ಒಂದು ಬಾರಿ ಅವರನ್ನು ಶಾಸಕರನ್ನಾಗಿ ಮಾಡಿದ್ದಾರೆ. ಬೇರೆ ಬೇರೆ ಕಾರಣದಿಂದ ಅವರು ಗೆದ್ದು ಶಾಸಕಾರಾಗಿದ್ದಾರೆ ಎಂದರು.
ಇನ್ನು ಚುನಾವಣೆಯಲ್ಲಿ ಸೋಲು ಗೆಲುವು ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಸಾಕಷ್ಟು ಜನ ಕರ್ನಾಟಕ ರಾಜ್ಯದಲ್ಲಿ ಚುನಾವಣೆಯಲ್ಲಿ ಸೋತಿದ್ದಾರೆ. ಉದಾಹರಣೆಗೆ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಪಿಎಂ ದೇವೆಗೌಡರು ಹಾಗೂ ಮಲ್ಲಿಕಾರ್ಜುನ ಖರ್ಗೆ ಸಹ ಸೋತಿದ್ದಾರೆ. ನಾನು ಒಂದು ಚುನಾವಣೆಯಲ್ಲಿ ಯಾವುದೋ ಒಂದು ಕಾರಣಕ್ಕೆ ಸೋತಿರಬಹುದು.
ನಾನು ಯಾವುದೋ ಸಾಮ್ರಾಜ್ಯ ಗೆದ್ದಿದ್ದೇನೆ ಎಂದು ಬಿಗುತ್ತಿಲ್ಲ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.