ತುಮಕೂರಿಗೆ ನೂತನ ಜಿಲ್ಲಾಡಳಿತ ಭವನ ಸೇರಿದಂತೆ ವಿವಿಧ ಯೋಜನೆಗಳಿಗೆ ಭರಪೂರ ಅನುದಾನ ಕೇಳಿದ ಪರಮೇಶ್ವರ್

| Updated By: Rakesh Nayak Manchi

Updated on: Jan 29, 2024 | 2:30 PM

ತುಮಕೂರು ಜಿಲ್ಲೆಯಲ್ಲಿ ಸುಮಾರು 657 ಕೋಟಿ ವೆಚ್ಚದ ಕಾಮಗಾರಿಗಳ ಉದ್ವಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಜಿಲ್ಲೆಗೆ ನೂತನ ಜಿಲ್ಲಾಡಳಿತ ಭವನ, ಬೆಂಗಳೂರು ಮೆಟ್ರೋ ಸಂಪರ್ಕ ಸೇರಿದಂತೆ ಅನೇಕ ಯೋಜನೆಗಳಿಗೆ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ.

ತುಮಕೂರಿಗೆ ನೂತನ ಜಿಲ್ಲಾಡಳಿತ ಭವನ ಸೇರಿದಂತೆ ವಿವಿಧ ಯೋಜನೆಗಳಿಗೆ ಭರಪೂರ ಅನುದಾನ ಕೇಳಿದ ಪರಮೇಶ್ವರ್
ಡಾ.ಜಿ.ಪರಮೇಶ್ವರ
Follow us on

ತುಮಕೂರು, ಜ.29: ನೂತನ ಜಿಲ್ಲಾಡಳಿತ ಭವನ ನಿರ್ಮಾಣ, ಬೆಂಗಳೂರು ಮೆಟ್ರೋ ಸಂಪರ್ಕ ವಿಸ್ತರಣೆ ಸೇರಿದಂತೆ ಅನೇಕ ಯೋಜನೆಗಳಿಗೆ ತುಮಕೂರು (Tumkur) ಜಿಲ್ಲೆಗೆ ಗೃಹಸಚಿವ ಡಾ.ಜಿ. ಪರಮೇಶ್ವರ (Dr.G.Parmeshwara) ಅವರು ಭರಪೂರ ಅನುದಾನವನ್ನು ಕೇಳಿದ್ದಾರೆ. ಸುಮಾರು 657 ಕೋಟಿ ವೆಚ್ಚದ ಕಾಮಗಾರಿಗಳ ಉದ್ವಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅನುದಾನಕ್ಕೆ ಬೇಡಿಕೆ ಇಟ್ಟರು.

ಜಿಲ್ಲೆಗೆ ನೂತನ ಜಿಲ್ಲಾಡಳಿತ ಭವನಕ್ಕೆ ಅನುದಾನ ಕೇಳಿದ ಪರಮೇಶ್ವರ್, 100 ಕೋಟಿ ವೆಚ್ಚದಲ್ಲಿ ಮಂಜೂರು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ‌ ಮಾಡಿದ್ದಾರೆ. ತುಮಕೂರು ವೇಗವಾಗಿ ಬೆಳೆಯುತ್ತಿದೆ. ಬೆಂಗಳೂರು ಸಂಪರ್ಕ ಮಾಡಲು ಮೆಟ್ರೋ ಯೋಜನೆ ‌ಮಂಜೂರು ಮಾಡಬೇಕು. ಈ ಬಗ್ಗೆ ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ ಎಂದರು.

2013 ರಿಂದ 2018 ವರೆಗೂ ಆಡಳಿತ ‌ಇದ್ದಾಗ ಸಿದ್ದರಾಮಯ್ಯ ಅವರು ಪಾವಗಡ ಭಾಗಕ್ಕೆ 2300 ಕೋಟಿ ನೀಡಿದ್ದರು. ಎತ್ತಿನಹೊಳೆ ಯೋಜನಗೆ 13 ಸಾವಿರ ಕೋಟಿ ನೀಡಿದ್ದಾರೆ. ನಾವು ಇದನ್ನು ಸ್ಮರಿಸುತ್ತೇವೆ ಎಂದರು.

ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ 35 ವಾರ್ಡ್​ಗಳಲ್ಲಿ ಕೇವಲ 6 ವರ್ಡ್​ಗಳಿಗೆ ಮಾತ್ರ ಹಣ ಬಂದಿದೆ. ಇನ್ನುಳಿದ 29 ವಾರ್ಡ್​ಗಳಿಗೆ ಹಣ ಬಂದಿಲ್ಲ. ಹೀಗಾಗಿ ಈ‌ಬಾರಿ‌ ಬಜೆಟ್​ನಲ್ಲಿ 500 ಕೋಟಿ ರೂಪಾಯಿ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: ಬಿವೈ ರಾಘವೇಂದ್ರ ಬಗ್ಗೆ ಶಾಮನೂರು ಶಿವಶಂಕರಪ್ಪ ಹೇಳಿದ ಮಾತು ವೈಯಕ್ತಿಕವಾದದ್ದು: ಜಿ ಪರಮೇಶ್ವರ್, ಗೃಹ ಸಚಿವ

ಇಂದು ತುಮಕೂರಿಗೆ ಐತಿಹಾಸಿಕ ದಿನ. ಸುಮಾರು 657 ಕೋಟಿ ವೆಚ್ಚಕ್ಕೆ ಉದ್ವಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಸುಮಾರು 120 ಅಡಿಗಲ್ಲು ಹಾಕಿದ್ದೇವೆ‌. ಇಷ್ಟೊಂದು ಪ್ರಮಾಣದಲ್ಲಿ ಯೋಜನೆಗಳಿಗೆ ಚಾಲನೆ, ಶಂಕುಸ್ಥಾಪನೆ ನೆರವೇರುತ್ತಿರುವುದು ತುಮಕೂರು ಇತಿಹಾಸದಲ್ಲಿ ಮೊದಲು ಎಂದರು.

ಈ ಬಾರಿ ಕರ್ನಾಟಕದಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ಕೊಟ್ಟಿದ್ದಾರೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಇದ್ದಾರೆ. ರಾಜ್ಯದಲ್ಲಿ ಪ್ರವಾಸ ಮಾಡಿದಾಗ ಜನರ ಕಲ್ಯಾಣಕ್ಕಾಗಿ ನಾವು ಇರುತ್ತಿವೆ ಅಂತಾ ಭರವಸೆ ಕೊಟ್ಟಿದ್ದರು. ಅದರಂತೆ ಸರ್ಕಾರ ರಚನೆಯಾದ ನಂತರ ನಡೆದ ಮೊದಲ ಸಂಪುಟ ಸಭೆಯಲ್ಲೇ ಐದು ಗ್ಯಾರಂಟಿಗಳ ಜಾರಿಗೆ ಆದೇಶ ಹೊರಡಿಸುವ ಕೆಲಸ ಮಾಡಲಾಗಿತ್ತು. ಅದರಂತೆ 38 ಸಾವಿರ ಕೋಟಿ ಖರ್ಚು ಮಾಡಿ ಐದು ಗ್ಯಾರಂಟಿ ಅನುಷ್ಠಾನ ಮಾಡಿದ್ದೇವೆ ಎಂದರು.

ಎತ್ತಿ‌ನಹೊಳೆ ಯೋಜನೆಗೆ ಈ ಬಾರಿ ಹಣ ಬೇಕು. ಮಧುಗಿರಿಯಲ್ಲಿ ಏಕಶಿಲಾ ಬೆಟ್ಟ ಇದೆ. ರೂಪ್ ವೇಗೆ ಅನುದಾನ ನೀಡಬೇಕು. ಭದ್ರಾ ಮೇಲ್ದಂಡೆ ಯೋಜನೆ ನೆನಗುದಿಗೆ ಬಿದ್ದಿದೆ. ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆ ಮಾಡುತ್ತೇವೆ ಅಂತಾ ಹೇಳಿತ್ತು. ಬಳಿಕ ಸಮ್ಮನಾಗಿದೆ. ಆದರೆ ರಾಜ್ಯ ಸರ್ಕಾರ ಇದಕ್ಕೆ ಹಣ ಒದಗಿಸಬೇಕಿದೆ ಎಂದು ಮನವಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ