ತುಮಕೂರು: ಬಿಸಿಎಂ ಹಾಸ್ಟೆಲ್​ಗಳಿಗೆ ಅಕ್ಕಿ ಪೂರೈಸದ ಸರ್ಕಾರ! ಅಕ್ಕಿ ಸಾಲವಾಗಿ ನೀಡಿದ ಸಿದ್ದಗಂಗಾ ಮಠ

ತುಮಕೂರು ಜಿಲ್ಲೆಯ ಬಿಸಿಎಂ ಹಾಸ್ಟೆಲ್​ಗಳಿಗೆ ಕರ್ನಾಟಕ ಸರ್ಕಾರದಿಂದ ಅಕ್ಕಿ ಪೂರೈಕೆಯಾಗಿಲ್ಲ. ಹೀಗಾಗಿ ಜಿಲ್ಲೆಯ ಸಿದ್ದಗಂಗಾ ಮಠದಿಂದ ಅಕ್ಕಿಯನ್ನು ಸಾಲದ ರೂಪದಲ್ಲಿ ಹಾಸ್ಟೆಲ್​ಗಳು ಪಡೆದಿವೆ. ಈ ಬಗ್ಗೆ ಮಠದ ಆಡಳಿತಾಧಿಕಾರಿ ವಿಶ್ವನಾಥ್ ಸ್ಪಷ್ಟನೆ ನೀಡಿದ್ದು, ಮಠದಿಂದ ಅಕ್ಕಿ ಸಾಲವಾಗಿ ನೀಡಿದ್ದು ನಿಜ ಎಂದಿದ್ದಾರೆ.

ತುಮಕೂರು: ಬಿಸಿಎಂ ಹಾಸ್ಟೆಲ್​ಗಳಿಗೆ ಅಕ್ಕಿ ಪೂರೈಸದ ಸರ್ಕಾರ! ಅಕ್ಕಿ ಸಾಲವಾಗಿ ನೀಡಿದ ಸಿದ್ದಗಂಗಾ ಮಠ
ತುಮಕೂರು ಜಿಲ್ಲೆಯ ಬಿಸಿಎಂ ಹಾಸ್ಟೆಲ್​ಗಳಿಗೆ ಅಕ್ಕಿ ಪೂರೈಸದ ಸರ್ಕಾರ! ಅಕ್ಕಿ ಸಾಲವಾಗಿ ನೀಡಿದ ಸಿದ್ದಗಂಗಾ ಮಠ
Edited By:

Updated on: Feb 18, 2024 | 4:00 PM

ತುಮಕೂರು, ಫೆ.18: ಜಿಲ್ಲೆಯ ಬಿಸಿಎಂ ಹಾಸ್ಟೆಲ್​ಗಳಿಗೆ (BSM Hostels) ಕರ್ನಾಟಕ ಸರ್ಕಾರದಿಂದ ಅಕ್ಕಿ ಪೂರೈಕೆಯಾಗಿಲ್ಲ. ಹೀಗಾಗಿ ಜಿಲ್ಲೆಯ ಸಿದ್ದಗಂಗಾ ಮಠದಿಂದ (Siddaganga Math) ಅಕ್ಕಿಯನ್ನು ಸಾಲದ ರೂಪದಲ್ಲಿ ಹಾಸ್ಟೆಲ್​ಗಳು ಪಡೆದಿವೆ. ಈ ಬಗ್ಗೆ ಮಠದ ಆಡಳಿತಾಧಿಕಾರಿ ವಿಶ್ವನಾಥ್ ಸ್ಪಷ್ಟನೆ ನೀಡಿದ್ದು, ಮಠದಿಂದ ಅಕ್ಕಿ ಸಾಲವಾಗಿ ನೀಡಿದ್ದು ನಿಜ ಎಂದಿದ್ದಾರೆ.

ಸಮಯಕ್ಕೆ ಸರಿಯಾಗಿ ಅಕ್ಕಿ ಪೂರೈಕೆ ಆಗಿಲ್ಲ. ಹೀಗಾಗಿ ಹಿಂದುಳಿದ ವರ್ಗಗಳ ಹಾಸ್ಟಲ್​ಗಳಿಗೆ ಬಿಸಿಎಂ ಇಲಾಖೆ ಮಠದಲ್ಲಿ ಅಕ್ಕಿ ಸಾಲ‌ ಮಾಡಿವೆ. ಅಧಿಕಾರಿಗಳು ಸುಮಾರು 80 ಚೀಲ ಅಕ್ಕಿ ಸಾಲ ಪಡೆದಿದ್ದಾರೆ. ಆ ಮೂಲಕ ಸಾಲದ ಅಕ್ಕಿಯಿಂದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಊಟ ಮಾಡಿಕೊಡಲಾಗುತ್ತಿದೆ.

ಇದನ್ನೂ ಓದಿ: Bharat Rice: ಮೋದಿ ಸರ್ಕಾರ ಕಡಿಮೆ ಬೆಲೆಗೆ ಅಕ್ಕಿ ನೀಡುತ್ತಿದೆ ಎಂದು ಒಪ್ಪಿಕೊಂಡ ಕಾಂಗ್ರೆಸ್​ಗೆ ಬಿಜೆಪಿ ಧನ್ಯವಾದ

ಬಿಸಿಎಂ ಹಾಸ್ಟೆಲ್​ಗಳಿಗೆ ಮಠದಿಂದ ಅಕ್ಕಿ ಸಾಲವಾಗಿ ಕೊಟ್ಟಿರುವುದು ನಿಜ. ಕಳೆದ ಎರಡು ಮೂರು ತಿಂಗಳ ಹಿಂದೆ ಅಕ್ಕಿ ಕೊಟ್ಟಿದ್ದೇವೆ. ಬಿಸಿಎಂ ಹಾಸ್ಟೆಲ್, ಶಾಲೆಗಳಿಗೆ ಅಕ್ಕಿ ಪೂರೈಕೆ ವಿಳಂಬವಾಗಿ ಮಠದಿಂದ ಪಡೆದುಕೊಂಡಿದ್ದಾರೆ. ಹಲವು ಬಾರಿ ಸಾಲ ತೆಗೆದುಕೊಂಡು ಹೋಗಿದ್ದಾರೆ. ನಮಗೆ ಅದರ ಲೆಕ್ಕ ಇಲ್ಲ. ಅಕ್ಕಿ ತೆಗೆದುಕೊಂಡು ಹೋಗಿರುವುದು ಮಾತ್ರ ಗ್ಯಾರಂಟಿ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ