AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bharat Rice: ಮೋದಿ ಸರ್ಕಾರ ಕಡಿಮೆ ಬೆಲೆಗೆ ಅಕ್ಕಿ ನೀಡುತ್ತಿದೆ ಎಂದು ಒಪ್ಪಿಕೊಂಡ ಕಾಂಗ್ರೆಸ್​ಗೆ ಬಿಜೆಪಿ ಧನ್ಯವಾದ

Bharat Brand Rice: ಬೆಲೆ ಏರಿಕೆ ನಡುವೆ ಕೇಂದ್ರದ ಬಿಜೆಪಿ ಸರ್ಕಾರವು ದೇಶೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆ 29 ರೂಪಾಯಿಗೆ ಭಾರತ್ ಅಕ್ಕಿ ಯೋಜನೆಗೆ ಚಾಲನೆ ನೀಡಿದ್ದು, ದೇಶದದ್ಯಾಂತ ಲಭ್ಯವಿದೆ. ಈ ಬಗ್ಗೆ ಕಾಂಗ್ರೆಸ್ ಟ್ವೀಟ್ ಮೂಲಕ ಟೀಕಿಸಿತ್ತು. ಇದಕ್ಕೆ ಪ್ರತಿ ಟ್ವೀಟ್ ಮಾಡುವ ಮೂಲಕ ಬಿಜೆಪಿ ತಿರುಗೇಟು ನೀಡಿದ್ದು, ಒಟ್ಟಾರೆ ಕರ್ನಾಟಕದ ಜನತೆಗೆ ನಿಮ್ಮ ಕೊಡುಗೆ ಶೂನ್ಯ, ಶೂನ್ಯ, ಶೂನ್ಯ ಎಂದಿದೆ.

Bharat Rice: ಮೋದಿ ಸರ್ಕಾರ ಕಡಿಮೆ ಬೆಲೆಗೆ ಅಕ್ಕಿ ನೀಡುತ್ತಿದೆ ಎಂದು ಒಪ್ಪಿಕೊಂಡ ಕಾಂಗ್ರೆಸ್​ಗೆ ಬಿಜೆಪಿ ಧನ್ಯವಾದ
ಮೋದಿ ಸರ್ಕಾರ ಕಡಿಮೆ ಬೆಲೆಗೆ ಅಕ್ಕಿ ನೀಡುತ್ತಿದೆ ಎಂದು ಒಪ್ಪಿಕೊಂಡ ಕಾಂಗ್ರೆಸ್​ಗೆ ಧನ್ಯವಾದ ಹೇಳಿದ ಬಿಜೆಪಿ
Rakesh Nayak Manchi
|

Updated on: Feb 10, 2024 | 9:56 PM

Share

ಬೆಂಗಳೂರು, ಫೆ.10: ಬೆಲೆ ಏರಿಕೆ ನಡುವೆ ಕೇಂದ್ರದ ಬಿಜೆಪಿ ಸರ್ಕಾರವು ದೇಶೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆ 29 ರೂಪಾಯಿಗೆ ಭಾರತ್ ಅಕ್ಕಿ (Bharat Rice) ಯೋಜನೆಗೆ ಚಾಲನೆ ನೀಡಿದ್ದು, ದೇಶದದ್ಯಾಂತ ಲಭ್ಯವಿದೆ. ಕೇಂದ್ರ ಸರ್ಕಾರ ಪಡಿತರ ಹಂಚಿಕೆಗೆ ಇಟ್ಟಿದ್ದ ಅಕ್ಕಿಯನ್ನು ಕೆಜಿಗೆ 29ರೂ ನಂತೆ ಮಾರಾಟಕ್ಕಿಟ್ಟಿದೆ ಎಂದು ಕಾಂಗ್ರೆಸ್ (Congress) ಟೀಕಿಸಿತ್ತು. ಇದಕ್ಕೆ ತಿರುಗೇಟು ನೀಡಿದ ಬಿಜೆಪಿ (BJP), ಮೋದಿ ಸರ್ಕಾರ ಕಡಿಮೆ ಬೆಲೆಗೆ ಅಕ್ಕಿ ನೀಡುತ್ತಿದೆ ಎಂದು ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದೆ.

ಈ ಬಗ್ಗೆ ಟ್ವೀಟ್ ಮಾಡಿದ ಬಿಜೆಪಿ, ಮೋದಿ ಸರ್ಕಾರ ಅತ್ಯಂತ ಕಡಿಮೆ ಬೆಲೆಗೆ ಅಕ್ಕಿ ನೀಡುತ್ತಿದೆ ಎಂಬುದನ್ನು ಕೊನೆಗೂ ಒಪ್ಪಿಕೊಂಡ ನಿಮಗೆ ನಾಡಿನ ಸಮಸ್ತ ಕನ್ನಡಿಗರ ಪರವಾಗಿ ತುಂಬು ಹೃದಯದ ಧನ್ಯವಾದಗಳು. ಆದರೆ ನಿಮ್ಮ ಟ್ವೀಟ್‌ನಲ್ಲಿ ಒಂದೇ ಒಂದು ವ್ಯತ್ಯಾಸವಿದೆ ದಯವಿಟ್ಟು ಸರಿಪಡಿಸಿಕೊಳ್ಳಿ. ನೀವು ಹೇಳಿದ 10ಕೆಜಿ ಅಕ್ಕಿಯಲ್ಲಿ ಒಂದು ಮುಷ್ಟಿ ಅಕ್ಕಿ ಸಹ ಇದುವರೆಗೂ ಕರ್ನಾಟಕದ ಜನತೆಗೆ ತಲುಪಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿಗೆ ಚಾಲನೆ, ಎಲ್ಲಿ ಸಿಗುತ್ತೆ ಈ ಅಕ್ಕಿ? ಬೆಲೆ ಎಷ್ಟು? ಇಲ್ಲಿದೆ ವಿವರ

ಪ್ರಸ್ತುತ ಕರ್ನಾಟಕದ ಜನತೆಗೆ ಅನ್ನಭಾಗ್ಯದಲ್ಲಿ ದೊರೆಯುತ್ತಿರುವ 5 ಕೆಜಿ ಸಹ ಮೋದಿ ಸರ್ಕಾರ ನೀಡುತ್ತಿರುವ ಅಕ್ಕಿ, ಅದಕ್ಕೆ ನೀವು ಲೇಬಲ್ ಅಂಟಿಸಿಕೊಂಡಿದ್ದೀರಿ ಅಷ್ಟೇ. ಒಟ್ಟಾರೆ ಕರ್ನಾಟಕದ ಜನತೆಗೆ ನಿಮ್ಮ ಕೊಡುಗೆ ಶೂನ್ಯ, ಶೂನ್ಯ, ಶೂನ್ಯ ಎಂದು ಬಿಜೆಪಿ ಹೇಳಿದೆ.

ಬಿಜೆಪಿ ಟ್ವೀಟ್

ಕಾಂಗ್ರೆಸ್ ಟ್ವೀಟ್​ನಲ್ಲಿ ಹೇಳಿದ್ದೇನು?

ರಾಜ್ಯದ ಜನರಿಗೆ ಉಚಿತವಾಗಿ ನೀಡುವ ಸಲುವಾಗಿ 34 ರೂಪಾಯಿಗಳ ಖರೀದಿಗೆ ಕೇಳಿದರೂ ಅಕ್ಕಿ ಕೊಡದ ಕೇಂದ್ರ ಸರ್ಕಾರ ಪಡಿತರ ಹಂಚಿಕೆಗೆ ಇಟ್ಟಿದ್ದ ಅಕ್ಕಿಯನ್ನು ಕೆಜಿಗೆ 29ರೂ ನಂತೆ ಮಾರಾಟಕ್ಕಿಟ್ಟಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು.

ಹಿಂದೆ ಇಂದಿರಾ ಗಾಂಧಿಯವರ ಸರ್ಕಾರ ದೇಶದ ಜನಕ್ಕೆ ಉಚಿತವಾಗಿ ಗೋದಿಯನ್ನು ನೀಡಿತ್ತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನ್ನಭಾಗ್ಯ ಯೋಜನೆಯಲ್ಲಿ ಉಚಿತವಾಗಿ ತಲಾ 10 ಕೆಜಿ ಅಕ್ಕಿ ನೀಡಿತ್ತು. ಆದರೆ ಈಗ ಜನರ ಪಾಲಿನ ಅಕ್ಕಿಯನ್ನು ಕೇಂದ್ರ ಸರ್ಕಾರ ಮಾರಾಟಕ್ಕೆ ಮುಂದಾಗಿದೆ, ದೇಶದ ಸಾರ್ವಜನಿಕ ಸಂಸ್ಥೆಗಳು ಉದ್ಯಮಿಗಳಿಗೆ ಮಾರಾಟ, ಪಡಿತರ ಅಕ್ಕಿ ಜನತೆಗೆ ಮಾರಾಟ ಮೋದಿಯವರದ್ದು ಮಾರುವ ಸರ್ಕಾರ ಹೊರತು ಉದ್ದಾರ ಮಾಡುವ ಸರ್ಕಾರವಲ್ಲ ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ