ತುಮಕೂರು, ಏ.18: ರಾಮ ನವಮಿಯಂದು ಮಜ್ಜಿಗೆ ಹಾಗೂ ಪಾನಕ ಸೇವಿಸಿದ್ದ 45 ಜನರು ಅಸ್ವಸ್ಥರಾದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ (Kunigal) ತಾಲೂಕಿನ ಗೊಲ್ಲರಹಟ್ಟಿಯಲ್ಲಿ ನಡೆದಿದೆ. ಸುಬ್ರಹ್ಮಣ್ಯ ದೇಗುಲದಲ್ಲಿ ನಿನ್ನೆ(ಏ.17) ಮಜ್ಜಿಗೆ, ಪಾನಕವನ್ನ ಗ್ರಾಮಸ್ಥರು ಸೇವಿಸಿದ್ದರು. ಬಳಿಕ ಮಧ್ಯರಾತ್ರಿಯಿಂದ ವಾಂತಿ-ಭೇದಿ ಶುರುವಾಗಿದೆ. ಬೆಳಗ್ಗೆ ಎಡೆಯೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ಆದರೆ, ಆರೋಗ್ಯ ಸುಧಾರಿಸದ ಹಿನ್ನೆಲೆ ಕುಣಿಗಲ್ ತಾಲೂಕು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.
ರಾಯಚೂರು: ಮಸ್ಕಿಯ ಅಶೋಕ ಶಿಲಾಶಾಸನ ರಸ್ತೆ ಬಳಿ ಲಾರಿ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಸಿಂಧನೂರು ಮೂಲದ ಶಾಮೀದ್ (22) ಹಾಗೂ ಸಲ್ಮಾ(10) ಮೃತರು. ಸಿಂಧನೂರಿನಿಂದ ಮುದಗಲ್‌ಗೆ ಮದುವೆಗೆ ತೆರಳುತ್ತಿದ್ದ ವೇಳೆ ಎದುರಿಗೆ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದು ದುರ್ಘಟನೆ ನಡೆದಿದೆ. ಈ ಘಟನೆ ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ:ಮಂಗಳೂರು: ಅಡ್ಯಾರ್ ಬಳಿ ಐಸ್‌ಕ್ರೀಂ ಘಟಕದ ಎಳನೀರು ಸೇವಿಸಿದ ಹತ್ತಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಹುಬ್ಬಳ್ಳಿ: ವಿದ್ಯಾನಗರದ ಅಪೋಲೋ ಮೆಡಿಕಲ್ ಸ್ಟೋರ್ಗೆ ಹೆಲ್ಮೆಟ್ ಧರಿಸಿಬಂದು ಔಷಧ, ಹಣ ದೋಚಿ ಖದೀಮನೊಬ್ಬ ಪರಾರಿಯಾಗಿದ್ದಾನೆ. ಮೆಡಿಕಲ್ ಸ್ಟೋರ್ ಸಿಬ್ಬಂದಿ ಗಮನ ಬೇರೆಡೆ ಸೆಳೆದು ಕಳ್ಳ ಕೈಚಳಕ ತೋರಿಸಿದ್ದಾನೆ. ಇನ್ನು ಮೆಡಿಕಲ್ ಸ್ಟೋರ್ನಲ್ಲಿ ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇತ ಮೆಡಿಕಲ್ ಶಾಫ್ಗಳನ್ನೇ ಟಾರ್ಗೆಟ್ ಮಾಡಿದ್ದಾನೆ ಎನ್ನಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:45 pm, Thu, 18 April 24