ತುಮಕೂರು, (ಅಕ್ಟೋಬರ್ 25): ಹುಲಿ (tiger )ಉಗುರು ಧರಿಸಿದ್ದಕ್ಕೆ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಬಂಧನದ ಬೆನ್ನಲ್ಲೇ ಹಲವರಿಗೆ ಢವ ಢವ ಶುರುವಾಗಿದೆ. ಹೌದು…ಹುಲಿ ಉಗುರಿನ ಲಾಕೆಟ್(tiger claw pendant) ಧರಿಸಿಕೊಂಡಿದ್ದು, ಇದೀಗ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅದರಂತೆ ಇದೀಗ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬಿದನಗೆರೆಯ ಶನಿಮಹಾತ್ಮ ದೇವಾಲಯದ ಅರ್ಚಕ ಧನಂಜಯ ಗುರೂಜಿ (dhananjaya guruji) ಈ ಹುಲಿ ಉಗುರಿನ ಸುಳಿಯಲ್ಲಿ ಸಿಲುಕಿದ್ದಾರೆ.
ದೇವಾಲಯದ ಬಳಿ ಬಸವೇಶ್ವರ ಮಠ ಸ್ಥಾಪಿಸಿ ಗುರೂಜಿಯಾಗಿರುವ ಅರ್ಚಕ. ಮಠದ ಸ್ವಾಮೀಜಿಯಾದ ಬಳಿಕ ಮೈ ತುಂಬಾ ಬಂಗಾರದ ಓಡವೆ ಧರಿಸುತ್ತಿರುವ ಸ್ವಾಮೀಜಿ. ಒಡವೆಗಳ ಜೊತೆಗೆ ಕೊರಳಿಗೆ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಧನಂಜಯ ಗುರೂಜಿಯ ಫೋಟೊ ವೈರಲ್ ಆಗಿದೆ. ಇದರ ಬೆನ್ನಲ್ಲೇ ಇದೀಗ ಅರಣ್ಯ ಇಲಾಖೆ ಅಧಿಕಾರಿ, ಬಿದನಗೆರೆ ದೇವಾಲಯಕ್ಕೆ ತರೆಳಿ ಹುಲಿ ಉಗುರಿನ ಬಗ್ಗೆ ತನಿಖೆ ನಡೆಸಿದ್ದಾರೆ. ಕುಣಿಗಲ್ ವಲಯ ಅರಣ್ಯಾಧಿಕಾರಿ ಜಗದೀಶ್ ಅವರು ಧನಂಜಯಸ್ವಾಮಿಯ ಚಿನ್ನದ ಚೈನ್ ಗಳನ್ನ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ವಿನಯ್ ಗುರೂಜಿ ಆಶ್ರಮದಲ್ಲಿದ್ದ ಹುಲಿ ಚರ್ಮದ ದಾಖಲೆಗಳ ಪ್ರತಿ TV9ಗೆ ಲಭ್ಯ, ದಾಖಲಾತಿಯಲ್ಲೇನಿದೆ?
ಅದು ಅರ್ಟಿಫಿಶಿಯಲ್ ತುಂಬಾ ದಿನಗಳಿಂದ ಹಾಕಿದ್ದರಿಂದ ಕಪ್ಪು ಬಣ್ಣಕ್ಕೆ ತಿರುಗಿತ್ತು. ಹೀಗಾಗಿ ಅದನ್ನ ಎಸೆದಿದ್ದೇನೆ ಎಂದು ಧನಂಜಯಸ್ವಾಮಿ ಅರಣ್ಯಾಧಿಕಾರಿ ಮುಂದೆ ಹೇಳಿಕೆ ನೀಡಿದ್ದಾರೆ. ಆದ್ರೆ, ಧನಂಜಯಸ್ವಾಮಿ ಹೇಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಜಿಲ್ಲಾ ಅರಣ್ಯಾಧಿಕಾರಿ ಅನುಪಮಾ, ಎಸೆದಿರುವ ಉಗುರಿನ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಅರ್ಟಿಫಿಶಿಯಲ್ ಉಗುರನ್ನ ಅವರಿಂದ ಪಡೆದು ಎಫ್ಎಸ್ಎಲ್ ಪರೀಕ್ಷೆಗೆ ಕಳಿಸಲಾಗುವುದು. ಒಂದು ವೇಳೆ ಇಂದು ಉಗುರು ಸಿಗದಿದ್ದರೆ, ಸರ್ಚ್ ವಾರಂಟ್ ಪಡೆದು ಹುಡುಕಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತ ಮೈ ಮೇಲೆ ಕೆ.ಜಿ ಗಟ್ಟಲೆ ಬಂಗಾರ ಸುರಿದು ಕೊಳ್ಳುವ ವ್ಯಕ್ತಿ ಆರ್ಟಿಫಿಶಿಯಲ್ ಹುಲಿ ಉಗರನ್ನ ಹೇಗೆ ಧರಿಸುವುದಕ್ಕೆ ಸಾಧ್ಯ ಎಂದು ಸಾರ್ವಜನಿಕರಲ್ಲಿ ಚರ್ಚೆ ನಡೆದಿವೆ.
ಒಟ್ಟಿನಲ್ಲಿ ವರ್ತೂರ್ ಸಂತೋಷ್ ಪ್ರಕರಣದ ಬೆನ್ನಲ್ಲೇ ರಾಜ್ಯಾದ್ಯಂತ ಹುಲಿ ಉಗುರು ಭಾರೀ ಸದ್ದು ಮಾಡುತ್ತಿದ್ದು, ಇದೀಗ ಇದರಲ್ಲಿ ಕುಣಿಗಲ್ನ ಬಿದನಗೆರೆ ಧನಂಜಯ ಸ್ವಾಮಿಗೆ ಸಂಕಷ್ಟ ಎದುರಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:13 am, Wed, 25 October 23