ತುಮಕೂರು: ಸೈಕಲ್ ಕಳ್ಳತನ ಪ್ರಕರಣದಲ್ಲಿ ವಿಚಾರಣೆಗಾಗಿ ಠಾಣೆಗೆ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆ

| Updated By: ಆಯೇಷಾ ಬಾನು

Updated on: Dec 05, 2022 | 8:40 AM

ಕಳ್ಳತನ ಪ್ರಕರಣದಲ್ಲಿ ವಿಚಾರಣೆಗಾಗಿ ಜಯನಗರ ‌ಪೊಲೀಸ್ ಠಾಣೆಗೆ ಹೋಗಿದ್ದ ಗಾರೆ ಕಾರ್ಮಿಕ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರ ಥಳಿತದಿಂದ ಮೃತಪಟ್ಟಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ತುಮಕೂರು: ಸೈಕಲ್ ಕಳ್ಳತನ ಪ್ರಕರಣದಲ್ಲಿ ವಿಚಾರಣೆಗಾಗಿ ಠಾಣೆಗೆ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆ
Follow us on

ತುಮಕೂರು: ಸೈಕಲ್ ಕಳ್ಳತನ ಪ್ರಕರಣದಲ್ಲಿ ವಿಚಾರಣೆಗಾಗಿ ಜಯನಗರ ‌ಪೊಲೀಸ್ ಠಾಣೆಗೆ ಹೋಗಿದ್ದ ಗಾರೆ ಕಾರ್ಮಿಕ ಶವವಾಗಿ ಪತ್ತೆಯಾಗಿದ್ದಾರೆ. ತುಮಕೂರಿನ ಶೆಟ್ಟಿಹಳ್ಳಿ ಬಳಿಯ ನಾಯಕರ‌ ಬೀದಿಯ ನಿವಾಸಿ ಹನುಮಂತರಾಯಪ್ಪ(58) ಮೃತ ದುರ್ದೈವಿ. ಇವರು ತುಮಕೂರಿನ ಜಯನಗರ ಪೊಲೀಸರ ಥಳಿತದಿಂದ ಮೃತಪಟ್ಟಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಈತ ಗಾರೆ ಕೆಲಸ‌ ಮಾಡಿಕೊಂಡಿದ್ದು ಸೈಕಲ್ ಕಳ್ಳತನ ವಿಚಾರಕ್ಕೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹೀಗಾಗಿ ಪೊಲೀಸರು ಶನಿವಾರ ರಾತ್ರಿ 10 ಗಂಟೆಗೆ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಮಧ್ಯರಾತ್ರಿ 12.30 ಕ್ಕೆ ಬಿಟ್ಟು ಕಳಿಸಿದ್ದರು. ಬಳಿಕ ನಿನ್ನೆ ಸಂಜೆ 5 ಗಂಟೆಗೆ ಸಿವಿಲ್ ಡ್ರೇಸ್ ಹಾಗೂ ಯುನಿಪಾರ್ಮ್ ನಲ್ಲಿ ಬಂದಿದ್ದ ಇಬ್ಬರು ಪೊಲೀಸರು ಬೈಕ್​ನಲ್ಲಿ ಮತ್ತೆ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ಸಂಜೆ 6.30 ಸುಮಾರಿಗೆ ಪುನಃ ವಾಪಸ್ ಶೆಟ್ಟಿಹಳ್ಳಿ ರಿಂಗ್ ರಸ್ತೆ ಬಳಿ ಆತನನ್ನು ಬಿಟ್ಟು ಹೋಗಿದ್ದಾರೆ. ಪೊಲೀಸರೆ ಕಿರುಕುಳ ಕೊಟ್ಟು ಕೊಲೆ ಮಾಡಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದಾದ ಬಳಿಕವೂ 112 ಗೆ ಕರೆ ಮಾಡಿದ್ರೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿಲ್ಲ ಅನ್ನೋ ಆರೋಪ ಕೇಳಿಬಂದಿದೆ. ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಾಣಿಯಾಗಿದ್ದ ವ್ಯಕ್ತಿ ಕೊಲೆಯಾಗಿ ಪತ್ತೆ

ಅಕ್ರಮ ಸಂಬಂಧದ ಹಿನ್ನೆಲೆ ಪತ್ನಿ ಹಾಗೂ ಪ್ರಿಯಕರನಿಂದಲೇ ಪತಿ ಕೊಲೆಯಾದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಚಂಬೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಆನಂದ್ ಕೊಲೆಯಾದ ವ್ಯಕ್ತಿ. ಈತ ನ.21 ರಂದು ಕಾಣಿಯಾಗಿದ್ದ. ಈ ಸಂಬಂಧ ಮಾಸ್ತಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಆನಂದ್ ನನ್ನು ಕೊಲೆ‌ ಮಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆ‌ ಹೊಸಕೋಟೆ ತಾಲ್ಲೂಕು ಬಿ.ಮಾಕನಹಳ್ಳಿ ಗ್ರಾಮದಲ್ಲಿ ಆರೋಪಿಗಳು ಬಿಸಾಕಿ ಹೋಗಿದ್ದರು.

ಈ ಸಂಬಂಧ ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ಶವ ಪತ್ತೆ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ‌ ನಾಪತ್ತೆ ಪ್ರಕರಣ ಕೊಲೆ ಪ್ರಕರಣವಾಗಿ ಪರಿವರ್ತನೆಯಾಗಿದೆ. ಆರೋಪಿ ಪೃಥ್ವಿರಾಜ್, ಚಲಪತಿ, ಪತ್ನಿ ಚೈತ್ರನನ್ನು ಪೊಲೀಸರು ಬಂಧಿಸಿದ್ದು ಮತ್ತೊಬ್ಬ ಆರೋಪಿ ನವೀನ್​ಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಪತ್ನಿ ಚೈತ್ರ ಹಾಗೂ ಚಲಪತಿ ನಡುವೆ ಅಕ್ರಮ ಸಂಬಂಧವಿತ್ರು. ಈ ವಿಚಾರ ಆನಂದನಿಗೆ ಗೊತ್ತಾದ ಹಿನ್ನೆಲೆ ಕೊಲೆ ಮಾಡಿ ಮುಗಿಸಿದ್ದಾರೆ ಎಂಬ ಮಾಹಿತಿ ಬಯಲಾಗಿದೆ. ಘಟನೆ ಸಂಬಂಧ ಮಾಸ್ತಿ ಹಾಗೂ ನಂದಗುಡಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:40 am, Mon, 5 December 22