ತುಮಕೂರು: ವಿಚಾರಣೆ ನೆಪದಲ್ಲಿ ಠಾಣೆಯಲ್ಲಿರಿಸಿ ವ್ಯಕ್ತಿಗೆ ಥಳಿಸಿದ ಆರೋಪ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಠಾಣೆ ಸಿಬ್ಬಂದಿ ಮೇಲೆ ಕೇಳಿ ಬಂದಿದೆ. ಕೊಡಿಯಾಲ ಕಾಲೋನಿಯ ಮಣಿಕಂಠ ಎಂಬುವನನ್ನ ಪಿಎಸ್ಐ ವಿಜಯಕುಮಾರಿ ಹಾಗೂ ಸಿಬ್ಬಂದಿ ಯುವಕನ ಬೆನ್ನುಮೂಳೆ ಮುರಿಯುವಂತೆ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 3 ದಿನ ಠಾಣೆಯಲ್ಲಿಟ್ಟುಕೊಂಡು ಪೊಲೀಸರು ಥಳಿಸಿದ್ದಾರಂತೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಠಾಣೆ ಪೊಲೀಸರು ಯುವಕನಿಗೆ ಮನಸೋ ಇಚ್ಛೆ ತಳಿಸಿದ್ದು ಯುವಕನ ಬೆನ್ನು ಮೂಳೆ ಮುರಿದಿದೆ. ಫೆಬ್ರವರಿ 8ರಂದು ಗ್ರಾಮದಲ್ಲಿ ನೀರು ಹಿಡಿಯುವ ವಿಚಾರಕ್ಕೆ ಯಲ್ಲಮ್ಮ ಹಾಗೂ ನೀಲಕಂಠ ಕುಟುಂಬದ ನಡುವೆ ಜಗಳ ನಡೆದಿತ್ತು. ಹೀಗಾಗಿ ನೀಲಕಂಠ ವಿರುದ್ಧ ಯಲ್ಲಮ್ಮ ಕುಟುಂಬಸ್ಥರು ದೂರು ನೀಡಿದ್ದರು. ಈ ದೂರಿನ ಮೇಲೆ ನೀಲಕಂಠನನ್ನು ಠಾಣೆಗೆ ಕರೆದೊಯ್ದು ಪಿಎಸ್ಐ ವಿಜಯಕುಮಾರಿ ಹಾಗೂ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಲಾಠಿ, ಬೂಟ್ ಕಾಲಿನಿಂದ ಒದ್ದು ನೀಲಕಂಠನಿಗೆ ಕಿರುಕುಳ ನೀಡಿದ್ದಾರೆ. ಠಾಣೆಯಲ್ಲಿ ಕುಡಿಯಲು ನೀರು ಕೊಡದೇ ಊಟವೂ ನೀಡದೇ ಹಿಂಸಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅಲ್ಲದೆ ಥಳಿಸಿದ ಬಗ್ಗೆ ಜಡ್ಜ್ ಮುಂದೆ ಹೇಳಿದರೆ ಬೇಲ್ ಕ್ಯಾನ್ಸಲ್ ಮಾಡುತ್ತೇವೆಂದು ಪೊಲೀಸರು ಬೆದರಿಕೆ ಹಾಕಿದ್ದಾರಂತೆ. ಮಣಿಕಂಠ ವಿರುದ್ಧ ಸೆಕ್ಷನ್ 506, 504, 324, 354 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಸದ್ಯ ನೀಲಕಂಠ ಕೋರ್ಟ್ ನಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾನೆ.
ಮೈಸೂರು: ಹುಲಿ ಚರ್ಮ, ಉಗುರು, ಸಂಚು ಮಾರಾಟಕ್ಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಹುಲಿ ಹತ್ಯೆಗೆ ಬಳಸಲಾದ ಬಂದೂಕುಗಳು, ಕಾಡತೂಸುಗಳು, ಬಾಕಿ ಉಗುರುಗಳು, ಮೀಸೆ, ಹುಲಿ ಗಣತಿ ಸಮಯದಲ್ಲಿ ಕಳುವಾಗಿದ್ದ ಕ್ಯಾಮರಾ, ಗ೦ಧದ ತುಂಡುಗಳ ಉರುಳುಗಳು ಜಪ್ತಿ ಮಾಡಲಾಗಿದೆ. ಮೈಸೂರು ಅರಣ್ಯ ಸಂಚಾರಿ ದಳದ ಪೊಲೀಸರು ಕಾರ್ಯಾಚರಣೆ ನಡೆಸಿ ಮೂರು ದಿನಗಳ ಹಿಂದೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಪಿರಿಯಾಪಟ್ಟಣ ತಾಲೂಕಿನ ಮಾಲ್ದಾರೆ ಗ್ರಾಮದ ಗೋವಿಂದ, ಗೋಪಾಲ, ಲಿಂಗ, ಬಸವರನ್ನು ಬಂಧಿಸಿದ್ದರು. ಈ ಸಂಬಂಧ ಇಂದು ಇನ್ನು ಕೆಲವು ವಸ್ತುಗಳು ಸಿಕ್ಕಿವೆ. ಈ ಹಿಂದೆ ಹುಲಿ ಚರ್ಮ ಉಗುರುಗಳನ್ನು ಸಾಗಿಸಲು ಉಪಯೋಗಿಸಿದ್ದ ಸ್ಕೂಟರ್ ಕಾರು, ಮಣ್ಣಿನಡಿಯಲ್ಲಿ ಅಡಗಿಸಿಟ್ಟಿದ್ದ ಹುಲಿಯ ತಲೆ ಬುರುಡೆ, ಹುಲಿ ಮೂಳೆ ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ: ಮೊಬೈಲ್ ವಿಚಾರಕ್ಕೆ ಮನೆ ಬಿಟ್ಟು ಹೋಗಿದ್ದಾತ ಶವವಾಗಿ ಪತ್ತೆ; ಕೇಳಿದನ್ನು ಪೋಷಕರು ಕೊಡಿಸಲಿಲ್ಲವೆಂದು ಬೆಂಕಿ ಹಚ್ಚಿಕೊಂಡ ಯುವಕ
Crime News: ಒತ್ತೆಹಣಕ್ಕಾಗಿ ಬೇಡಿಕೆಯಿಟ್ಟಿದ್ದವರ ಬಂಧನ, ಟ್ರ್ಯಾಕ್ಟರ್ನಿಂದ ಕಬ್ಬು ಕೀಳಲು ಹೋದ ಬಾಲಕನ ಸಾವು