ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಗರಂ ಆದ ಸಚಿವ ಮಾಧುಸ್ವಾಮಿ

| Updated By: ಆಯೇಷಾ ಬಾನು

Updated on: Jul 23, 2021 | 1:09 PM

ವಸತಿ ಶಾಲೆ ಕಾಮಗಾರಿ ಆರಂಭಿಸದ ಹಿನ್ನೆಲೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ ಹಾಗೂ ಇಲಾಖೆ ಅಧಿಕಾರಿಗಳಿಗೆ ಮಾಧುಸ್ವಾಮಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಗರಂ ಆದ ಸಚಿವ ಮಾಧುಸ್ವಾಮಿ
ಅಧಿಕಾರಿಗಳ ವಿರುದ್ಧ ಗರಂ ಆದ ಸಚಿವ ಮಾಧುಸ್ವಾಮಿ
Follow us on

ತುಮಕೂರು: ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಸಚಿವ ಮಾಧುಸ್ವಾಮಿ ಕೆಂಡಾಮಂಡಲರಾಗಿದ್ದಾರೆ. ಇಂದು ತುಮಕೂರಿನಲ್ಲಿ ಕೆಡಿಪಿ ಸಭೆ ನಡೆಯಿತು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.

ವಸತಿ ಶಾಲೆ ಕಾಮಗಾರಿ ಆರಂಭಿಸದ ಹಿನ್ನೆಲೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ ಹಾಗೂ ಇಲಾಖೆ ಅಧಿಕಾರಿಗಳಿಗೆ ಮಾಧುಸ್ವಾಮಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ವಸತಿ ಶಾಲೆಗೆ ಸೂಕ್ತ ಜಾಗ ಸಿಗಲಿಲ್ಲ ಅಂತಾ ಸಬೂಬು ಹೇಳಿದ ಪಾವಗಡ ಸಮಾಜ ಕಲ್ಯಾಣ ಅಧಿಕಾರಿ ಶ್ರೀನಿವಾಸ್ ನಾಯ್ಕ್ ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಬಗರ್ ಹುಕುಂ ಜಮೀನು ವಿವಾದ ಇದೆ. ವಸತಿ ಶಾಲೆಗೆ ಸೂಕ್ತ ಜಾಗ ಸಿಗಲಿಲ್ಲ ಎಂದು ಶ್ರೀನಿವಾಸ್ ನಾಯ್ಕ್ ತಮ್ಮ ಕೆಲಸ ವಿಳಂಬವಾಗಲು ಕಾರಣ ತಿಳಿಸಿದ್ರು. ಈ ವೇಳೆ ಕೆಂಡಾಮಂಡಲರಾದ ಸಚಿವ ಮಾಧುಸ್ವಾಮಿ, ನಿಮಗೆ ನಾಚಿಕೆ ಆಗಲ್ವಾ ಎಂದು ಗರಂ ಆಗಿದ್ದಾರೆ.

ಮೋಜು ನಡೆಯುತ್ತಿದೆ, ನೌಕರಿ ನಡೆಯುತ್ತಿಲ್ಲ. ಶಾಸಕರು ಒದ್ದಾಡಿ ಅನುದಾನ ತಂದರೇ ಕೆಲಸ ಮಾಡಲು ಆಗ್ತಿಲ್ಲ. ಹಣ ಇದ್ದರೂ ನಿಮ್ಮ ಕೆಲಸ ಮಾಡುವುದಕ್ಕೆ ಏನು ಅಂತಾ ಪ್ರಶ್ನೆ ಮಾಡಿದ್ರು. ಆದ್ರೆ ಮಾಧುಸ್ವಾಮಿಗೆ ಅಧಿಕಾರಿಗಳು ಸೂಕ್ತ ಉತ್ತರ ನೀಡಿಲ್ಲ.

ಕೆಡಿಪಿ ಸಭೆ

ಇನ್ನು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳಿಗೂ ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ವಸತಿ ಶಾಲೆಗಳ ನಿರ್ಮಾಣ ವಿಚಾರವಾಗಿ ಹಿಗ್ಗಾಮುಗ್ಗಾ ಬೈದಿದ್ದಾರೆ. ವಸತಿ ಶಾಲೆಗಳ ಕಾಮಗಾರಿ ಸಮರ್ಪಕವಾಗಿ ಆಗ್ತಿಲ್ಲ ಎಂದು ಸಚಿವರು ಪ್ರಶ್ನೆ ಮಾಡಿದ್ರು. ಈ ವೇಳೆ ಇದಕ್ಕೆ ಸೂಕ್ತ ಉತ್ತರ ನೀಡದ ಅಧಿಕಾರಿಗಳಿಗೆ ಚೇರ್ ನಿಂದ ಎದ್ದರೇ ಏನಾಗುತ್ತೆ ಗೊತ್ತಾ ಎಂದು ಮಾಧುಸ್ವಾಮಿ ಆಕ್ರೋಶ ಹೊರ ಹಾಕಿದ್ರು. ಎಮ್ ಎಲ್​ಎಗಳು ಅಂದರೇ ಏನು ಅಂದುಕೊಂಡಿದಿರಾ. ಎಮ್​ಎಲ್​ಎಗಳ ಹತ್ತಿರ ಚರ್ಚೆ ಮಾಡ್ತಿಲ್ಲ, ಕೆಲಸವೂ ಮಾಡ್ತಿಲ್ಲ. ಏನು ಅಂದುಕೊಂಡಿದಿರಾ ಅಂತಾ ಗರಂ ಆದ್ರು.

ಇದನ್ನೂ ಓದಿ: Monsoon Session 2021: ಕೇಂದ್ರ ಸಚಿವರ ಭಾಷಣದ ಪ್ರತಿಯನ್ನು ಹರಿದುಹಾಕಿದ್ದ ಟಿಎಂಸಿ ಸಂಸದ ರಾಜ್ಯಸಭೆಯಿಂದ ಅಮಾನತು

Published On - 1:04 pm, Fri, 23 July 21