ಸಿರಿಧಾನ್ಯ ಹಬ್ಬ; ಡಿಫರೆಂಟ್‌ ಸ್ಟೈಲಲ್ಲಿ ಮಿನಿಸ್ಟರ್ ಪರಮೇಶ್ವರ್ ಎಂಟ್ರಿ, ಇಲ್ಲಿದೆ ವಿಡಿಯೋ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 30, 2023 | 7:32 PM

ತುಮಕೂರು ‌ಜಿಲ್ಲಾಮಟ್ಟದ ಸಿರಿಧಾನ್ಯ ಹಬ್ಬ, ಸಿರಿಧಾನ್ಯ ಉತ್ಪಾದಕರ ಹಾಗೂ ಮಾರುಕಟ್ಟೆದಾರರ ಕಾರ್ಯಾಗಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್(G Parameshwara) ಚಾಲನೆ ನೀಡಿದರು. ತುಮಕೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಸಚಿವರು ಡಿಫರೆಂಟ್​ ಸ್ಟೈಲಲ್ಲಿ ಆಗಮಿಸಿದ್ದಾರೆ.

ತುಮಕೂರು, ಡಿ.30: ತುಮಕೂರು(Tumakuru) ‌ಜಿಲ್ಲಾಮಟ್ಟದ ಸಿರಿಧಾನ್ಯ ಹಬ್ಬ, ಸಿರಿಧಾನ್ಯ ಉತ್ಪಾದಕರ ಹಾಗೂ ಮಾರುಕಟ್ಟೆದಾರರ ಕಾರ್ಯಾಗಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್(G Parameshwara) ಚಾಲನೆ ನೀಡಿದರು. ತುಮಕೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಸಚಿವರು ಡಿಫರೆಂಟ್​ ಸ್ಟೈಲಲ್ಲಿ ಆಗಮಿಸಿದ್ದಾರೆ. ಹೌದು,  ಮೈದಾನಕ್ಕೆ ಹಸಿರು ಶಾಲು ಹಾಕಿಕೊಂಡು ಎತ್ತಿನಗಾಡಿಯಲ್ಲಿ ಡಾ. ಪರಮೇಶ್ವರ್ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿ ಶುಭಾಕಲ್ಯಾಣ್, ಜಿಲ್ಲಾ ಪಂಚಾಯತಿ ಸಿಇಓ ಪ್ರಭು ಹಾಗೂ ಎಸ್ ಪಿ ಅಶೋಕ್, ಕೃಷಿ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವರು ಸಾಥ್ ಕೊಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ