ತುಮಕೂರು, ಜುಲೈ 28: ನೈಸ್ ಸಂಸ್ಥೆ ಅಕ್ರಮದ ಬಗ್ಗೆ ರಿಪೋರ್ಟ್ ನೀಡಿದ ಬೆನ್ನಲ್ಲೇ ರೈತರಂತೆ ಕರೆ ಮಾಡಿ ಜಿಲ್ಲೆಯ ಶಿರಾ ಕ್ಷೇತ್ರದ ಕಾಂಗ್ರೆಸ್ ಹಿರಿಯ ಶಾಸಕ ಟಿ.ಬಿ.ಜಯಚಂದ್ರ (TB Jayachandra) ಗೆ ಕರೆ ಮಾಡಿ ಬೆದರಿಕೆ ಹಾಕಲಾಗಿದೆ. ರೈತರ ಹಗರಣದ ವಿಚಾರವಾಗಿ ಕಳೆದ 2 ದಿನಗಳ ಹಿಂದೆ ರಾಮನಗರಕ್ಕೆ ಭೇಟಿ ನೀಡಿದ್ದ ಜಯಚಂದ್ರ, ಈ ವೇಳೆ ರೈತರ ಜೊತೆ ಚರ್ಚೆ ಮಾಡಿದ್ದರು. ಭೇಟಿ ಬಳಿಕ ಇದೀಗ ಶಾಸಕ ಜಯಚಂದ್ರಗೆ ಬೆದರಿಕೆ ಕರೆಗಳು ಹೆಚ್ಚಾಗಿವೆ.
ಈ ಕುರಿತಾಗಿ ಬೆಂಗಳೂರಿನಲ್ಲಿ ಟಿವಿ9ಗೆ ಶಾಸಕ ಟಿ.ಬಿ.ಜಯಚಂದ್ರ ಪ್ರತಿಕ್ರಿಯಿಸಿದ್ದು, ನನಗೆ ಬೆದರಿಕೆ ಕರೆ ಬಂದಿದ್ದು ನಿಜ ಎಂದಿದ್ದಾರೆ. ನೈಸ್ ಸಂಸ್ಥೆಯ ಅಕ್ರಮದ ಬಗ್ಗೆ ನಾನು ರಿಪೋರ್ಟ್ ನೀಡಿದ್ದೆ. ಸಾವಿರಾರು ಎಕರೆ ಸರ್ಕಾರಿ, ಖಾಸಗಿ ರೈತರ ಜಮೀನು ಕಬಳಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಶಾಸಕರ ಅಸಮಾಧಾನದ ಪತ್ರ ಹರಿದು ಹಾಕಿದ ಸಿದ್ದರಾಮಯ್ಯ, ಕಿಚಾಯಿಸಿದ ಬಿಜೆಪಿ
ರೈತರು ಆಹ್ವಾನಿಸಿದ್ದರಿಂದ ಬಿಡದಿಗೆ ಹೋಗಿದ್ದೆ. ಅವರನ್ನು ಭೇಟಿ ಮಾಡಿ ಬಂದ ಬಳಿಕ ಬೆದರಿಕೆ ಕರೆ ಶುರುವಾಗಿದೆ. ನೀವು ಈ ಕ್ಷೇತ್ರದಲ್ಲಿ ಎಲೆಕ್ಷನ್ಗೆ ನಿಲ್ಲಬೇಕಾ. ನಿಮಗೂ ಇದಕ್ಕೂ ಏನು ಸಂಬಂಧ. ಯಾಕೆ ಬರ್ತಿರಾ ಅಂತ ಕೇಳುತ್ತಿದ್ದರು.
ಇದನ್ನೂ ಓದಿ: Siddaramaiah: ಚುನಾವಣಾ ತಕರಾರು ಅರ್ಜಿ; ಸಿದ್ದರಾಮಯ್ಯಗೆ ಹೈಕೋರ್ಟ್ ನೋಟಿಸ್
ನಾನು ಸಾರ್ವಜನಿಕ ಜೀವನದಲ್ಲಿ 45 ವರ್ಷಗಳಿಂದ ಇದ್ದೇನೆ. ಇದಕ್ಕೆಲ್ಲ ಹೆದರಲ್ಲ ಎಂದು ಹೇಳಿದ್ದೇನೆ ಎಂದರು. ಕೂಡಲೇ ಸರ್ಕಾರ ರೈತರ ಹಿತಾಸಕ್ತಿಯನ್ನ ಗಮನದಲ್ಲಿಟ್ಟುಕೊಂಡು ಈ ರಿಪೋರ್ಟ್ ಅಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:30 pm, Fri, 28 July 23