ತುಮಕೂರು: ಜಿಲ್ಲೆಯ ಬಾಲಭವನದಲ್ಲಿ ನಡೆದ ಜನಮನ ಪ್ರತಿಷ್ಠಾನ, ಸಿದ್ದರಾಮಯ್ಯ ಆಡಳಿತ, ಅಂತರಂಗ ಬಹಿರಂಗ ಗ್ರಂಥಾವಲೋಕನ ಸಂಕಿರಣ ಸಂವಾದ ಕಾರ್ಯಕ್ರಮದಲ್ಲಿ ತನ್ನ ಮಗನಿಗೆ ಸಿದ್ದರಾಮಯ್ಯ ಎಂದು ಹೆಸರು ಇಡಲು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮಾನಿ ಮನವಿ ಮಾಡಿದ ಘಟನೆ ನಡೆದಿದೆ. ಸಂವಾದದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಅವರ ಅಭಿಮಾನಿಯೊಬ್ಬರು ತಮ್ಮ ಮಗನಿಗೆ ತಮ್ಮ ನೆಚ್ಚಿನ ನಾಯಕ ಸಿದ್ದರಾಮಯ್ಯ(Siddaramaiah) ಎಂದು ಹೆಸರು ಇಡುವಂತೆ ಮನವಿ ಮಾಡಿದ್ದಾರೆ.
ನಾನು ನಿಮ್ಮ ಅಭಿಮಾನಿ, ನೀವು ಮುಂದೆಯೂ ಸಿಎಂ ಆಗಬೇಕು. ನೀವು ದೀನದಲಿತರ ಆಶಾಕಿರಣ, ನಾನು ನಿಮ್ಮ ದೊಡ್ಡ ಅಭಿಮಾನಿ. ನನ್ನ ಮಗನಿಗೆ ಈ ವೇದಿಕೆಯಲ್ಲಿ ಸಿದ್ದರಾಮಯ್ಯ ಎಂದು ಹೆಸರು ನಾಮಕರಣ ಮಾಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರ ಅಭಿಮಾನಿ ಗಂಗಾಧರ ಮನವಿ ಮಾಡಿದ್ರು. ಈ ವೇಳೆ ಮನವಿಗೆ ಸ್ಪಂದಿಸಿದ ಸಿದ್ದರಾಮಯ್ಯ, ಗಂಗಾಧರ ಮಗನಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿ 500 ರೂ ಉಡುಗೊರೆಯಾಗಿ ನೀಡಿದ್ರು. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ತಿಪ್ಪಾಪುರ ಗ್ರಾಮದ ನಿವಾಸಿ ಗಂಗಾಧರ ಕುಟುಂಬ ಸಮೇತರಾಗಿ ಕಾರ್ಯಕ್ರಮಕ್ಕೆ ಬಂದಿದ್ದು ತಮ್ಮ ಮಗನಿಗೆ ಸಿದ್ದರಾಮಯ್ಯನವರ ಕೈಯಿಂದಲೇ ನಾಮಕರಣ ಮಾಡಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಇನ್ನು ಈ ವೇಳೆ ಮಾತನಾಡಿರುವ ಸಿದ್ದರಾಮಯ್ಯ, ಸಂವಾದ ಏರ್ಪಾಡು ಮಾಡುವುದರಿಂದ ಜನರು ಪ್ರಶ್ನೆ ಕೇಳುತ್ತಾರೆ. ಅವರಿಗೆ ನಾವು ಉತ್ತರ ಕೊಡಲಾಗುತ್ತೆ. ಸಮಂಜಸವಾಗಿ ಉತ್ತರ ಕೊಟ್ಟಿದ್ದೇನೆ ಅಂದುಕೊಂಡಿದ್ದೇನೆ. ಅವರಿಗೆ ಖುಷಿಯಿದೆಯೋ ಇಲ್ವೋ ಗೊತ್ತಿಲ್ಲ ಎಂದರು. ಇದೇ ವೇಳೆ ಮಧುಗಿರಿ ಮೂಲದ ಮಗುವಿಗೆ ಸಿದ್ದರಾಮಯ್ಯ ಅಂತಾ ನಾಮಕರಣ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕುಟುಂಬಸ್ಥರು ಸಿದ್ದರಾಮಯ್ಯ ಅಂತಾ ಹೆಸರು ಇಟ್ಟಿದ್ದಾರೆ. ಆ ಮಗು ಉತ್ತಮ ಪ್ರಜೆಯಾಗಲಿ ಅಂತಾ ಆಶಿಸುತ್ತೇನೆ ಎಂದರು.
Published On - 9:56 pm, Sun, 22 May 22