ಬುದ್ಧಿಗೇಡಿಯ ಕೃತ್ಯ! ಕುಟುಂಬದ 6 ಜನರಿಗೆ ಕೊರೊನಾ, ಪೊಲೀಸರು ಕೇಸ್‌ ದಾಖಲಿಸಿದರು

| Updated By: ಆಯೇಷಾ ಬಾನು

Updated on: Jun 15, 2020 | 11:03 AM

ತುಮಕೂರು: ಕೊರೊನಾ ವೈರಸ್‌ ಮಾರಿಯ ಬಗ್ಗೆ ಸರ್ಕಾರ ಮತ್ತು ವೈದ್ಯರು ಸಾಕಷ್ಟು ತಿಳಿವಳಿಕೆಯನ್ನ ಸಾರ್ವಜನಿಕರಿಗೆ ನೀಡ್ತಾನೆ ಇದ್ದಾರೆ. ಆದ್ರೂ ಕೆಲ ಜನ ಮಾತ್ರ ತಾವು ನಡೆದಿದ್ದೇ ದಾರಿ ಅಂತಾರೆ. ಎಷ್ಟೇ ತಿಳಿವಳಿಕೆ ಹೇಳಿದ್ರೂ ಕೇಳೋ ವ್ಯವಧಾನ ಇವರದಲ್ಲ. ಅಂಥ ಭೂಪನೊಬ್ಬನಿಗೆ ಪೊಲೀಸ್‌ರು ಈಗ ಸರಿಯಾಗಿ ಬುದ್ದಿ ಕಲಿಸಿದ್ದಾರೆ. ಹೌದು ತುಮಕೂರು ಜಿಲ್ಲೆ ಶಿರಾ ಪಟ್ಟಣವನ್ನ ಕಂಟೈನ್ಮೆಂಟ್‌ ಜೋನ್‌ ಅಂತಾ ಸರ್ಕಾರ ಘೋಷಣೆ ಮಾಡಿದೆ. ಇದಕ್ಕೆ ಕಾರಣ ಹೆಚ್ಚುತ್ತಿರುವ ಪಾಸಿಟಿವ್‌ ಪ್ರಕರಣಗಳು. ಆದ್ರೂ ಇಲ್ಲಿನ ಅತೀ ಜಾಣನೊಬ್ಬ ಸುತ್ತಾಡಿದ್ರೆ […]

ಬುದ್ಧಿಗೇಡಿಯ ಕೃತ್ಯ! ಕುಟುಂಬದ 6 ಜನರಿಗೆ ಕೊರೊನಾ, ಪೊಲೀಸರು ಕೇಸ್‌ ದಾಖಲಿಸಿದರು
Follow us on

ತುಮಕೂರು: ಕೊರೊನಾ ವೈರಸ್‌ ಮಾರಿಯ ಬಗ್ಗೆ ಸರ್ಕಾರ ಮತ್ತು ವೈದ್ಯರು ಸಾಕಷ್ಟು ತಿಳಿವಳಿಕೆಯನ್ನ ಸಾರ್ವಜನಿಕರಿಗೆ ನೀಡ್ತಾನೆ ಇದ್ದಾರೆ. ಆದ್ರೂ ಕೆಲ ಜನ ಮಾತ್ರ ತಾವು ನಡೆದಿದ್ದೇ ದಾರಿ ಅಂತಾರೆ. ಎಷ್ಟೇ ತಿಳಿವಳಿಕೆ ಹೇಳಿದ್ರೂ ಕೇಳೋ ವ್ಯವಧಾನ ಇವರದಲ್ಲ. ಅಂಥ ಭೂಪನೊಬ್ಬನಿಗೆ ಪೊಲೀಸ್‌ರು ಈಗ ಸರಿಯಾಗಿ ಬುದ್ದಿ ಕಲಿಸಿದ್ದಾರೆ.

ಹೌದು ತುಮಕೂರು ಜಿಲ್ಲೆ ಶಿರಾ ಪಟ್ಟಣವನ್ನ ಕಂಟೈನ್ಮೆಂಟ್‌ ಜೋನ್‌ ಅಂತಾ ಸರ್ಕಾರ ಘೋಷಣೆ ಮಾಡಿದೆ. ಇದಕ್ಕೆ ಕಾರಣ ಹೆಚ್ಚುತ್ತಿರುವ ಪಾಸಿಟಿವ್‌ ಪ್ರಕರಣಗಳು. ಆದ್ರೂ ಇಲ್ಲಿನ ಅತೀ ಜಾಣನೊಬ್ಬ ಸುತ್ತಾಡಿದ್ರೆ ಏನಾಗುತ್ತೆ ಅಂತಾ ಆಂಧ್ರದಲ್ಲಿರೋ ಹಿಂದೂಪುರದ ಮಾವನ ಮನೆಗೆ ಹೋಗಿದ್ದಾನೆ.

ಕುಟುಂಬದ ಆರು ಜನರಿಗೆ ಕೊರೊನಾ ಹಬ್ಬಿಸಿದ, ಹೇಗೆ?
ಹೋಗಿದ್ದೇನು ಅಪರಾಧ ಅಲ್ಲ ಬಿಡಿ. ಆದ್ರೆ ಆತ ಕೊರೊನಾ ಸೋಂಕಿತ ಪೇಶಂಟ್‌ ನಂಬರ್‌ 5813 ಅನ್ನೋದೇ ವಿಷ್ಯ ಇಲ್ಲಿ. ಮಾವನ ಮನೆಗೆ ಹೋಗಿದ್ದಷ್ಟೇ ಅಲ್ಲ. ಅಲ್ಲಿಂದ ಹೆಂಡತಿ ಮತ್ತು ಮಕ್ಕಳನ್ನ ಬೈಕ್‌ನಲ್ಲಿ ಕರೆದುಕೊಂಡು ಬಂದಿದ್ದಾನೆ. ಪರಿಣಾಮ ಈಗ ಅವರೂ ಸೇರಿದಂತೆ ಕುಟುಂಬದ ಆರು ಜನರೀಗ ಕೊರೊನಾ ಪಾಸಿಟಿವ್‌.

ವಿಷಯ ಗೊತ್ತಾಗ್ತಿದ್ದಂತೆ ಶಿರಾ ಪೊಲೀಸ್‌ರು ಕೆಂಡಾಮಂಡಲವಾಗಿದ್ದಾರೆ. ಕಾನೂನು ಉಲ್ಲಂಘಿಸಿದ್ದಲ್ಲದೇ, ಹೇಳದೆ ಕೇಳದೆ ಬೇರೊಂದು ರಾಜ್ಯಕ್ಕೆ ಹೋಗಿದ್ದು, ಅದನ್ನೂ ಮುಚ್ಚಿಟ್ಟು  ಮತ್ತು ಇತರರಿಗೆ ಕೊರೊನಾ ಹಬ್ಬಿಸಿದ್ದಕ್ಕೆ ಅವನ ಮೇಲೆ ಕೇಸ್‌ ಜಡಿದಿದ್ದಾರೆ.  ಈ ಸಂಬಂಧ ಶಿರಾ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಅವನ ವಿರುದ್ಧ ಪ್ರಕರಣ ದಾಖಲಾಗಿದೆ.

Published On - 4:08 pm, Sun, 14 June 20