ಬಾಲಕರ ಜೊತೆ ಅಪ್ರಾಪ್ತ ವಯಸ್ಸಿನ ಬಾಲಕಿಯರು ಪರಾರಿ, ಮಿಸ್ಸಿಂಗ್ ಟೀನೇಜರ್ಸ್​ ಕಾಫಿ ಎಸ್ಟೇಟ್​ನಲ್ಲಿ ಪತ್ತೆಯಾದ್ರು!

| Updated By: ಸಾಧು ಶ್ರೀನಾಥ್​

Updated on: Dec 31, 2021 | 10:18 AM

ಶಿವಮೊಗ್ಗ ಜಿಲ್ಲೆಯ ಅಪ್ರಾಪ್ತೆ ಮತ್ತು ಶಿವಗಂಗೆ ಸುಧಾಕರ ಸಂಬಂಧದಲ್ಲಿ ಅಣ್ಣ-ತಂಗಿ ಆಗಿದ್ದಾರೆ. ಮಾಹಿತಿ ತಿಳಿದಿದ್ದರೂ ಕೂಡ ಪೋಷಕರಿಗೆ ಯಾಮಾರಿಸಿ ಮನೆಬಿಟ್ಟು ಹೋಗಿದ್ದಾರೆ. ಸದ್ಯ ಕೋಳಾಲ ಪಿಎಸ್​ಐ ಮಹಾಲಕ್ಷ್ಮಿ ನೇತೃತ್ವದ ತಂಡ ಚಿಕ್ಕಮಗಳೂರು ಸಮೀಪದ ಬೇಲೂರಿನ ಕಾಫಿ ಎಸ್ಟೇಟ್ ನಲ್ಲಿ ನಾಲ್ಕೂ ಜನರನ್ನು ಬಂಧಿಸಿ ಕರೆತಂದಿದ್ದಾರೆ.

ಬಾಲಕರ ಜೊತೆ  ಅಪ್ರಾಪ್ತ ವಯಸ್ಸಿನ ಬಾಲಕಿಯರು ಪರಾರಿ, ಮಿಸ್ಸಿಂಗ್ ಟೀನೇಜರ್ಸ್​ ಕಾಫಿ ಎಸ್ಟೇಟ್​ನಲ್ಲಿ ಪತ್ತೆಯಾದ್ರು!
ಸಾಂಕೇತಿಕ ಚಿತ್ರ
Follow us on

ತುಮಕೂರು: ಶವಸಂಸ್ಕಾರ ಕಾರ್ಯಕ್ಕೆಂದು ಪೋಷಕರ ಜೊತೆಗೆ ಬಂದಿದ್ದ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರು ತಮ್ಮಿಷ್ಟದಂತೆ ಬಾಲಕರ ಜೊತೆ ಪರಾರಿಯಾದ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ದೊಡ್ಡಸಾಗ್ಗೆರೆಯಲ್ಲಿ ನಡೆದಿತ್ತು. ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಧ್ಯವೆಂಕಟಾಪುರ ಗ್ರಾಮದ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರು ರಾಮನಗರ ಜಿಲ್ಲೆಯ ಯುವಕ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಪ್ರಾಪ್ತ ಬಾಲಕನ ಜೊತೆ ಪೋಷಕರನ್ನ ಯಾಮಾರಿಸಿ ಪರಾರಿಯಾಗಿರುವ ಬಗ್ಗೆ ಕಾಣೆಯಾದವರು ಪ್ರಕರಣ (Missing Case) ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಕೋಳಾಲ ಪೊಲೀಸರು ತನಿಖೆ ಶುರು ಮಾಡಿದ್ದರು. ಈ ವೇಳೆ ಶಿವಮೊಗ್ಗ ನಗರದ ಮಾಣಿಕ್ಯ ಎಂಬುವರ ಕುಟುಂಬ ಕೊರಟಗೆರೆ ತಾಲೂಕಿನ ದೊಡ್ಡಸಾಗ್ಗೆರೆ ಸಂಬಂದಿಕರ ಶವಸಂಸ್ಕಾರ ಕಾರ್ಯಕ್ಕೆ ಬಂದಾಗ, ಕಾರ್ಯ ಮುಗಿದ ಬಳಿಕ 16 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿ, ರಾಮನಗರ ಜಿಲ್ಲೆಯ ಕುದೂರಿನ ಶಿವಗಂಗೆಯ ಸುಧಾಕರ ಹಾಗೂ ಮಧ್ಯವೆಂಕಟಾಪುರ ಗ್ರಾಮದ 14 ವರ್ಷದ ಅಪ್ರಾಪ್ತೆ ದಾಬಸ್ ಪೇಟೆಯ ಸೋಂಪುರ ಹೋಬಳಿಯ 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕನ ಜೊತೆ ಪರಾರಿಯಾಗಿದ್ದರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ‌.

ಮಿಸ್ಸಿಂಗ್ ಟೀನೇಜರ್ಸ್​ ಕಾಫಿ ಎಸ್ಟೇಟ್​ನಲ್ಲಿ ಪತ್ತೆಯಾದ್ರು!
ಇನ್ನು ಶಿವಮೊಗ್ಗ ಜಿಲ್ಲೆಯ ಅಪ್ರಾಪ್ತೆ ಮತ್ತು ಶಿವಗಂಗೆ ಸುಧಾಕರ ಸಂಬಂಧದಲ್ಲಿ ಅಣ್ಣ-ತಂಗಿ ಆಗಿದ್ದಾರೆ. ಮಾಹಿತಿ ತಿಳಿದಿದ್ದರೂ ಕೂಡ ಪೋಷಕರಿಗೆ ಯಾಮಾರಿಸಿ ಮನೆಬಿಟ್ಟು ಹೋಗಿದ್ದಾರೆ. ಸದ್ಯ ಕೋಳಾಲ ಪಿಎಸ್​ಐ ಮಹಾಲಕ್ಷ್ಮಿ ನೇತೃತ್ವದ ತಂಡ ಚಿಕ್ಕಮಗಳೂರು ಸಮೀಪದ ಬೇಲೂರಿನ ಕಾಫಿ ಎಸ್ಟೇಟ್ ನಲ್ಲಿ ನಾಲ್ಕೂ ಜನರನ್ನು ಬಂಧಿಸಿ ಕರೆತಂದಿದ್ದಾರೆ. ಸದ್ಯ ಇವರಿಗೆ ನ್ಯಾಯಾಂಗ ಬಂಧನದ ನಡುವೆ ಪರಿವೀಕ್ಷಣಾಲಯಕ್ಕೆ ಕಳುಹಿಸಲಾಗಿದೆ. ಕೋಳಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ನ್ಯಾಯಂಗ ಬಂಧನದಲ್ಲಿದ್ದ ಮುಖ್ಯ ಶಿಕ್ಷಕ ಡಿಸ್​ಮಿಸ್​:
ತುಮಕೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ನ್ಯಾಯಂಗ ಬಂಧನದಲ್ಲಿರುವ ಮುಖ್ಯ ಶಿಕ್ಷಕನನ್ನು ಶಿಕ್ಷಣ ಇಲಾಖೆ ಅಮಾನತು ಮಾಡಿದೆ. ಮಧುಗಿರಿ ಡಿಡಿಪಿಐ ಕೃಷ್ಣಮೂರ್ತಿ ಈ ಸಂಬಂಧ ಆದೇಶ ಜಾರಿ ಮಾಡಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ಸರ್ಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಮಹಮ್ಮದ್ ಇಕ್ಬಾಲ್ ಅಮಾನತುಗೊಂಡ ಟೀಚರ್.

ಆರನೇ ತರಗತಿ ವಿದ್ಯಾರ್ಥಿನಿಯನ್ನ ಶಾಲೆ ಬಿಟ್ಟ ಬಳಿಕ ವಿಶೇಷ ತರಗತಿ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಈತನ ಮೇಲಿತ್ತು. ತನ್ನ ಕಚೇರಿಗೆ ಕರೆಸಿ 50 ರೂ ಕೊಡ್ತಿನೆಂದು ಪುಸಲಾಯಿಸಿ, ಲೈಂಗಿಕ ಕಿರುಕುಳ ನೀಡಿರುವುದಾಗಿ ವಿದ್ಯಾರ್ಥಿನಿ ಆರೋಪಿಸಿದ್ದಳು. ಪೋಷಕರು ಶಿರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತುಮಕೂರು ವಿಶೇಷ ಕೋರ್ಟ್ ಶಿಕ್ಷಕನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಅಮಾನತು ಮಾಡಿ ಮಧುಗಿರಿ ಶೈಕ್ಷಣಿಕ ಜಿಲ್ಲೆ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.
-ಮಹೇಶ್, ಟಿವಿ 9, ತುಮಕೂರು

Published On - 9:58 am, Fri, 31 December 21