ಕೈಬೀಸಿ ಕರೆಯುತ್ತಿದೆ ದೇವರಾಯನದುರ್ಗ; ಹಚ್ಚಹಸಿರಿನ ಪ್ರಕೃತಿ ಸೊಬಗನ್ನು ಸವಿಯಲು ಹರಿದು ಬರುತ್ತಿದೆ ಪ್ರವಾಸಿಗರ ದಂಡು

ಎತ್ತ ನೋಡಿದ್ರೂ ಹಸಿರು. ಎತ್ತಾ ನೋಡಿದ್ರೂ ಹಸಿರ ಬನಸಿರಿ. ಬೆಟ್ಟಗುಡ್ಡಗಳ ನಡುವೆ, ಹಚ್ಚಹಸಿರಿನ ನಡುವೆ ಇರೋ ರಸ್ತೆಯಲ್ಲಿ ಸಾಗೋದೆ ಒಂದು ಆನಂದ. ಇಲ್ಲಿ ಸಾಗೋದೆ ಅದೇನೋ ಖುಷಿ.. ಅಷ್ಟಕ್ಕೂ ನಿರಂತರ ಮಳೆಯಿಂದ ಭರಪೂರ ನೀರು ಹೀರಿಕೊಂಡಿದ್ದ ದೇವರಾಯನದುರ್ಗ ಈಗ ಹಚ್ಚಹಸಿರಿನಲ್ಲಿ ಕಂಗೊಳಿಸುತ್ತಿದೆ.

ಕೈಬೀಸಿ ಕರೆಯುತ್ತಿದೆ ದೇವರಾಯನದುರ್ಗ; ಹಚ್ಚಹಸಿರಿನ ಪ್ರಕೃತಿ ಸೊಬಗನ್ನು ಸವಿಯಲು ಹರಿದು ಬರುತ್ತಿದೆ ಪ್ರವಾಸಿಗರ ದಂಡು
ದೇವರಾಯನದುರ್ಗ
Edited By:

Updated on: Dec 28, 2021 | 11:08 AM

ತುಮಕೂರು: ಅಕಾಲಿಕ ಮಳೆ ಸೌಂದರ್ಯಕ್ಕೆ ಕಾರಣವಾಗಿದೆ. ನಿರಂತರ ಸುರಿದ ವರ್ಷಧಾರೆ ಆ ಕ್ಷೇತ್ರದ ಸೊಬಗನ್ನ ಹೆಚ್ಚಿಸಿದೆ. ಚಳಿಯ ಹೊಡೆತಕ್ಕೆ, ಬಿಸಿಲಿನ ತಾಪಕ್ಕೆ ಬಾಡಿ ಹೋಗ್ತಿದ್ದ ಗಿಡಮರಗಳೆಲ್ಲಾ ಇನ್ನೂ ಹಚ್ಚಹಸಿರಿನಿಂದ ಕೂಡಿವೆ. ಅಷ್ಟಕ್ಕೂ ದೇವರಾಯನದುರ್ಗದ ಪ್ರಕೃತಿಯ ಸಿರಿ ಇಲ್ಲಿದೆ.

ಎತ್ತ ನೋಡಿದ್ರೂ ಹಸಿರು. ಎತ್ತಾ ನೋಡಿದ್ರೂ ಹಸಿರ ಬನಸಿರಿ. ಬೆಟ್ಟಗುಡ್ಡಗಳ ನಡುವೆ, ಹಚ್ಚಹಸಿರಿನ ನಡುವೆ ಇರೋ ರಸ್ತೆಯಲ್ಲಿ ಸಾಗೋದೆ ಒಂದು ಆನಂದ. ಇಲ್ಲಿ ಸಾಗೋದೆ ಅದೇನೋ ಖುಷಿ.. ಅಷ್ಟಕ್ಕೂ ನಿರಂತರ ಮಳೆಯಿಂದ ಭರಪೂರ ನೀರು ಹೀರಿಕೊಂಡಿದ್ದ ದೇವರಾಯನದುರ್ಗ ಈಗ ಹಚ್ಚಹಸಿರಿನಲ್ಲಿ ಕಂಗೊಳಿಸುತ್ತಿದೆ.

ಹಸಿರಸಿರಿ ಕಣ್ತುಂಬಿಕೊಳ್ಳಲು ಪ್ರವಾಸಿಗರ ಲಗ್ಗೆ
ಈ ಸುಂದರ, ರಮಣೀಯ ದೃಶ್ಯಕಾವ್ಯ ಕಣ್ಣಿಗೆ ಎದುರಾಗೋದು ತುಮಕೂರು ಜಿಲ್ಲೆಯಲ್ಲಿ. ನವೆಂಬರ್‌ನಲ್ಲಿ ಸುರಿದ ಆಕಾಲಿಕ ಮಳೆಗೆ ತುಮಕೂರು ತಾಲೂಕಿನ ದೇವರಾಯನದುರ್ಗ ಹಾಗೂ ನಾಮದ ಚಿಲುಮೆಯ ಪ್ರಕೃತಿ ಸೊಬಗು ಇನ್ನೂ ಹಸಿರಾಗುವಂತೆ ಮಾಡಿದೆ. ಈ ದಿನಗಳಲ್ಲಿ ಒಣಗಿ ಸೊರಗಿರುತ್ತಿದ್ದ ಗಿಡಮರಗಳು, ಹೆಚ್ಚು ಮಳೆಯಿಂದಾಗಿ ಇನ್ನೂ ಹಸಿರುಮಯವಾಗಿವೆ. ರಸ್ತೆಯ ಅಕ್ಕಪಕ್ಕದಲೆಲ್ಲಾ ಹಸಿರೇ ಕಾಣ್ತಿದೆ. ಈ ಸುಂದರ ಸೊಬಗು ಸವಿಯೋಕೆ ತುಮಕೂರಿನ ಬಹುತೇಕ ಮಂದಿ ವಾಕ್ ಮೂಲಕ ಪ್ರತಿನಿತ್ಯ ಬೆಟ್ಟಕ್ಕೆ ಬರ್ತಿದ್ದಾರೆ

ಇನ್ನೂ ದೇವರಾಯನದುರ್ಗ ಬೆಟ್ಟದ ಮೇಲೆ ಯೋಗ ನರಸಿಂಹ ಸ್ವಾಮಿ, ಭೋಗನರಸಿಂಹ ಸ್ವಾಮಿ ದೇವಾಲಯ ಗಳಿದ್ದು ದೇವರ ದರ್ಶನ ಪಡೆದು ಪ್ರಕೃತಿಯನ್ನ ಸವೆಯಬಹುದು. ಬೆಂಗಳೂರಿನ ಹತ್ತಿರದ ಪ್ರವಾಸಿ ಸ್ಥಳಗಳ ಪೈಕಿ ನಂದಿ ಬೆಟ್ಟ ಬಿಟ್ಟರೇ ದೇವರಾಯನದುರ್ಗ ನಾಮದಚಿಲುಮೆಯೇ ಪ್ರಸಿದ್ಧ ಪ್ರವಾಸಿ ತಾಣ. ಹೀಗಾಗಿ ಬೆಂಗಳೂರಿನಿಂದಲೂ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ. ವಿದ್ಯಾರ್ಥಿಗಳು ಕೂಡಾ ಟ್ರಕ್ಕಿಂಗ್‌ ಅಂತಾ ಇಲ್ಲಿ ರೌಂಡ್ಸ್‌ ಹಾಕಿ ಪ್ರಕೃತಿಯ ಚೆಲುವನ್ನ ಕಣ್ತುಂಬಿಕೊಳ್ತಿದ್ದಾರೆ.

ಒಟ್ನಲ್ಲಿ ನಿರಂತರ ಸುರಿದ ಮಳೆಗೆ ದೇವರಾಯನದುರ್ಗ ನಾಮದಚಿಲುಮೆ ಹಸಿರುಮಯವಾಗಿದ್ದು, ಇಲ್ಲಿಯ ಅರಣ್ಯ ಕೈ ಬೀಸಿ ಕರೆಯುತ್ತಿದೆ. ಇನ್ನೂ ಯಾಕ್‌ ತಡ ನೀವೂ ಕೂಡಾ ಒಮ್ಮೆ ಇಲ್ಲಿಗೆ ಭೇಟಿ ನೀಡಿ ಪ್ರಕೃತಿಯ ಸಿರಿಯನ್ನ ಕಣ್ತುಂಬಿಕೊಳ್ಳಿ.

ವರದಿ: ಮಹೇಶ್, ಟಿವಿ9 ತುಮಕೂರು

ದೇವರಾಯನದುರ್ಗ

ಇದನ್ನೂ ಓದಿ: ಮಾನವನ ಮುಖವನ್ನು ಹೋಲುವ ಮರಿಗೆ ಜನ್ಮ ನೀಡಿದ ಮೇಕೆ