ನನ್ನಲ್ಲಿರೋದು ಅಸಲಿ ಹುಲಿ ಉಗುರಿನ ಪೆಂಡೆಂಟ್ ಅಲ್ಲ, ಅದು ಕೃತ್ರಿಮ ಮತ್ತು ಭಕ್ತರೊಬ್ಬರು ಉಡುಗೊರೆಯಾಗಿ ನೀಡಿದ್ದು: ಧನಂಜಯ ಗುರೂಜಿ

ಅರುಣ್​ ಕುಮಾರ್​ ಬೆಳ್ಳಿ

Updated on: Oct 25, 2023 | 5:56 PM

ಜಾತ್ರೆ ಸಮಯದಲ್ಲಿ ಭಕ್ತಾದಿಗಳಿಗೆ ಊಟ, ನೀರು ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ದೇವಸ್ಥಾನ ಸಮಿತಿ ವತಿಯಿಂದ ಕಲ್ಪಿಸಲಾಗುತ್ತದೆ ಹಾಗೆಯೇ, ವ್ಯಾಪಾರಿಗಳಿಗೆ ಸ್ಟಾಲ್ ಗಳನ್ನು ಹಾಕುವ ವ್ಯವಸ್ಥೆ ಕೂಡ ಮಾಡಿಕೊಡಲಾಗುವುದು ಎಂದು ಗುರೂಜಿ ಹೇಳಿದರು. ಹಾಗೆ ಸ್ಟಾಲ್ ಹಾಕಿದವರ ಪೈಕಿ ಒಬ್ಬ ವ್ಯಾಪಾರಿ ತನಗೆ ಹುಲಿ ಉಗುರಿನಂತೆ ಕಾಣುವ ಆ್ಯಂಟಿಕ್ ಪೀಸನ್ನು ಉಡುಗೊರೆಯಾಗಿ ನೀಡಿದ್ದರು ಎಂದು ಗುರೂಜಿ ಹೇಳಿದರು.   

ತುಮಕೂರು: ಹುಲಿ ಉಗುರು ಧರಿಸಿದ ಆರೋಪಕ್ಕೆ ಒಳಗಾಗಿರುವ ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬಿದನಗೆರೆಯಲ್ಲಿರುವ ಶನೈಶ್ವರ ದೇವಸ್ಥಾನದ ಧರ್ಮದರ್ಶಿ ಧನಂಜಯ ಗುರೂಜಿ (Dhananjaya Guruji) ಟಿವಿ9 ಕನ್ನಡ ವಾಹಿನಿಯ ತುಮಕೂರು ವರದಿಗಾರನಿಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಗುರೂಜಿ ಹೇಳುವ ಪ್ರಕಾರ ಅವರ ಬಳಿ ಇರೋದು ಅಸಲಿ ಹುಲಿ ಉಗುರಿನ ಪೆಂಡಂಟ್ ಅಲ್ಲವೇ ಅಲ್ಲ, ಅದು ಕೃತ್ರಿಮ (fake) ಆಗಿದ್ದು ಭಕ್ತರೊಬ್ಬರು (ವ್ಯಾಪಾರಿ) ಅವರಿಗೆ 2018 ರಲ್ಲಿ ಗಿಫ್ಟ್ ರೂಪದಲ್ಲಿ ನೀಡಿದ್ದಾರೆ. ಕಳೆದ 17-18 ವರ್ಷಗಳಿಂದ ಬಿದನಗೆರೆ ಶನೈಶ್ವರ ದೇವಸ್ಥಾನ ಜಾತ್ರೆಯನ್ನು ಆಯೋಜಿಲಾಗುತ್ತದೆ ಮತ್ತು ಸಾವಿರಾರು ಭಕ್ತರು ಜಾತ್ರೆಗೆ ಆಗಮಿಸುತ್ತಾರೆ ಎಂದು ಹೇಳಿದ ಧನಂಜಯ ಗುರೂಜಿ, ಜಾತ್ರೆ ಸಮಯದಲ್ಲಿ ಭಕ್ತಾದಿಗಳಿಗೆ ಊಟ, ನೀರು ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ದೇವಸ್ಥಾನ ಸಮಿತಿ ವತಿಯಿಂದ ಕಲ್ಪಿಸಲಾಗುತ್ತದೆ ಹಾಗೆಯೇ, ವ್ಯಾಪಾರಿಗಳಿಗೆ (vendors) ಸ್ಟಾಲ್ ಗಳನ್ನು ಹಾಕುವ ವ್ಯವಸ್ಥೆ ಕೂಡ ಮಾಡಿಕೊಡಲಾಗುವುದು ಎಂದು ಗುರೂಜಿ ಹೇಳಿದರು. ಹಾಗೆ ಸ್ಟಾಲ್ ಹಾಕಿದವರ ಪೈಕಿ ಒಬ್ಬ ವ್ಯಾಪಾರಿ ತನಗೆ ಹುಲಿ ಉಗುರಿನಂತೆ ಕಾಣುವ ಆ್ಯಂಟಿಕ್ ಪೀಸನ್ನು ಉಡುಗೊರೆಯಾಗಿ ನೀಡಿದ್ದರು ಎಂದು ಗುರೂಜಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  

 

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.