Sign In

By signing in or creating an account, you agree with Associated Broadcasting Company's Terms & Conditions and Privacy Policy.

Tiger Claw Pendant: ಹುಲಿ ಉಗುರಿನ ಸುಳಿಯಲ್ಲಿ ಸಿಲುಕಿದ ಕರ್ನಾಟಕದ ಮತ್ತೋರ್ವ ಗುರೂಜಿ!

ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10ರ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಹುಲಿ ಉಗುರು ಧರಿಸಿದ ಪ್ರಕರಣದಲ್ಲಿ ಬಂಧನ ಬಳಿಕ ರಾಜ್ಯಾದ್ಯಂತ ಹುಲಿ ಉಗುರು ಪ್ರಕರಣಗಳು ಒಂದೊಂದೇ ಬೆಳಕಿಗೆ ಬರುತ್ತಿವೆ. ಇದೀಗ ಇದೇ ರೀತಿ ಪ್ರಕರಣದಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬಿದನಗೆರೆಯ ಶನಿಮಹಾತ್ಮ ದೇವಾಲಯದ ಅರ್ಚಕ ಧನಂಜಯ ಗುರೂಜಿಗೆ ಸಂಕಷ್ಟ ಎದುರಾಗಿದೆ.

Tiger Claw Pendant: ಹುಲಿ ಉಗುರಿನ ಸುಳಿಯಲ್ಲಿ ಸಿಲುಕಿದ ಕರ್ನಾಟಕದ ಮತ್ತೋರ್ವ ಗುರೂಜಿ!
ಧನಂಜಯ ಗುರೂಜಿ ಚೈನಗಳ ಪರಿಶೀಲನೆ
Follow us
ಮಹೇಶ್ ಇ, ಭೂಮನಹಳ್ಳಿ
| Updated By: Digi Tech Desk

Updated on:Oct 26, 2023 | 12:34 PM

ತುಮಕೂರು, (ಅಕ್ಟೋಬರ್ 25): ಹುಲಿ (tiger )ಉಗುರು ಧರಿಸಿದ್ದಕ್ಕೆ ಬಿಗ್​ ಬಾಸ್​ ಸ್ಪರ್ಧಿ ವರ್ತೂರ್ ಸಂತೋಷ್ ಬಂಧನದ ಬೆನ್ನಲ್ಲೇ ಹಲವರಿಗೆ ಢವ ಢವ ಶುರುವಾಗಿದೆ. ಹೌದು…ಹುಲಿ ಉಗುರಿನ ಲಾಕೆಟ್​(tiger claw pendant) ಧರಿಸಿಕೊಂಡಿದ್ದು, ಇದೀಗ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅದರಂತೆ ಇದೀಗ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬಿದನಗೆರೆಯ ಶನಿಮಹಾತ್ಮ ದೇವಾಲಯದ ಅರ್ಚಕ ಧನಂಜಯ ಗುರೂಜಿ (dhananjaya guruji) ಈ ಹುಲಿ ಉಗುರಿನ ಸುಳಿಯಲ್ಲಿ ಸಿಲುಕಿದ್ದಾರೆ.

ದೇವಾಲಯದ ಬಳಿ ಬಸವೇಶ್ವರ ಮಠ ಸ್ಥಾಪಿಸಿ ಗುರೂಜಿಯಾಗಿರುವ ಅರ್ಚಕ. ಮಠದ ಸ್ವಾಮೀಜಿಯಾದ ಬಳಿಕ ಮೈ ತುಂಬಾ ಬಂಗಾರದ ಓಡವೆ ಧರಿಸುತ್ತಿರುವ ಸ್ವಾಮೀಜಿ. ಒಡವೆಗಳ ಜೊತೆಗೆ ಕೊರಳಿಗೆ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಧನಂಜಯ ಗುರೂಜಿಯ ಫೋಟೊ ವೈರಲ್ ಆಗಿದೆ. ಇದರ ಬೆನ್ನಲ್ಲೇ ಇದೀಗ ಅರಣ್ಯ ಇಲಾಖೆ ಅಧಿಕಾರಿ, ಬಿದನಗೆರೆ ದೇವಾಲಯಕ್ಕೆ ತರೆಳಿ ಹುಲಿ ಉಗುರಿನ ಬಗ್ಗೆ ತನಿಖೆ ನಡೆಸಿದ್ದಾರೆ. ಕುಣಿಗಲ್ ವಲಯ ಅರಣ್ಯಾಧಿಕಾರಿ ಜಗದೀಶ್ ಅವರು ಧನಂಜಯಸ್ವಾಮಿಯ ಚಿನ್ನದ ಚೈನ್ ಗಳನ್ನ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ವಿನಯ್ ಗುರೂಜಿ ಆಶ್ರಮದಲ್ಲಿದ್ದ ಹುಲಿ ಚರ್ಮದ ದಾಖಲೆಗಳ ಪ್ರತಿ TV9ಗೆ ಲಭ್ಯ, ದಾಖಲಾತಿಯಲ್ಲೇನಿದೆ?

ಅದು ಅರ್ಟಿಫಿಶಿಯಲ್ ತುಂಬಾ ದಿನಗಳಿಂದ ಹಾಕಿದ್ದರಿಂದ ಕಪ್ಪು ಬಣ್ಣಕ್ಕೆ ತಿರುಗಿತ್ತು. ಹೀಗಾಗಿ ಅದನ್ನ ಎಸೆದಿದ್ದೇನೆ ಎಂದು ಧನಂಜಯಸ್ವಾಮಿ ಅರಣ್ಯಾಧಿಕಾರಿ ಮುಂದೆ ಹೇಳಿಕೆ ನೀಡಿದ್ದಾರೆ. ಆದ್ರೆ, ಧನಂಜಯಸ್ವಾಮಿ ಹೇಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಜಿಲ್ಲಾ ಅರಣ್ಯಾಧಿಕಾರಿ ಅನುಪಮಾ, ಎಸೆದಿರುವ ಉಗುರಿನ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ಅರ್ಟಿಫಿಶಿಯಲ್ ಉಗುರನ್ನ ಅವರಿಂದ ಪಡೆದು ಎಫ್ಎಸ್ಎಲ್ ಪರೀಕ್ಷೆಗೆ ಕಳಿಸಲಾಗುವುದು. ಒಂದು ವೇಳೆ ಇಂದು ಉಗುರು ಸಿಗದಿದ್ದರೆ, ಸರ್ಚ್ ವಾರಂಟ್ ಪಡೆದು ಹುಡುಕಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತ ಮೈ ಮೇಲೆ ಕೆ.ಜಿ ಗಟ್ಟಲೆ ಬಂಗಾರ ಸುರಿದು ಕೊಳ್ಳುವ ವ್ಯಕ್ತಿ ಆರ್ಟಿಫಿಶಿಯಲ್ ಹುಲಿ ಉಗರನ್ನ ಹೇಗೆ ಧರಿಸುವುದಕ್ಕೆ ಸಾಧ್ಯ ಎಂದು ಸಾರ್ವಜನಿಕರಲ್ಲಿ ಚರ್ಚೆ ನಡೆದಿವೆ.

ಒಟ್ಟಿನಲ್ಲಿ ವರ್ತೂರ್ ಸಂತೋಷ್​ ಪ್ರಕರಣದ ಬೆನ್ನಲ್ಲೇ ರಾಜ್ಯಾದ್ಯಂತ ಹುಲಿ ಉಗುರು ಭಾರೀ ಸದ್ದು ಮಾಡುತ್ತಿದ್ದು, ಇದೀಗ ಇದರಲ್ಲಿ ಕುಣಿಗಲ್​ನ ಬಿದನಗೆರೆ ಧನಂಜಯ ಸ್ವಾಮಿಗೆ ಸಂಕಷ್ಟ ಎದುರಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:13 am, Wed, 25 October 23

ಮಾ 22ರಂದು ಶಾಲಾ-ಕಾಲೇಜು​ ರಜೆ ಬಗ್ಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ
ಮಾ 22ರಂದು ಶಾಲಾ-ಕಾಲೇಜು​ ರಜೆ ಬಗ್ಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ
ಲಕ್ನೋ ರಸ್ತೆ ಮಧ್ಯೆ ಕುಳಿತು 20 ನಿಮಿಷ ತಲೆ ಅಲ್ಲಾಡಿಸಿದ ಮಹಿಳೆ!
ಲಕ್ನೋ ರಸ್ತೆ ಮಧ್ಯೆ ಕುಳಿತು 20 ನಿಮಿಷ ತಲೆ ಅಲ್ಲಾಡಿಸಿದ ಮಹಿಳೆ!
ಪತಿಯೊಂದಿಗೆ ಜಗಳವಾಡಿ ಬೆಂಕಿ ಹಚ್ಚಿಕೊಂಡು ಹೆಂಡತಿ ಆತ್ಮಹತ್ಯೆ
ಪತಿಯೊಂದಿಗೆ ಜಗಳವಾಡಿ ಬೆಂಕಿ ಹಚ್ಚಿಕೊಂಡು ಹೆಂಡತಿ ಆತ್ಮಹತ್ಯೆ
ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು