ಕಾರ್ಖಾನೆ ರಸ್ತೆಗಾಗಿ ಅಡಕೆ ಮರಗಳ ತೆರವು; ರೈತರಿಗೆ ನೋಟಿಸ್ ನೀಡದೆ ತಿಪಟೂರು ತಹಶಿಲ್ದಾರ್ ಏಕಾಏಕಿ ಕಾರ್ಯಾಚರಣೆ

| Updated By: ಸಾಧು ಶ್ರೀನಾಥ್​

Updated on: Aug 24, 2021 | 11:35 AM

ಕಾರ್ಖಾನೆ ರಸ್ತೆಗಾಗಿ ಫಸಲಿಗೆ ಬಂದ ಅಡಕೆ ಮರಗಳ ತೆರವು; ರೈತರಿಗೆ ನೋಟಿಸ್ ನೀಡದೆ ತಿಪಟೂರು ತಹಶಿಲ್ದಾರ್ ಏಕಾಏಕಿ ಕಾರ್ಯಾಚರಣೆ

ಕಾರ್ಖಾನೆ ರಸ್ತೆಗಾಗಿ ಅಡಕೆ ಮರಗಳ ತೆರವು; ರೈತರಿಗೆ ನೋಟಿಸ್ ನೀಡದೆ ತಿಪಟೂರು ತಹಶಿಲ್ದಾರ್ ಏಕಾಏಕಿ ಕಾರ್ಯಾಚರಣೆ
ಕಾರ್ಖಾನೆ ರಸ್ತೆಗಾಗಿ ಫಸಲಿಗೆ ಬಂದ ಅಡಕೆ ಮರಗಳ ತೆರವು; ರೈತರಿಗೆ ನೋಟಿಸ್ ನೀಡದೆ ತಿಪಟೂರು ತಹಶಿಲ್ದಾರ್ ಏಕಾಏಕಿ ಕಾರ್ಯಾಚರಣೆ
Follow us on

ತುಮಕೂರು: ಕಾರ್ಖಾನೆ ರಸ್ತೆಗಾಗಿ ಫಸಲಿಗೆ ಬಂದ ಅಡಕೆ ಮರಗಳನ್ನು ಕತ್ತರಿಸಲಾಗಿದ್ದು, ಸ್ಥಳೀಯ ರೈತರಿಗೆ ನೋಟಿಸ್ ನೀಡದೆ ತಿಪಟೂರು ತಹಶಿಲ್ದಾರ್ ಚಂದ್ರಶೇಖರ್ ಏಕಾಏಕಿ ಕಾರ್ಯಾಚರಣೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಈಗ ಕೇಳಿಬಂದಿದೆ.

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೂಲಿಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹತ್ತು ವರ್ಷದಿಂದ ಬೆಳೆಸಿದ್ದ ಬೆಳೆಯನ್ನ ಪೊಲೀಸ್ ಭದ್ರತೆಯಲ್ಲಿ ತಹಶಿಲ್ದಾರ್ ತೆರವುಗೊಳಿಸಿದ್ದಾರೆ. ರೈತರಿಗೆ ನೋಟಿಸ್ ನೋಡದೇ ಫಸಲಿಗೆ ಬಂದ ಅಡಿಕೆ ಮರಗಳು ಮತ್ತು ತೆಂಗಿನ ಮರಗಳನ್ನುಏಕಾಏಕಿ ತೆರವುಗೊಳಿಸಿದ್ದಾರೆ ಗ್ರಾಮದ ರೈತರು ತಿಪಟೂರು ತಹಶಿಲ್ದಾರ್ ಆರ್ ಜಿ ಚಂದ್ರಶೇಖರ್ ವಿರುದ್ಧ ಆರೋಪ ಮಾಡಿದ್ದಾರೆ. ಸರ್ವೆ ನಂಬರ್ 95, 96, 97, 90, 235 ರಲ್ಲಿ ಬೆಳೆದ ಅಡಿಕೆ ತೆಂಗು ನಾಶಪಡಿಸಿದ್ದಾರೆ.

ಆದರೆ ಹೀಗೆ ಮಾಡುವ ಮುನ್ನ ರೈತರಿಗೆ ನೋಟಿಸ್ ನೀಡಿಲ್ಲ,ಪರಿಹಾರವೂ ನೀಡಿಲ್ಲ,ಸಾಲ ಮಾಡಿ ಬೆಳೆ ಬೆಳೆದಿದ್ವಿ ಅಂತಾ ರೈತರು ಅಳಲು ತೋಡಿಕೊಂಡಿದ್ದಾರೆ. ಇದ್ದಿಲು ಕಾರ್ಖಾನೆಗೆ ರಸ್ತೆಗಾಗಿ ತಹಶಿಲ್ದಾರ್ ರೈತರು ಬೆಳೆದ ಬೆಳೆಯನ್ನ ತೆರವುಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಖರಾಬ್ ಜಮೀನಿನನ್ನ ತೆರವು ಮಾಡಿ ರಸ್ತೆಗೆ ಅವಕಾಶ ಮಾಡಿಕೊಟ್ಟಿರುವುದಾಗಿ ತಹಶಿಲ್ದಾರ್ ಹೇಳಿದ್ದಾರೆ. ಇದೀಗ ಬೆಳೆ ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ. ಹೊನ್ನವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:
35 ಅಡಿಕೆ ಮರ ಕಡಿದ ದುಷ್ಕರ್ಮಿಗಳು; ದೂರು ನೀಡಿದರೂ ಕ್ರಮ ಕೈಗೊಳ್ಳದೆ ಪೊಲೀಸರ ನಿರ್ಲಕ್ಷ್ಯ

(tiptur tahsildar allegedly cut coconut trees without notice to farmers)

Published On - 11:26 am, Tue, 24 August 21