ತುಮಕೂರು: ಅಣ್ಣನ ಮಗಳ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ 30 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿ ತುಮಕೂರಿನ (Tumakuru) ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಆದೇಶ ಹೊರಡಿಸಿದೆ. ಅಲ್ಲದೆ, ಕಾನೂನು ಸೇವಾ ಪ್ರಾಧಿಕಾರದಿಂದ ಸಂತ್ರಸ್ತೆಗೆ 6 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ. ವಿಶೇಷ ಅಭಿಯೋಜಕರಾಗಿ ಕೆ.ಎಸ್.ಆಶಾ ಅವರು ವಾದ ಮಂಡಿಸಿದ್ದರು.
ರಾಕೇಶ್ ಅಲಿಯಾಸ್ ಧನಂಜಯ ಎಂಬಾತ 2020ರ ಅಕ್ಟೋಬರ್ 25 ರಂದು ತನ್ನ ಅಣ್ಣನ ಮಗಳ ಮೇಲೆ ಅತ್ಯಾಚಾರ ಎಸಗಿದ್ದನು. ಬಳಿಕ ಬಾಲಕಿಯ ಬೆತ್ತಲೆ ಫೋಟೋ ತೆಗೆದು ಬ್ಯಾಕ್ಮೇಲ್ ಮಾಡಿದ್ದನು. ವಿಷಯ ಬಾಯಿಬಿಟ್ಟರೆ ನಿನ್ನ ತಂದೆ ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು.
ಇದನ್ನು ಓದಿ: Tumkur News: ತೆಂಗಿನಕಾಯಿ ಕಾರ್ಖಾನೆಗಳ ಮೇಲೆ ದಿಢೀರ್ ದಾಳಿ: 10ಕ್ಕೂ ಹೆಚ್ಚು ಬಾಲಕಾರ್ಮಿಕರ ರಕ್ಷಣೆ
ಸಂತ್ರಸ್ತ ಬಾಲಕಿಯು ತನ್ನ ಮೇಲೆ ಚಿಕ್ಕಪ್ಪ ಎಸಗಿದ ಕೃತ್ಯವನ್ನು ಪೋಷಕರ ಮುಂದೆ ಹೇಳಿಕೊಂಡಿದ್ದಾಳೆ. ಅದರಂತೆ ಪೋಷಕರು, ತುಮಕೂರಿನ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ರಾಕೇಶ್ನನ್ನು ಬಂಧಿಸಿದ್ದರು.
ಆರೋಪಿಯನ್ನು ಬಂಧಿಸಿದ ನಂತರ ಅಂದಿನ ತನಿಖಾಧಿಕಾರಿಯಾಗಿದ್ದ ಟಿ.ಎಸ್ ರಾಧಾಕೃಷ್ಣ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಅದರಂತೆ ಅತ್ಯಾಚಾರ ಎಸಗಿರುವುದು ಸಾಬೀತಾದ ಹಿನ್ನೆಲೆ ನ್ಯಾಯಾಲಯವು ಅಪರಾಧಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ