ತುಮಕೂರು: ಮಗಳ ಕಣ್ಣೆದುರೇ ತಂದೆಯನ್ನ ಬರ್ಬರವಾಗಿ ಕೊಂದ ದುಷ್ಕರ್ಮಿಗಳು

ತುಮಕೂರಿನ ಹುಳಿಯಾರು ಸಮೀಪದ ಕೆಂಕೆರೆ ಗ್ರಾಮದಲ್ಲಿ ನಡೆದ ಅದೊಂದು ಬರ್ಬರ ಕೊಲೆಗೆ ಇಡೀ ಊರೇ ಬೆಚ್ಚಿಬಿದ್ದಿದೆ. ದುಷ್ಕರ್ಮಿಗಳ ಏಕಾಏಕಿ ದಾಳಿಗೆ ಮಗಳ ಮುಂದೆಯೇ ತಂದೆಯ ಹತ್ಯೆ ಮಾಡಲಾಗಿದೆ. ಸದ್ಯ ಹುಳಿಯಾರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕರ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.

ತುಮಕೂರು: ಮಗಳ ಕಣ್ಣೆದುರೇ ತಂದೆಯನ್ನ ಬರ್ಬರವಾಗಿ ಕೊಂದ ದುಷ್ಕರ್ಮಿಗಳು
ಪ್ರಾತಿನಿಧಿಕ ಚಿತ್ರ
Edited By:

Updated on: Jan 12, 2026 | 5:24 PM

ತುಮಕೂರು, ಜನವರಿ 12: ಅದು ಊರಿನ ಹೊರಗಿರುವ ತೋಟದ ಮನೆ. ಅಪ್ಪ ಅಮ್ಮ ಇಬ್ಬರು ಮಕ್ಕಳು ವಾಸವಾಗಿದ್ದರು. ತಾವಾಯ್ತು ನಮ್ಮ ಬದುಕಾಯ್ತು ಎಂದು ಕುಟುಂಬ ಜೀವನ ನಡೆಸುತ್ತಿತ್ತು. ಹೀಗೆ ನೆಮ್ಮದಿ ಜೀವನ ಮಾಡುತಿದ್ದವರ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ರಾತ್ರೋರಾತ್ರಿ ದುಷ್ಕರ್ಮಿಗಳ ಗುಂಪೊಂದು ಮನೆ ಯಜಮಾನನ ಮೇಲೆ ದಾಳಿ ಮಾಡಿದೆ. ಮಗಳ ಕಣ್ಣೆದುರೇ ಮಾರಕಾಸ್ತ್ರದ ದಾಳಿಗೆ ತಂದೆ (father) ಬಲಿಯಾಗಿದ್ದಾರೆ (Murder). ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಹುಳಿಯಾರು ಹೋಬಳಿಯಲ್ಲಿ ನಡೆದ ಕೃತ್ಯಕ್ಕೆ ಊರಿಗೆ ಊರೇ ಬೆಚ್ಚಿ ಬಿದ್ದಿದೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಹುಳಿಯಾರು ಹೋಬಳಿಯ ಕೆಂಕೆರೆ ನಿವಾಸಿ ಮಂಜುನಾಥ್​, ದಿನಸಿ ಅಂಗಡಿ ಹಾಗೂ ಟೆಂಟ್ ಹೌಸ್ ನಡೆಸುತ್ತಿದ್ದರು. ಊರಿನ ಹೊರಗಡೆಯ ತೋಟದ ಮನೆಯಲ್ಲಿ ವಾಸವಿದ್ದರು. ತಾನಾಯ್ತು ತಮ್ಮ ಬದುಕಾಯ್ತು ಅಂತ ನೆಮ್ಮದಿ ಜೀವನ ಸಾಗಿಸುತ್ತಿದ್ದರು. ಆದರೆ ನಿನ್ನೆ ತಡರಾತ್ರಿ ಬರ್ಬರವಾಗಿ ಹತ್ಯೆಯಾಗಿದ್ದಾರೆ.

ನಡೆದದ್ದೇನು? 

ಮಂಜುನಾಥ್ ತನ್ನಿಬ್ಬರು ಮಕ್ಕಳ ಜೊತೆ ಮನೆಯಿಂದ ಹೊರಗೆ ಬಂದಿದ್ದರು. ಟೆಂಟ್ ಹೌಸ್​ನ ಅಂಗಡಿ ಮುಂದೆ ಮಕ್ಕಳ ಜೊತೆ ಮಾತನಾಡುತ್ತಾ ಕುಳಿತಿದ್ದರಂತೆ ಆದರೆ, ಈ ವೇಳೆ ಪ್ರತ್ಯಕ್ಷರಾದ ನಾಲ್ಕೈದು ಜನರ ಗುಂಪು ಮಂಜುನಾಥ್ ಮೇಲೆ ದಾಳಿಗೆ ಮುಂದಾಗಿದ್ದಾರೆ. ಇದನ್ನು ಕಂಡ ಓರ್ವ ಮಗಳು ಮನೆಯೊಳಗೆ ಓಡಿದರೆ, ಮತ್ತೊಬ್ಬಳನ್ನು ದುಷ್ಕರ್ಮಿ ಹಿಡಿದು ಕಿರುಚಾಡದಂತೆ ಬಾಯಿ ಮುಚ್ಚಿಸಿದ್ದಾರೆ. ಆ ಬಳಿಕ ಚಾಕು ತೆಗೆದ ಹಂತಕರು ಮಂಜುನಾಥ್​ನ ಎದೆ ಭಾಗ ಸೇರಿದಂತೆ ಹಲವು ಕಡೆ ಇರಿದು ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: ಅಶ್ಲೀಲವಾಗಿ ಮೆಸೇಜ್​​, ವರದಕ್ಷಿಣೆ ಕಿರುಕುಳ: ಪೊಲೀಸ್​​ ಪತಿ ಕಾಟಕ್ಕೆ ಪತ್ನಿ ಕಂಗಾಲು

ಇನ್ನು ತಂದೆಯ ಹತ್ಯೆಯ ದೃಶ್ಯ ಕಣ್ಣಾರೆ ಕಂಡ ಮಗಳು ಬೆಚ್ಚಿಬಿದಿದ್ದಾಳೆ. ಬಳಿಕ ಆಕೆ ಮನೆಗೆ ಹೊಗಿ ತಾಯಿಗೆ ವಿಚಾರ ತಿಳಿಸಿದ್ದಾಳೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಹಂತಕರು ಮುಖಕ್ಕೆ ಮಾಸ್ಕ್ ಹಾಗೂ ಗ್ಲೌಸ್ ತೊಟ್ಟು ಎಂಟ್ರಿ ಕೊಟ್ಟಿದ್ದು, ಯಾರು ಹಾಗೂ ಯಾವ ಕಾರಣಕ್ಕೆ ಕೃತ್ಯವೆಸಗಿದ್ದಾರೆಂದು  ಪೊಲೀಸರು ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: Hubli: ಮರಣ ತಂದ ಮಹಿಳೆ ಸಂಗ; ಕೊನೆಗೂ ಬದುಕಲಿಲ್ಲ ಎಂಜಿನಿಯರ್​​!

ಸದ್ಯ ಘಟನೆ ಸಂಬಂಧ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಜುನಾಥ್ ಕೊಲೆಗೆ ಕಾರಣ ಏನೆಂಬುದು ಇನ್ನು ಪತ್ತೆಯಾಗಿಲ್ಲ. ಸದ್ಯ ಘಟನಾ ಸ್ಥಳದಲ್ಲಿ ಸಿಕ್ಕಿರುವ ಸಿಸಿಟಿವಿ ಹಾಗೂ ಮಾಹಿತಿಗಳ ಆಧರಿಸಿ ಹುಳಿಯಾರು ಪೊಲೀಸರು ತನಿಖೆ ಆರಂಭಿಸಿದ್ದು, ಆ ಬಳಿಕವಷ್ಟೇ ಮತ್ತಷ್ಟು ಸಂಗತಿಗಳು ತಿಳಿದು ಬರಲಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.