ತುಮಕೂರು: ದೇವರ ಮೂರ್ತಿ ಮೇಲೆ ಕಾಲಿಟ್ಟಿದ್ದ ಆರೋಪದಡಿ ಯುವಕನೋರ್ವನಿಗೆ ಗ್ರಾಮಸ್ಥರು ಥಳಿಸಿದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಶ್ರೀಸ್ವಾಮಿ ಕೋಟೆ ಕಲ್ಲಪ್ಪನ ಮೂರ್ತಿ ಮೇಲೆ ಚಪ್ಪಲಿ ಧರಿಸಿ ಕಾಲಿಟ್ಟಿದ್ದ ಆರೋಪದಡಿ ಗ್ರಾಮಸ್ಥರು ಶ್ರೀಕಾಂತ್ ಎಂಬ ವ್ಯಕ್ತಿಗೆ ಥಳಿಸಿದ್ದಾರೆ. ಯುವಕನ ವಿರುದ್ಧ ಮಧುಗಿರಿ ಠಾಣೆಗೆ ಗ್ರಾಮಸ್ಥರು ದೂರು ಸಲ್ಲಿಸಿದ್ದಾರೆ. ಸದ್ಯ ಆರೋಪಿ ಶ್ರೀಕಾಂತ್ ಎಂಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ; ಯುವತಿಯ ಹೇಳಿಕೆ ದಾಖಲು
ಮೈಸೂರು: ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತ ಯುವತಿಯ ಹೇಳಿಕೆಯನ್ನು ಬುಧವಾರ (ಸೆಪ್ಟೆಂಬರ್ 22) 2ನೇ ಜೆಎಂಎಫ್ಸಿ ನ್ಯಾಯಾಧೀಶರ ಎದುರು ದಾಖಲಿಸಲಾಗಿದೆ. ಸೆಕ್ಷನ್ 164 ಅಡಿಯಲ್ಲಿ ಯುವತಿಯ ಹೇಳಿಕೆಯನ್ನು ದಾಖಲಿಸಲಾಗಿದ್ದು, ಸುಮಾರು 45 ನಿಮಿಷಗಳ ಕಾಲ ಯುವತಿ ಹೇಳಿಕೆ ನೀಡಿದ್ದಾಳೆ.
ಕೊವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಏರಿಕೆ
ಬೆಂಗಳೂರು: ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 847 ಜನರಿಗೆ ಕೊವಿಡ್ ದೃಢಪಟ್ಟಿದೆ. ಈಪೈಕಿ ಬೆಂಗಳೂರು ನಗರ ಜಿಲ್ಲೆಯಲ್ಲಿ 312 ಜನರಿಗೆ, ದಕ್ಷಿಣ ಕನ್ನಡದಲ್ಲಿ 118, ಮೈಸೂರು ಜಿಲ್ಲೆಯಲ್ಲಿ 74, ಶಿವಮೊಗ್ಗ 52, ಉಡುಪಿ 48, ಹಾಸನ 46, ಚಿಕ್ಕಮಗಳೂರು 31 ಹೊಸ ಕೊವಿಡ್ 19 ಪ್ರಕರಣಗಳು ಖಚಿತಪಟ್ಟಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 1,46,772 ಜನರಿಗೆ ಕೊವಿಡ್ ಪರೀಕ್ಷೆ ಮಾಡಲಾಗಿದೆ. ಪ್ರಸ್ತುತ ಕರ್ನಾಟಕದಲ್ಲಿ 13,621 ಕೊವಿಡ್ ಸಕ್ರಿಯ ಪ್ರಕರಣಗಳಿವೆ.
ಇದೇ ಅವಧಿಯಲ್ಲಿ ಕರ್ನಾಟಕದಲ್ಲಿ ಒಟ್ಟು 20 ಜನರು ಕೊವಿಡ್ನಿಮದ ಮೃತಪಟ್ಟಿದ್ದಾರೆ. ಬೆಂಗಳೂರು ನಗರ ಜಿಲ್ಲೆ 6, ದಕ್ಷಿಣ ಕನ್ನಡದಲ್ಲಿ 5 ಅತಿ ಹೆಚ್ಚು ಜನರು ಮೃತಪಟ್ಟ ಜಿಲ್ಲೆಗಳು. ಈ ಶಂಖ್ಯೆಯನ್ನೂ ಸೇರಿಸಿ ಈವರೆಗೆ ಕರ್ನಾಟಕದಲ್ಲಿ ಕೊವಿಡ್ನಿಂದ ಮೃತಪಟ್ಟವರ ಸಂಖ್ಯೆ 37,668ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲೇ 946 ಜನರು ಕೊವಿಡ್ನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಮನೆ ಸೇರಿದ್ದಾರೆ. ಈಮೂಲಕ ಈವರೆಗೆ ಕರ್ನಾಟಕದಲ್ಲಿ ಕೊವಿಡ್ನಿಂದ ಗುನಮುಖರಾದವರ ಸಂಖ್ಯೆ 29,18,890ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ:
ವಾಹನಕ್ಕೆ ಪೆಟ್ರೋಲ್ ಬೀಳಲ್ಲ, ಆದ್ರೆ ಮೀಟರ್ ರನ್ನಿಂಗ್ ಆಗುತ್ತೆ; ತುಮಕೂರು ಬಂಕ್ನ ಮೋಸದಾಟ ಬಯಲು
Published On - 8:48 pm, Wed, 22 September 21