ತುಮಕೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆ ನೇಮಕ ವಿವಾದ; 22 ದಿನಗಳಿಂದ ಅಂಗನವಾಡಿ ಬಂದ್

ಗ್ರಾಮದಲ್ಲಿ ಶೇ.99ರಷ್ಟು ಮಂದಿ ಮುಸ್ಲಿಂ ಸಮುದಾಯದವರು ಇರುವ ಕಾರಣ ಗ್ರಾಮದಲ್ಲಿರುವವರನ್ನೇ ನೇಮಿಸಿ ಅಂತಾ ಗ್ರಾಮಸ್ಥರು ಹಿಡಿದಿದ್ದಾರೆ. ಈ ಬಗ್ಗೆ ಸುಮಾ ಅವರು ಮೇಲಾಧಿಕಾರಿಗಳಿಗೆ ಮಾಹಿಸಿ ನೀಡಿದ್ದಾರೆ.

ತುಮಕೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆ ನೇಮಕ ವಿವಾದ; 22 ದಿನಗಳಿಂದ ಅಂಗನವಾಡಿ ಬಂದ್
ಅಂಗನವಾಡಿ ಬಳಿ ಪೊಲೀಸರು ಭೇಟಿ ನೀಡಿದ್ದರು
Edited By:

Updated on: Dec 02, 2021 | 10:54 AM

ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಬೊಮ್ಮೆನಹಳ್ಳಿಪಾಳ್ಯ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಕಳೆದ 22 ದಿನಗಳಿಂದ ಗ್ರಾಮಸ್ಥರು ಬೀಗ ಜಡಿದ ಘಟನೆ ನಡೆದಿದೆ. ಗ್ರಾಮದ ಅಂಗನವಾಡಿ ಕಾರ್ಯಕರ್ತೆ ನೇಮಕದ ಬಗ್ಗೆ ವಿವಾದ ಉಂಟಾಗಿದ್ದು, ವಿವಾದ ಬಗೆಹರಿಯುವವರೆಗೂ ಬೀಗ ತೆಗೆಯಲ್ಲ ಅಂತಾ ಪಟ್ಟುಹಿಡಿದಿದ್ದಾರೆ. ಬೊಮ್ಮೆನಹಳ್ಳಿಪಾಳ್ಯ ಅಂಗನವಾಡಿ ಕೇಂದ್ರಕ್ಕೆ ತಾಲೂಕಿನ ವಿಜಯನಗರ ಕಾಲೋನಿಯ ಮಿನಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸುಮಾ ಅವರನ್ನ ಅಕ್ಟೋಬರ್ 26 ರಂದು ನೇಮಿಸಲಾಗಿತ್ತು. ನವೆಂಬರ್ 10 ರಂದು ಅಂಗನವಾಡಿ ಕೇಂದ್ರಕ್ಕೆ ಕರ್ತವ್ಯ ನಿರ್ವಹಿಸಲು ಸುಮಾ ಅವರು ಮೇಲ್ವಿಚಾರಕಿ ಜೊತೆ ಬಂದಾಗ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿ ಬೀಗ ಹಾಕಿದ್ದಾರೆ.

ಗ್ರಾಮಸ್ಥರ ಒತ್ತಾಯವೇನು?
ಗ್ರಾಮದಲ್ಲಿ ಶೇ.99ರಷ್ಟು ಮಂದಿ ಮುಸ್ಲಿಂ ಸಮುದಾಯದವರು ಇರುವ ಕಾರಣ ಗ್ರಾಮದಲ್ಲಿರುವವರನ್ನೇ ನೇಮಿಸಿ ಅಂತಾ ಗ್ರಾಮಸ್ಥರು ಹಿಡಿದಿದ್ದಾರೆ. ಈ ಬಗ್ಗೆ ಸುಮಾ ಅವರು ಮೇಲಾಧಿಕಾರಿಗಳಿಗೆ ಮಾಹಿಸಿ ನೀಡಿದ್ದಾರೆ. ಬಳಿಕ ನವೆಂಬರ್ 16 ರಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನುಷಾ ಮತ್ತು ಸಿಬ್ಬಂದಿ ಗ್ರಾಮಕ್ಕೆ ತೆರಳಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಸಿಗುವ ಸೌಲಭ್ಯ ಬಗ್ಗೆ ಮನವರಿಕೆ ಮಾಡಿದರೂ ಪ್ರಯೋಜನವಾಗಿಲ್ಲ ಅಂತ ಹೇಳಲಾಗುತ್ತಿದೆ.

ಸದ್ಯ ಯೋಜನಾಧಿಕಾರಿ ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಹೋದರೂ ಅಂಗನವಾಡಿ ಕೇಂದ್ರ ಬೀಗ ತೆರೆದಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ಗ್ರಾಮದಲ್ಲಿ ಇರೋರನ್ನೇ ನೇಮಿಸಬೇಕು ಅಂತ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಸದ್ಯ ಅಂಗನವಾಡಿ ಬಂದ್ ಆಗಿದ್ದು, ಇದಕ್ಕೆ ಪರಿಹಾರ ಯಾವಾಗ ಸಿಗುತ್ತದೆ ಅಂತ ಕಾದು ನೋಡಬೇಕಿದೆ.

ಇದನ್ನೂ ಓದಿ

ನಡು ಬೀದಿಯಲ್ಲೇ ಮಹಿಳೆ ಹಿಡಿದು ಕೊರೊನಾ ವ್ಯಾಕ್ಸಿನ್​ ಹಾಕಿಸಿದ ಕುಟುಂಬಸ್ಥರು, ವಿಡಿಯೋ ವೈರಲ್

Hindu Muslim : ‘ನಾನು ಅವನನ್ನು ಬಿಡುಗಡೆಗೊಳಿಸುವೆ ನೀನು ಅವನನ್ನು ಇಸ್ಲಾಮಿಗೆ ಮತಾಂತರಿಸಿದರೆ ಮಾತ್ರ’