ತುಮಕೂರು: ಪೆಟ್ರೋಲ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಸಾವು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 24, 2023 | 7:55 PM

ಜಿಲ್ಲೆಯ ತಿಪಟೂರು ನಗರದ ಹಿಂಡಿಸ್ಕೆರೆ ಗೇಟ್ ಬಳಿಯ ಪೆಟ್ರೋಲ್ ಟ್ಯಾಂಕ್ ಸ್ವಚ್ಚಗೊಳಿಸಲು ಇಳಿದ ಕಾರ್ಮಿಕರು ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ.

ತುಮಕೂರು: ಪೆಟ್ರೋಲ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಸಾವು
ಸಾಂದರ್ಭಿಕ ಚಿತ್ರ
Follow us on

ತುಮಕೂರು: ಜಿಲ್ಲೆಯ ತಿಪಟೂರು ನಗರದ ಹಿಂಡಿಸ್ಕೆರೆ ಗೇಟ್ ಬಳಿಯ ಪೆಟ್ರೋಲ್ ಬಂಕ್​ ಟ್ಯಾಂಕ್​ ಸ್ವಚ್ಚಗೊಳಿಸಲು ಇಳಿದ ನಾಗರಾಜು (55)ವರ್ಷ, ರವಿ (38) ಎಂಬ ಕಾರ್ಮಿಕರು ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ. ಇನ್ನು ಈ ಬಂಕ್​ ಮಾಜಿ ನಗರಸಭಾ ಸದಸ್ಯ ಪ್ರಸನ್ನಕುಮಾರ್ ರವರಿಗೆ ಸೇರಿದ್ದಾಗಿದ್ದು, ಯಾವುದೇ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳದೆ ಟ್ಯಾಂಕ್ ಸ್ವಚ್ಚಗೊಳಿಸಲು ಇಳಿಸಿದ ಕಾರಣ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಇನ್ನು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಮೃತ ದೇಹಗಳನ್ನ ಹೊರಕ್ಕೆ ತೆಗೆದು ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತು ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನ ವಶಕ್ಕೆ ಪಡೆದ ಪೊಲೀಸರು

ಬೆಳಗಾವಿ: ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿರುವ ಕಸಾಯಿ ಗಲ್ಲಿಯಿಂದ ಧಾರವಾಡದತ್ತ ಹೊರಟ್ಟಿದ್ದ ವಾಹನದಲ್ಲಿ
ಅಕ್ರಮವಾಗಿ 18ಜಾನುವಾರುಗಳನ್ನ ತುಂಬಿಕೊಂಡು ಹೋಗಲಾಗುತ್ತಿದ್ದು, ಖಚಿತ ಮಾಹಿತಿ ಮೇರೆಗೆ ಕಿತ್ತೂರು ಪೊಲೀಸ್ ಠಾಣಾ ಪೊಲೀಸರು ದಾಳಿ ನಡೆಸಿ ಲಾರಿ ಜಪ್ತಿ ಮಾಡಿ ಜಾನುವಾರುಗಳ ರಕ್ಷಣೆ ಮಾಡಿದ್ದಾರೆ.

ರ್‍ಯಾಷ್ ಡ್ರೈವಿಂಗ್​ನಿಂದ ಹಾರಿಬಿದ್ದ ಬೈಕ್ ಸವಾರರು

ವಿಜಯನಗರ: ರಾಯಲ್ ಎನ್ ಫೀಲ್ಡ್ ಬೈಕ್​ ಮೇಲೆ ಸ್ಟಂಟ್ ಮಾಡಲು ಹೋಗಿ ವಿರುಪಾಕ್ಷ ಹಾಗೂ ಮಲ್ಲಿಕಾರ್ಜುನ ಎಂಬ ಸವಾರರಿಬ್ಬರು ಹಾರಿಬಿದ್ದಿದ್ದಾರೆ. ಸ್ಪೀಡಾಗಿ ಡ್ರೈವ್ ಮಾಡಿ ಅದನ್ನ ಮತ್ತೊಬ್ಬ ಬೈಕ್​ ಸವಾರ ವಿಡಿಯೋ ಮಾಡುತ್ತಿದ್ದ ಈ ನಡುವೆ ಅಪಘಾತವಾಗಿದ್ದು, ಇಬ್ಬರು ಸವಾರರಿಗೆ ಕಾಲು ತಲೆಗೆ ಗಂಭೀರ ಗಾಯವಾಗಿದೆ. ಈ ಕುರಿತು ಹೊಸಪೇಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬೈಕ್​ನ್ನ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ:ರಸ್ತೆ ಅಪಘಾತ ಜಾಸ್ತಿಯಾಗುವುದಕ್ಕೆ ಉತ್ತಮ ರಸ್ತೆಗಳೇ ಕಾರಣ: ಮಧ್ಯಪ್ರದೇಶದ ಬಿಜೆಪಿ ಶಾಸಕ

ಕ್ಯಾಂಟರ್ ಹರಿದು ಬೈಕ್‌ನಲ್ಲಿ ಸಂಚರಿಸುತ್ತಿದ್ದ ಮಹಿಳೆ ಸಾವು

ಬೆಂಗಳೂರು: ಉತ್ತರ ತಾಲೂಕು ಮಾಚೋಹಳ್ಳಿಯಲ್ಲಿ ಕ್ಯಾಂಟರ್ ಹರಿದು ಬೈಕ್‌ನಲ್ಲಿ ಸಂಚರಿಸುತ್ತಿದ್ದ ನಳಿನಾ(34) ಸಾವನ್ನಪ್ಪಿದ್ದಾಳೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಹಾಗೂ ಚಾಲಕನನ್ನ ವಶಕ್ಕೆ ಪಡೆಯಲಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ