ಅಪಘಾತದಲ್ಲಿ ಗಾಯಗೊಂಡ ಕಲಬುರಗಿ ಯುವ ಮೋರ್ಚಾ ಪದಾಧಿಕಾರಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಗೆ ಆಗಮಿಸಿದ್ದ ವೇಳೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವ ಮೋರ್ಚಾ ಪದಾಧಿಕಾರಿಯ ಆರೋಗ್ಯವನ್ನು ವಿಚಾರಿಸಿದರು.
ಬೆಂಗಳೂರು: ಪಕ್ಷದ ಕೆಲಸ ನಿರ್ವಹಿಸಿ ವಾಪಸ್ಸಾಗುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಗಾಯಗೊಂಡಿದ್ದ ಕಲಬುರಗಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ (Kalaburagi BJP Yuva Morcha) ಪ್ರಧಾನ ಕಾರ್ಯದರ್ಶಿ ವೀರೇಂದ್ರ ಪಾಟೀಲ್ ರಾಯಕೋಡ ಅವರ ಆರೋಗ್ಯವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ವಿಚಾರಿಸಿದ್ದಾರೆ. ನಿನ್ನೆ (ಜನವರಿ 19) ಪ್ರಧಾನಿ ಮೋದಿ ಅವರು ಕಲಬುರಗಿಗೆ ಆಗಮಿಸಿದ್ದ ವೇಳೆ ಅವರನ್ನು ಸ್ವಾಗತಿಸಲು ನಿಂತಿದ್ದವರ ಪೈಕಿ ವೀರೇಂದ್ರ ಪಾಟೀಲ್ ರಾಯಕೋಡ ಅವರು ಕೂಡ ಒಬ್ಬರಾಗಿದ್ದಾರೆ. ಕೈಯಲ್ಲಿ ವಾಕಿಂಗ್ ಸ್ಟಿಕ್ ಹಿಡಿದುಕೊಂಡಿರುವುದನ್ನು ನೋಡಿದ ಮೋದಿ ವೀರೇಂದ್ರ ಅವರ ಬಳಿ ಬಂದು ಆರೋಗ್ಯ ವಿಚಾರಿಸಿದರು.
ಮಳಖೇಡ ಹೆಲಿಪ್ಯಾಡ್ನಲ್ಲಿ ಮೋದಿ ಅವರನ್ನು ಸ್ವಾಗತಿಸಲು ವೀರೇಂದ್ರ ಪಾಟೀಲ್ ರಾಯಕೋಡ ಅವರು ಕೈಯಲ್ಲಿ ವಾಕಿಂಗ್ ಸ್ಟಿಕ್ ಹಿಡಿದುಕೊಂಡು ನಿಂತಿದ್ದರು. ಈ ವೇಳೆ ವೀರೇಂದ್ರ ಅವರ ಬಳಿ ಬಂದ ಮೋದಿ, ಕಾಲಿಗೆ ಏನಾಯಿತು ಎಂದು ಕೇಳಿದ ವಿಚಾರಿಸಿದರು. ವಿಸ್ತಾರಕನಾಗಿ ಕೆಲಸ ಮುಗಿಸಿ ಬರುತ್ತಿದ್ದ ವೇಳೆ ಅಪಘಾತವಾಗಿದೆ ಎಂದು ಮೋದಿ ಬಳಿ ವೀರೇಂದ್ರ ಅವರು ಮಾಹಿತಿ ಹಂಚಿಕೊಂಡರು. ವೀರೇಂದ್ರ ಅವರು ಘಟನೆ ಬಗ್ಗೆ ಮಾತನಾಡಿದಾಗ ಬೈಕ್ನಲ್ಲಿ ಹೋಗಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ವೀರೇಂದ್ರ ಅವರು ಹೌದು ಎಂದಾಗ ಮೋದಿ ಅವರು, ಮೊದಲು ಆರಾಮಾಗು ನಂತರ ಕೆಲಸ ಮಾಡು ಎಂದು ಹೇಳಿ ರಾಯಕೋಡ ತಲೆ ಮುಟ್ಟಿ ಶುಭ ಹಾರೈಸಿದರು.
ಇದನ್ನೂ ಓದಿ: World Economic Forum: ಜಾಗತಿಕ ಪರಿಸ್ಥಿತಿ ಹದಗೆಟ್ಟ ಸಂದರ್ಭದಲ್ಲಿ ಮೋದಿ ನಾಯಕತ್ವ ನಿರ್ಣಾಯಕ; ವಿಶ್ವ ಆರ್ಥಿಕ ವೇದಿಕೆ
ಕಲಬುರಗಿಯ ಮಳಖೇಡದಲ್ಲಿ ನಿನ್ನೆ ನಡೆದ ಬಂಜಾರಾ ಸಮುದಾಯದ ಜನರಿಗೆ ಹಕ್ಕುಪತ್ರಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಿದ್ದರು. ಕಾರ್ಯಕ್ರಮಕ್ಕೆ ಮೊದಲು ಬಂಜಾರಾ ಪರಂಪರೆಯನ್ನು ಪ್ರತಿನಿಧಿಸುವ ನಗಾರಿಯನ್ನು ಪರಿಣಿತ ವಾದಕರ ಹಾಗೆ ಬಾರಿಸಿ ನೆರೆದಿದ್ದ ಲಕ್ಷಾಂತರ ಜನರನ್ನು ರಂಜಿಸಿದರು. ಅವರ ವಾದನ ಕೇಳಿದ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ