World Economic Forum: ಜಾಗತಿಕ ಪರಿಸ್ಥಿತಿ ಹದಗೆಟ್ಟ ಸಂದರ್ಭದಲ್ಲಿ ಮೋದಿ ನಾಯಕತ್ವ ನಿರ್ಣಾಯಕ; ವಿಶ್ವ ಆರ್ಥಿಕ ವೇದಿಕೆ

ಭಾರತದ ಜಿ20 ಅಧ್ಯಕ್ಷ ಸ್ಥಾನವು ನಿರ್ಣಾಯಕ ಸಮಯದಲ್ಲಿ ಬಂದಿದೆ. ಜಾಗತಿಕ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ನಾಯಕತ್ವವು ನಿರ್ಣಾಯಕವಾಗಿದೆ ಎಂದು ವಿಶ್ವ ಆರ್ಥಿಕ ವೇದಿಕೆಯ ಸ್ಥಾಪಕ, ಕಾರ್ಯನಿರ್ವಾಹಕ ಅಧ್ಯಕ್ಷ ಕ್ಲೌಸ್ ಶ್ವಾಬ್ ಬಿಡುಗಡೆ ಮಾಡಿರುವ ವಿಶೇಷ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

World Economic Forum: ಜಾಗತಿಕ ಪರಿಸ್ಥಿತಿ ಹದಗೆಟ್ಟ ಸಂದರ್ಭದಲ್ಲಿ ಮೋದಿ ನಾಯಕತ್ವ ನಿರ್ಣಾಯಕ; ವಿಶ್ವ ಆರ್ಥಿಕ ವೇದಿಕೆ
ನರೇಂದ್ರ ಮೋದಿ (ಸಂಗ್ರಹ ಚಿತ್ರ)
Follow us
|

Updated on:Jan 20, 2023 | 5:27 PM

ದಾವೋಸ್: ಭಾರತವು ತನ್ನ ಜಿ20 (G20) ಅಧ್ಯಕ್ಷತೆಯ ಅವಧಿಯಲ್ಲಿ ವಿಶ್ವದ ಎಲ್ಲ ದೇಶಗಳ ನ್ಯಾಯಯುತ ಮತ್ತು ಸಮಾನ ಬೆಳವಣಿಗೆಯನ್ನು ಉತ್ತೇಜಿಸಲಿದೆ ಎಂಬುದಾಗಿ ನಿರೀಕ್ಷಿಸುತ್ತಿದ್ದೇವೆ. ಭಾರತದ ಜಿ20 ಅಧ್ಯಕ್ಷ ಸ್ಥಾನವು ನಿರ್ಣಾಯಕ ಸಮಯದಲ್ಲಿ ಬಂದಿದೆ. ಜಾಗತಿಕ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ನಾಯಕತ್ವವು ನಿರ್ಣಾಯಕವಾಗಿದೆ ಎಂದು ಎಂದು ವಿಶ್ವ ಆರ್ಥಿಕ ವೇದಿಕೆ(World Economic Forum) ಸ್ಥಾಪಕ, ಕಾರ್ಯನಿರ್ವಾಹಕ ಅಧ್ಯಕ್ಷ ಕ್ಲೌಸ್ ಶ್ವಾಬ್ (Klaus Schwab) ಬಿಡುಗಡೆ ಮಾಡಿರುವ ವಿಶೇಷ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಜಾಗತಿಕ ಆರ್ಥಿಕ ಪರಿಸ್ಥಿತಿ ಮತ್ತು ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳ ನಡುವೆ ಭಾರತವು (India) ಪ್ರಕಾಶಮಾನವಾಗಿ ಕಾಣಿಸುತ್ತಿದೆ ಎಂದು ಕ್ಲೌಸ್ ಶ್ವಾಬ್ (Klaus Schwab) ಬಣ್ಣಿಸಿದ್ದಾರೆ. ವಿಶ್ವ ಆರ್ಥಿಕ ವೇದಿಕೆಯ ಸಭೆಯ ಹಿನ್ನೆಲೆಯಲ್ಲಿ ಈ ವಿಶೇಷ ಹೇಳಿಕೆ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಕ್ಲೌಸ್ ಶ್ವಾಬ್ ಅವರು ಭಾರತದ ಆರ್ಥಿಕತೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಭಾರತೀಯ ಮಂತ್ರಿಗಳ ನಿಯೋಗ ಮತ್ತು ಅನೇಕ ಉನ್ನತ ಉದ್ಯಮಿಗಳನ್ನು ಭೇಟಿಯಾಗಿರುವುದು ಸಂತಸ ತಂದಿದೆ ಎಂದು ಅವರು ಹೇಳಿದ್ದಾರೆ.

‘ನವೀಕರಿಸಬಹುದಾದ ಇಂಧನ, ಹವಾಮಾನದ ಬದಲಾವಣೆಯಂಥ ವಿಚಾರಗಳಲ್ಲಿ ಭಾರತದ ನಿರ್ಣಾಯಕ ಕ್ರಮಗಳು, ಜಾಗತಿಕ ಆರೋಗ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ, ಡಿಜಿಟಲ್ ಮೂಲಸೌಕರ್ಯದಲ್ಲಿ ಆ ದೇಶದ ನಾಯಕತ್ವವನ್ನು ನಾನು ಪ್ರಶಂಸಿಸುತ್ತೇನೆ. ಜಾಗತಿಕ ಅರ್ಥಶಾಸ್ತ್ರ ಮತ್ತು ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳ ನಡುವೆ ಭಾರತವು ಪ್ರಕಾಶಮಾನವಾಗಿ ಕಾಣಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: World Economic Forum: 20 ವರ್ಷಗಳಲ್ಲಿ ವಿಶ್ವದಲ್ಲೇ ಅತಿ ವೇಗದ ಬೆಳವಣಿಗೆ ಕಾಣಲಿದೆ ಭಾರತದ ಆರ್ಥಿಕತೆ; ಮಾರ್ಟಿನ್ ವುಲ್ಫ್

ವಿಶ್ವ ಆರ್ಥಿಕ ವೇದಿಕೆಯು ಭಾರತದೊಂದಿಗೆ 38 ವರ್ಷಗಳ ಇತಿಹಾಸವನ್ನು ಹಂಚಿಕೊಂಡಿದೆ. ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಜಿ20 ಅಧ್ಯಕ್ಷತೆಯಲ್ಲಿ ಆ ದೇಶದೊಂದಿಗೆ ಪಾಲುದಾರಿಕೆಯನ್ನು ಮುಂದುವರೆಸಲು ಎದುರು ನೋಡುತ್ತಿದ್ದೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯ ನಡುವೆಯೂ ಭಾರತವು ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಮುಂದಿನ 10-20 ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಫೈನಾನ್ಶಿಯಲ್ ಟೈಮ್ಸ್​​ನ ಮುಖ್ಯ ಅರ್ಥಶಾಸ್ತ್ರ ನಿರೂಪಕ ಮಾರ್ಟಿನ್ ವುಲ್ಫ್ ಅಭಿಪ್ರಾಯಪಟ್ಟಿದ್ದರು. ಇದರ ಬೆನ್ನಲ್ಲೇ ವಿಶೇಷ ಹೇಳಿಕೆಯಲ್ಲಿ ವಿಶ್ವ ಆರ್ಥಿಕ ವೇದಿಕೆಯ ಸ್ಥಾಪಕರೂ ಸಹ ಭಾರತದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:07 pm, Fri, 20 January 23