Davos Summit: ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾರತದ ಕೊರೊನಾ ಹೋರಾಟ ವಿವರಿಸಿದ ಪ್ರಧಾನಿ ನರೇಂದ್ರ ಮೋದಿ
PM Narendra Modi: ಈವರೆಗೆ ನಾವು 160 ಕೋಟಿ ಡೋಸ್ ಲಸಿಕೆ ನೀಡಿದ್ದೇವೆ. ಭಾರತವು ಆರ್ಥಿಕತೆಯಲ್ಲಿ ಆಶಾಭಾವನೆಯಿಂದ ಮುನ್ನುಗ್ಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿವರಿಸಿದರು.
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ದಾವೋಸ್ನ ವಿಶ್ವ ಆರ್ಥಿಕ ವೇದಿಕೆ (World Economic Forum) ಉದ್ದೇಶಿಸಿ ಪ್ರಧಾನಿ ಮೋದಿ ವರ್ಚುವಲ್ ಭಾಷಣ ಮಾಡಿದರು. ಕೊರೊನಾ ಸಮಯದಲ್ಲಿ ಭಾರತದಲ್ಲಿ 80 ಕೋಟಿ ಜನರಿಗೆ ಉಚಿತ ಆಹಾರ ವಿತರಿಸಲಾಗಿದೆ. ಕೊರೊನಾದಿಂದ ಮುಕ್ತಿ ಪಡೆಯಲು ಭಾರತ ನಿರಂತರ ಹೋರಾಟ ನಡೆಸುತ್ತಿದೆ. ಈವರೆಗೆ ನಾವು 160 ಕೋಟಿ ಡೋಸ್ ಲಸಿಕೆ ನೀಡಿದ್ದೇವೆ. ಭಾರತವು ಆರ್ಥಿಕತೆಯಲ್ಲಿ ಆಶಾಭಾವನೆಯಿಂದ ಮುನ್ನುಗ್ಗುತ್ತಿದೆ ಎಂದು ಮೋದಿ ವಿವರಿಸಿದರು.
ಭಾರತವು ಇಡೀ ವಿಶ್ವಕ್ಕೆ ಹೊಸ ಭರವಸೆಯನ್ನು ನೀಡಿದೆ. ಭಾರತೀಯರ ಬಹು ಸಂಸ್ಕೃತಿಯೇ ಹೊಸಹೊಸ ಶಕ್ತಿ ನೀಡುತ್ತಿದೆ. ಇಂಥ ಸಮಯದಲ್ಲಿ ಭಾರತದ ಶಕ್ತಿ ವಿಶ್ವಕ್ಕೆ ಉದಾಹರಣೆಯಾಗಿದೆ. ಭಾರತದ ಐಟಿ ವಲಯವು ಹಗಲಿರುಳು ಕೆಲಸ ಮಾಡುತ್ತಾ, ಇಡೀ ವಿಶ್ವಕ್ಕೆ ಸಾಫ್ಟವೇರ್ ಉತ್ಪನ್ನಗಳು ಮತ್ತು ತಂತ್ರಜ್ಞರನ್ನು ಕಳಿಸುತ್ತಿದೆ. ಕಳೆದ 6 ತಿಂಗಳಲ್ಲಿ 10 ಸಾವಿರ ಸ್ಟಾರ್ಟ್ಅಪ್ಗಳು ನೋಂದಣಿಯಾಗಿವೆ. ಭಾರತದಲ್ಲಿ ಯಪಿಐ ಮೂಲಕ 4.4 ಶತಕೋಟಿ ಡಾಲರ್ ವ್ಯವಹಾರ ನಡೆಯುತ್ತಿದೆ ಎಂದು ಹೇಳಿದರು.
ಭಾರತವು ರೂಪಿಸಿರುವ ಕೊವಿನ್ ಪೋರ್ಟಲ್ ಮತ್ತು ಆರೋಗ್ಯ ಸೇತು ಆ್ಯಪ್ ಬಗ್ಗೆ ನನಗೆ ಹೆಮ್ಮೆ ಇದೆ. ಸರಳವಾಗಿ ವ್ಯವಹರಿಸುವುದು ಮತ್ತು ಎಲ್ಲರನ್ನೂ ಒಳಗೊಳ್ಳುವ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆ ಭಾರತ ಗಮನಹರಿಸುತ್ತಿದೆ. ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ಭಾರತವು ಸಿದ್ಧವಿದೆ. ಭಾರತದಲ್ಲಿ ಹೂಡಿಕೆ ಮಾಡುವ ಬಗ್ಗೆ ಆಲೋಚಿಸಲು ಇದು ಒಳ್ಳೆಯ ಸಮಯ ಎಂದು ನುಡಿದರು.
ಇಡೀ ವಿಶ್ವದಲ್ಲಿ ಆರೋಗ್ಯ ಉತ್ತಮಗೊಳ್ಳಬೇಕು ಎನ್ನುವುದು ಭಾರತದ ಗುರಿ. ‘ಒನ್ ಅರ್ತ್, ಒನ್ ಹೆಲ್ತ್’ ಎಂದು ಮೋದಿ ತಮ್ಮ ಆಶಯವನ್ನು ವಿವರಿಸಿದರು. ಇಡೀ ವಿಶ್ವ ಇಂದು ನಮ್ಮ ಸಾಮರ್ಥ್ಯವನ್ನು ನೋಡಿದೆ. ಭಾರತದಲ್ಲಿ ಹೂಡಿಕೆ ಮಾಡಲು ವಿಶ್ವದ ಹಲವು ದೇಶಗಳು ಮುಂದೆ ಬರುತ್ತಿವೆ. ಮುಂದಿನ 25 ವರ್ಷ ಗುರಿಯಾಗಿಸಿಕೊಂಡು ಭಾರತ ಸರ್ಕಾರವು ಹಲವು ಯೋಜನೆಗಳನ್ನು ರೂಪಿಸಿದೆ. ಕ್ರಿಪ್ಟೋ ಕರೆನ್ಸಿ ಬಗ್ಗೆ ವಿಶ್ವ ಸಂಘಟಿತ ನಿರ್ಧಾರ ಕೈಗೊಳ್ಳಬೇಕಿದೆ ಎಂದರು.
ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರೊಂದಿಗೆ ಜ.18ರಂದು ನಮೋ ಆ್ಯಪ್ ಮೂಲಕ ಆನ್ಲೈನ್ ಸಂವಾದ ನಡೆಸಲಿದ್ದಾರೆ ನರೇಂದ್ರ ಮೋದಿ ಇದನ್ನೂ ಓದಿ: ಕೊರೊನಾ ನಿರ್ವಹಣೆಗೆ ತಂತ್ರಜ್ಞಾನ ಬಳಕೆ: ಕರ್ನಾಟಕದ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
Published On - 9:47 pm, Mon, 17 January 22