ಸುಲ್ಲಿ ಡೀಲ್ಸ್​​ನಲ್ಲಿಯೂ ಬುಲ್ಲಿ ಬಾಯ್ ಆ್ಯಪ್ ಪ್ರಕರಣದ ಆರೋಪಿಗಳು ಭಾಗಿ: ಮುಂಬೈ ಪೊಲೀಸ್

ಠಾಕೂರ್ ಮತ್ತು ಬಿಷ್ಣೋಯ್ ಅವರ ಜಾಮೀನು ಅರ್ಜಿಯನ್ನು ದೆಹಲಿ ಕೋರ್ಟ್ ಈಗಾಗಲೇ ತಿರಸ್ಕರಿಸಿದೆ ಎಂದು ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು. ಆರೋಪಿಗಳು ನಿರ್ದಿಷ್ಟ ಸಮುದಾಯದ ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದಾರೆ.

ಸುಲ್ಲಿ ಡೀಲ್ಸ್​​ನಲ್ಲಿಯೂ ಬುಲ್ಲಿ ಬಾಯ್ ಆ್ಯಪ್ ಪ್ರಕರಣದ ಆರೋಪಿಗಳು ಭಾಗಿ: ಮುಂಬೈ ಪೊಲೀಸ್
ಬುಲ್ಲಿ ಬಾಯ್ ಆ್ಯಪ್ ಪ್ರಕರಣದ ಆರೋಪಿಗಳು
TV9kannada Web Team

| Edited By: Rashmi Kallakatta

Jan 17, 2022 | 8:19 PM

ಮುಂಬೈ: ಮುಂಬೈ ಪೊಲೀಸ್ ಸೈಬರ್ ಸೆಲ್ ಸೋಮವಾರ ಬುಲ್ಲಿ ಬಾಯ್ ಆ್ಯಪ್ (Bulli Bai )ಪ್ರಕರಣದಲ್ಲಿ ಬಂಧಿತ ಮೂವರ ಜಾಮೀನು ಅರ್ಜಿಯನ್ನು ವಿರೋಧಿಸಿದೆ. ತಮ್ಮ ತನಿಖೆಯ ಪ್ರಕಾರ ಆರೋಪಿಗಳು ಸುಲ್ಲಿ ಡೀಲ್ಸ್ (Sulli Deals) ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸೂಚಿಸಿದೆ. ಅವರ ಪಾತ್ರಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮುಂಬೈ ಅಪರಾಧ ವಿಭಾಗದ ಸೈಬರ್ ಸೆಲ್ ಬಾಂದ್ರಾದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಉತ್ತರವನ್ನು ಸಲ್ಲಿಸಿದೆ. ಇದೀಗ ನ್ಯಾಯಾಲಯವು ಪ್ರಕರಣವನ್ನು ಮಂಗಳವಾರ ವಿಚಾರಣೆಗೆ ಮುಂದೂಡಿದೆ.  ವಿಶಾಲ್ ಕುಮಾರ್ ಝಾ, ಶ್ವೇತಾ ಸಿಂಗ್ ಮತ್ತು ಮಯಾಂಕ್ ರಾವತ್ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿ ಸಲ್ಲಿಸಿದ ಉತ್ತರದಲ್ಲಿ ದೆಹಲಿ ಪೊಲೀಸರು ಬಂಧಿಸಿರುವ ವ್ಯಕ್ತಿ ನೀರಜ್ ಬಿಷ್ಣೋಯ್ ಅವರ ಸಹಾಯದಿಂದ ಆರೋಪಿಗಳು ಅಪರಾಧ ಎಸಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ‘ಬುಲ್ಲಿ ಬಾಯ್’ ಆ್ಯಪ್‌ನ ಸೃಷ್ಟಿಕರ್ತ ಎಂದು ಹೇಳಲಾದ ಬಿಷ್ಣೋಯ್ ಮತ್ತು ಪ್ರಮುಖರ ಫೋಟೋಗಳಲ್ಲಿರುವ ‘ಸುಲ್ಲಿ ಡೀಲ್ಸ್’ ಆ್ಯಪ್‌ನ (ಮುಸ್ಲಿಂ ಮಹಿಳೆಯರ ಹರಾಜಿಗೆ ಬಳಸಿದ ಆ್ಯಪ್‌) ಸೃಷ್ಟಿಕರ್ತ ಎಂದು ನಂಬಲಾದ ಓಂಕಾರೇಶ್ವರ ಠಾಕೂರ್ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲು ಮುಂಬೈ ಪೊಲೀಸರ ತಂಡ ಈಗಾಗಲೇ ದೆಹಲಿಯಲ್ಲಿದೆ.

ಠಾಕೂರ್ ಮತ್ತು ಬಿಷ್ಣೋಯ್ ಅವರ ಜಾಮೀನು ಅರ್ಜಿಯನ್ನು ದೆಹಲಿ ಕೋರ್ಟ್ ಈಗಾಗಲೇ ತಿರಸ್ಕರಿಸಿದೆ ಎಂದು ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು. ಆರೋಪಿಗಳು ನಿರ್ದಿಷ್ಟ ಸಮುದಾಯದ ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದಾರೆ. ಅವರಿಗೆ ಯಾರಾದರೂ ಪ್ರೇರಣೆ ನೀಡಿದ್ದಾರೆಯೇ ಮತ್ತು ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ಆರೋಪಿಗಳು ಭಾಗಿಯಾಗಿದ್ದರೆ ಅದನ್ನು ತನಿಖೆ ಮಾಡಬೇಕು. ಅಂತಹ ಅಪರಾಧಗಳನ್ನು ಮಾಡಲು ಅವರಿಗೆ ಹಣ ನೀಡಲಾಗಿದೆಯೇ ಎಂದು ನಾವು ಕಂಡುಹಿಡಿಯಬೇಕು. ಆರೋಪಿಗಳು ಜನರನ್ನು ದಾರಿತಪ್ಪಿಸಲು ಸಿಖ್ ಸಮುದಾಯದ ಜನರ ಹೆಸರನ್ನು ಬಳಸಿದ್ದಾರೆ ಎಂದು ಅವರು ಹೇಳಿದರು.

“ರಾವತ್ ಎಂಟು ಟ್ವಿಟರ್ ಖಾತೆಗಳು, ಒಂದು ಇನ್‌ಸ್ಟಾಗ್ರಾಮ್ ಖಾತೆ ಮತ್ತು ಐದು ಜಿಮೇಲ್ ಖಾತೆಗಳನ್ನು ನಿರ್ವಹಿಸುತ್ತಿದ್ದರು. ಸಿಂಗ್ ಏಳು ಟ್ವಿಟರ್ ಖಾತೆಗಳು, ಒಂದು ಇನ್‌ಸ್ಟಾಗ್ರಾಮ್ ಮತ್ತು ಜಿಮೇಲ್ ಖಾತೆಯನ್ನು ಹೊಂದಿದ್ದರು. ಇದಕ್ಕೆ ಸಂಬಂಧಿಸಿದ ತನಿಖೆಗಳು ಬಾಕಿ ಉಳಿದಿವೆ’ ಎಂದು ಸೈಬರ್ ಸೆಲ್ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಉತ್ತರದಲ್ಲಿ ತಿಳಿಸಿದ್ದಾರೆ.

ಈ ಕೆಲವು ಖಾತೆಗಳನ್ನು ಈಗಾಗಲೇ ನಿಷ್ಕ್ರಿಯಗೊಳಿಸಲಾಗಿದೆ, ಅಳಿಸಲಾಗಿದೆ ಅಥವಾ  ಅಮಾನತುಗೊಳಿಸಲಾಗಿದೆ ಎಂದು ಅದು ಹೇಳಿದೆ. ಆದ್ದರಿಂದ, ಡೇಟಾವನ್ನು ಮತ್ತಷ್ಟು ವಿಶ್ಲೇಷಿಸಲು, ಆರೋಪಿಯ ಅಗತ್ಯವಿರುತ್ತದೆ. “ಪ್ರಕ್ರಿಯೆಯು ಸಂಕೀರ್ಣ ಮತ್ತು ಸುದೀರ್ಘವಾಗಿರುವುದರಿಂದ ತನಿಖೆ ಪ್ರಾಥಮಿಕ ಹಂತದಲ್ಲಿದೆ” ಎಂದು ಸೈಬರ್ ಸೆಲ್ ಹೇಳಿದೆ.

ಉತ್ತರಾಖಂಡದ ನಿವಾಸಿ ರಾವತ್, ಸೋಮವಾರ ಜಾಮೀನಿಗಾಗಿ ವಾದ ಮಂಡಿಸಿದ ಸಂದೀಪ್ ಶೇರ್ಖಾನೆ ಮೂಲಕ ಜಾಮೀನು ಅರ್ಜಿ ಸಲ್ಲಿಸಿದರು. “ರಾವತ್ ಒಬ್ಬ ಮುಗ್ಧ ವಿದ್ಯಾರ್ಥಿ, ಅವರು ಬಹಳ ಸೀಮಿತ ಪಾತ್ರವನ್ನು ಹೊಂದಿದ್ದರು. ಅವರು ಕೇವಲ ಒಂದು ಲಿಂಕ್ ಅನ್ನು ಫಾಲೋ ಮಾಡಿದ್ದು ಅವರು ದಾರಿ ತಪ್ಪಿದರು. ಅವರ ಬ್ರೈನ್ ವಾಶ್ ಮಾಡಲಾಗಿತ್ತು. ಈ ವಿಚಾರದಲ್ಲಿ ಆತನನ್ನು ತಪ್ಪಾಗಿ ಸಿಲುಕಿಸಿ ಬಲಿಪಶುವನ್ನಾಗಿ ಮಾಡಲಾಗಿದೆ. ಪರೀಕ್ಷೆಗಳು ಸಮೀಪಿಸುತ್ತಿರುವ ಕಾರಣ ಅಪರಾಧಿಗಳ ಜೊತೆಯಲ್ಲಿಟ್ಟರೆ ಇಡೀ ಭವಿಷ್ಯ ನಾಶವಾಗುತ್ತದೆ ಎಂದು ಶೆರ್ಖಾನೆ ನ್ಯಾಯಾಲಯಕ್ಕೆ ಹೇಳಿದರು.

ಏತನ್ಮಧ್ಯೆ, ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಬಿಹಾರದ ನಿವಾಸಿ ಝಾ ಅವರ ಜಾಮೀನು ಅರ್ಜಿಯನ್ನು ವಾದಿಸಿದ ಶಿವಂ ದೇಶಮುಖ್ ಮತ್ತು ಆರತಿ ದೇಶಮುಖ್ ಅವರು “ಪ್ರಕರಣದ ಪ್ರಮುಖ ಆರೋಪಿ ದೆಹಲಿ ಮೂಲದವರಾಗಿದ್ದು, ಇತರ ಆರೋಪಿಗಳು ಬೇರೆ ಬೇರೆ ರಾಜ್ಯದವರಾಗಿದ್ದು, ಅವರಿಗೆ ಯಾವುದೇ ರೀತಿಯ ಸಂಪರ್ಕವಿಲ್ಲ. ಈ ಪ್ರಕರಣದಲ್ಲಿ ಅವರನ್ನು ತಪ್ಪಾಗಿ ಸಿಲುಕಿಸಲಾಗಿದೆ ಮತ್ತು ಆರೋಪಿಸಿದಂತೆ ಯಾವುದೇ ರೀತಿಯ ಅಪರಾಧ ಮಾಡಿಲ್ಲ ಎಂದು ನಿರಾಕರಿಸಿದ್ದಾರೆ. ಅವರು ಗೌರವಾನ್ವಿತ ಕುಟುಂಬದಿಂದ ಬಂದವರು ಮತ್ತು ಅಂತಹ ಬಹಿರಂಗ ಕೃತ್ಯಗಳು ಕಲ್ಪನೆಗೆ ಮೀರಿದೆ ಎಂದಿದ್ದಾರೆ.

ಇದನ್ನೂ ಓದಿ:  ಗಣರಾಜ್ಯೋತ್ಸವ ಪರೇಡ್​​ನಿಂದ ತಮಿಳುನಾಡಿನ ಸ್ತಬ್ಧಚಿತ್ರ ಹೊರಗೆ: ಮೋದಿ ಮಧ್ಯ ಪ್ರವೇಶ ಒತ್ತಾಯಿಸಿ ಸ್ಟಾಲಿನ್ ಪತ್ರ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada