ಗಣರಾಜ್ಯೋತ್ಸವ ಪರೇಡ್‌ನಿಂದ ತಮಿಳುನಾಡಿನ ಸ್ತಬ್ಧಚಿತ್ರ ಹೊರಗೆ: ಮೋದಿ ಮಧ್ಯ ಪ್ರವೇಶ ಒತ್ತಾಯಿಸಿ ಸ್ಟಾಲಿನ್ ಪತ್ರ
MK Stalin ನವದೆಹಲಿಯಲ್ಲಿ 2022ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ತಮಿಳುನಾಡಿನ ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರದರ್ಶಿಸುವ ತಮಿಳುನಾಡಿನ ಟ್ಯಾಬ್ಲೋವನ್ನು ಸೇರಿಸಲು ವ್ಯವಸ್ಥೆ ಮಾಡಲು ನಿಮ್ಮ ತುರ್ತು ಮಧ್ಯಸ್ಥಿಕೆಗೆ ನಾನು ವಿನಂತಿಸುತ್ತೇನೆ ಎಂದ ಸ್ಟಾಲಿನ್.
ಚೆನ್ನೈ: ಈ ವರ್ಷ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಿಂದ (Republic Day parade ) ತಮಿಳುನಾಡಿನ ಸ್ತಬ್ಧಚಿತ್ರ ಹೊರಗಿಟ್ಟಿರುವ ಕುರಿತು ತಮಿಳುನಾಡು (Tamilnadu) ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಈ ವಿಷಯದ ಬಗ್ಗೆ ತನಗೆ ತೀವ್ರ ನಿರಾಶೆಯಾಗಿದೆ ಎಂದು ಸ್ಟಾಲಿನ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. “ಇದು ತಮಿಳುನಾಡು ರಾಜ್ಯ ಮತ್ತು ಅದರ ಜನರಿಗೆ ಗಂಭೀರ ಕಾಳಜಿಯ ವಿಷಯವಾಗಿದೆ. ನವದೆಹಲಿಯಲ್ಲಿ 2022 ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ತಮಿಳುನಾಡಿನ ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರದರ್ಶಿಸುವ ತಮಿಳುನಾಡಿನ ಟ್ಯಾಬ್ಲೋವನ್ನು ಸೇರಿಸಲು ವ್ಯವಸ್ಥೆ ಮಾಡಲು ನಿಮ್ಮ ತುರ್ತು ಮಧ್ಯಸ್ಥಿಕೆಗೆ ನಾನು ವಿನಂತಿಸುತ್ತೇನೆ ಎಂದು ಸ್ಟಾಲಿನ್ ಪತ್ರದಲ್ಲಿ ಹೇಳಿದ್ದಾರೆ. ಈ ವರ್ಷದ ಕೇಂದ್ರದ ಥೀಮ್‌ಗೆ ಅನುಗುಣವಾಗಿ “ಸ್ವಾತಂತ್ರ್ಯ ಹೋರಾಟದಲ್ಲಿ ತಮಿಳುನಾಡು” ಎಂಬ ವಿಷಯವನ್ನು ಆಯ್ಕೆ ಮಾಡಲಾಗಿದೆ ಎಂದು ಸ್ಟಾಲಿನ್ ಹೇಳಿದ್ದಾರೆ. ಮೂರು ಬಾರಿ ತಜ್ಞರ ಸಮಿತಿಯ ಮುಂದೆ ರಾಜ್ಯದ ಪ್ರತಿನಿಧಿಗಳು ಮೂರು ಬಾರಿ ಹಾಜರಾಗಿದ್ದರು ಮತ್ತು ಸಮಿತಿಯು ಮೊದಲ ಸಭೆಯಲ್ಲಿ ವಿಷಯದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದೆ ಎಂದು ಅವರು ಹೇಳಿದರು.
குடியரசு தின அணிவகுப்பில், தமிழ்நாட்டிலிருந்து நாட்டின் விடுதலைக்காகப் போராடிய வீரர்களின் உருவங்கள் அடங்கிய ஊர்தி இடம்பெறுவது மறுக்கப்பட்டிருப்பது குறித்து மாண்புமிகு முதலமைச்சர் @mkstalin அவர்கள் மாண்புமிகு பிரதமர் @narendramodi அவர்களுக்குக் கடிதம் எழுதியுள்ளார். pic.twitter.com/l33BpS3WXc
— CMOTamilNadu (@CMOTamilnadu) January 17, 2022
ಇದಕ್ಕಿಂತ ಮುನ್ನ ಪಶ್ಚಿಮ ಬಂಗಾಳದ ಸ್ತಬ್ಧ ಚಿತ್ರವನ್ನು ಹೊರಟ್ಟಿರುವುದರ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದರು. ಜನವರಿ 16 ರ ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಮತಾ ಪತ್ರ ಬರೆದಿದ್ದು, “ಪರೇಡ್‌ನಲ್ಲಿ ಪಶ್ಚಿಮ ಬಂಗಾಳದ ಸ್ವಾತಂತ್ರ್ಯ ಹೋರಾಟಗಾರರ ಟ್ಯಾಬ್ಲೋವನ್ನು ಸೇರಿಸಲು ವಿನಂತಿಸಿದ್ದಾರೆ. ಸುಭಾಷ್ ಚಂದ್ರ ಬೋಸ್ ಕುರಿತ ಪಶ್ಚಿಮ ಬಂಗಾಳದ ಗಣರಾಜ್ಯೋತ್ಸವದ ಸ್ತಬ್ಧಚಿತ್ರವನ್ನು ಕೇಂದ್ರವು ತಿರಸ್ಕರಿಸಿದ ನಂತರ ಮಧ್ಯಪ್ರವೇಶಿಸುವಂತೆ ಕೋರಿ ಪ್ರಧಾನಿ ಮೋದಿಗೆ ಸಿಎಂ ಮಮತಾ ಪತ್ರ ಬರೆದಿದ್ದಾರೆ. ರಾಜ್ಯದ ಸ್ತಬ್ಧಚಿತ್ರವನ್ನು ತಿರಸ್ಕರಿಸಿದ ಬಗ್ಗೆ ಆಘಾತವನ್ನು ವ್ಯಕ್ತಪಡಿಸಿದ್ದು ಗಣರಾಜ್ಯೋತ್ಸವದ ಪರೇಡ್‌ನಿಂದ ಪಶ್ಚಿಮ ಬಂಗಾಳ ಸರ್ಕಾರದ ಉದ್ದೇಶಿತ ಸ್ತಬ್ಧಚಿತ್ರವನ್ನು ಹಠಾತ್ತನೆ ಹೊರಗಿಡುವ ಭಾರತ ಸರ್ಕಾರದ ನಿರ್ಧಾರದಿಂದ ನನಗೆ ನೋವಾಗಿದೆ ಎಂದು ಮಮತಾ ಹೇಳಿದ್ದಾರೆ.
“ಯಾವುದೇ ಕಾರಣಗಳು ಅಥವಾ ಸಮರ್ಥನೆಗಳನ್ನು ನೀಡದೆ ಸ್ತಬ್ಧಚಿತ್ರವನ್ನು ತಿರಸ್ಕರಿಸಲಾಗಿದೆ ಎಂಬುದು ನಮಗೆ ಇನ್ನಷ್ಟು ಗೊಂದಲದ ಸಂಗತಿಯಾಗಿದೆ. ಪ್ರಸ್ತಾವಿತ ಸ್ತಬ್ಧ ಚಿತ್ರವು ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಅವರ ಐಎನ್ಒ ಬಗ್ಗೆ ಅವರ 125 ನೇ ಜನ್ಮ ವಾರ್ಷಿಕೋತ್ಸವದ ವರ್ಷದಲ್ಲಿ ಅವರ ಕೊಡುಗೆಗಳನ್ನು ಸ್ಮರಿಸುತ್ತಿದೆ. ಇದು ಕೆಲವು ಹೆಚ್ಚಿನವರ ಭಾವಚಿತ್ರಗಳನ್ನು ಹೊಂದಿತ್ತು. ಈಶ್ವರಚಂದ್ರ ವಿದ್ಯಾಸಾಗರ್, ರವೀಂದ್ರನಾಥ ಟ್ಯಾಗೋರ್, ಸ್ವಾಮಿ ವಿವೇಕಾನಂದ, ದೇಶಬಂಧು ಚಿತ್ತರಂಜನ್ ದಾಸ್, ಶ್ರೀ ಅರಬಿಂದೋ, ಮಾತಂಗಿನಿ ಹಜ್ರಾ, ನಜ್ರುಲ್, ಬಿರ್ಸಾ ಮುಂಡಾ ಮತ್ತು ಅನೇಕ ದೇಶಭಕ್ತರನ್ನು ಇದು ಹೊಂದಿತ್ತು ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ಜಟಾಯುಪಾರ ಮತ್ತು ನಾರಾಯಣಗುರು ಪ್ರತಿಮೆ ಇರುವ ಕೇರಳದ ಸ್ತಬ್ಧಚಿತ್ರವನ್ನೂ ಕೇಂದ್ರ ಸರ್ಕಾರ ಗಣರಾಜ್ಯೋತ್ಸವ ಪರೇಡ್ ನಿಂದ ಹೊರಗಿಟ್ಟಿತ್ತು. ಪ್ರವಾಸೋದ್ಯಮದ ಸಾಮರ್ಥ್ಯದ ಜೊತೆಗೆ ಮಹಿಳಾ ಸಬಲೀಕರಣದ ಸಂದೇಶವನ್ನು ಸಾರುವ ಚಡಯಮಂಗಲಂ ಜಟಾಯುಪಾರ ಮಾದರಿಯನ್ನು ಕೇರಳ ಸಿದ್ಧಪಡಿಸಿತ್ತು. ಈ ಸ್ತಬ್ಧ ಚಿತ್ರದ ಮುಂದೆ ಶ್ರೀ ನಾರಾಯಣ ಗುರು ಪ್ರತಿಮೆಯನ್ನು ಇರಿಸಲು ರಾಜ್ಯವು ಉದ್ದೇಶಿಸಿತ್ತು. ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಅಂಗವಾಗಿ “ವಿವಿಧ ಕ್ಷೇತ್ರಗಳಲ್ಲಿನ ಸಾಧನೆಗಳು” ಎಂಬ ವಿಷಯವನ್ನು ಆಧರಿಸಿದ ಸ್ತಬ್ಧ ಚಿತ್ರವಾಗಿದೆ ಇದು. ಸ್ತಬ್ಧ ಚಿತ್ರದ ಮೌಲ್ಯಮಾಪನ ಮಾಡಲು ಮತ್ತು ಶಿಫಾರಸು ಮಾಡಲು ರಕ್ಷಣಾ ಸಚಿವಾಲಯವು ನೇಮಿಸಿದ ತೀರ್ಪುಗಾರರು ಎಲ್ಲಾ ಐದು ಸುತ್ತಿನ ಚರ್ಚೆಗಳಲ್ಲಿ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದರು. ಡಿಸೆಂಬರ್ 18 ರಂದು ನಡೆದ ಅಂತಿಮ ಸುತ್ತಿನಲ್ಲಿ ತೀರ್ಪುಗಾರರು ಕೇರಳದ ಸ್ತಬ್ಧ ಚಿತ್ರವನ್ನು ಅನುಮೋದಿಸಿದರು ಮತ್ತು ಸಂಗೀತ ಸಂಯೋಜಿಸಲು ನಿರ್ದೇಶಿಸಿದರು. ಆನಂತರ ಸ್ತಬ್ಧ ಚಿತ್ರವನ್ನು ಆಯ್ಕೆ ಮಾಡಲಾಗಿದೆ ಎಂದು ರಕ್ಷಣಾ ಸಚಿವಾಲಯದಿಂದ ಪತ್ರ ಬರದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದಾಗ 12 ರಾಜ್ಯಗಳ ಪಟ್ಟಿಯಲ್ಲಿ ಕೇರಳ ಇಲ್ಲ ಎಂಬುದು ತಿಳಿದುಬಂದಿದೆ.
ಇದನ್ನೂ ಓದಿ: Drone Attacks In Abu Dhabi ಅಬುಧಾಬಿಯಲ್ಲಿ ಡ್ರೋನ್ ದಾಳಿ: ಇಬ್ಬರು ಭಾರತೀಯರು, ಓರ್ವ ಪಾಕ್ ಪ್ರಜೆ ಸಾವು
Published On - 7:26 pm, Mon, 17 January 22