AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣರಾಜ್ಯೋತ್ಸವ ಪರೇಡ್​​ಗೆ ಕೇರಳದ ಜಟಾಯುಪಾರ ಮತ್ತು ಶ್ರೀ ನಾರಾಯಣ ಗುರು ಸ್ತಬ್ಧ ಚಿತ್ರ ತಿರಸ್ಕರಿಸಿದ ಕೇಂದ್ರ

ಜಟಾಯುಪಾರ ದ್ವಾರದ ಮಾದರಿಯ ಸ್ತಬ್ಧಚಿತ್ರದ ಮುಂಭಾಗದಲ್ಲಿ ಶ್ರೀನಾರಾಯಣ ಗುರು ಪ್ರತಿಮೆ  ಇರಿಸಿ ಸಿದ್ಧಪಡಿಸಲಾಗಿತ್ತು. ಆದರೆ ಶ್ರೀಶಂಕರಾಚಾರ್ಯರ ಪ್ರತಿಮೆಯನ್ನು ಮುಂಭಾಗದಲ್ಲಿ ಇಡಬೇಕು ಎಂದು ರಕ್ಷಣಾ ಸಚಿವಾಲಯ ಸೂಚಿಸಿದೆ. ಒಂದು ವೇಳೆ ಈ ಬದಲಾವಣೆಯನ್ನು ಬಯಸದೇ ಇದ್ದರೆ ಸ್ತಬ್ಧಚಿತ್ರವನ್ನು ಹಿಂಪಡೆಯಬಹುದು ಎಂದು ಸಚಿವಾಲಯ ಹೇಳಿತ್ತು.

ಗಣರಾಜ್ಯೋತ್ಸವ ಪರೇಡ್​​ಗೆ ಕೇರಳದ ಜಟಾಯುಪಾರ ಮತ್ತು ಶ್ರೀ ನಾರಾಯಣ ಗುರು ಸ್ತಬ್ಧ ಚಿತ್ರ ತಿರಸ್ಕರಿಸಿದ ಕೇಂದ್ರ
ಕೇರಳದ ಸ್ತಬ್ದಚಿತ್ರ (ಕೃಪೆ: ಮಾತೃಭೂಮಿ ನ್ಯೂ,ಸ್ )
TV9 Web
| Edited By: |

Updated on:Jan 13, 2022 | 8:23 PM

Share

ದೆಹಲಿ: ಗಣರಾಜ್ಯೋತ್ಸವ ಪರೇಡ್‌ನಲ್ಲಿ (Republic Day parade) ಪ್ರದರ್ಶಿಸುವುದಕ್ಕಾಗಿ ಅನುಮೋದನೆ ನೀಡಲು ಕೇರಳ (Kerala) ಸಲ್ಲಿಸಿದ ಸ್ತಬ್ಧ ಚಿತ್ರವನ್ನು  ರಕ್ಷಣಾ ಸಚಿವಾಲಯ (Ministry of Defence) ತಿರಸ್ಕರಿಸಿದೆ. ಪ್ರವಾಸೋದ್ಯಮದ ಸಾಮರ್ಥ್ಯದ ಜೊತೆಗೆ ಮಹಿಳಾ ಸಬಲೀಕರಣದ ಸಂದೇಶವನ್ನು ಸಾರುವ ಚಡಯಮಂಗಲಂ ಜಟಾಯುಪಾರ (Chadayamangalam Jatayupara) ಮಾದರಿಯನ್ನು ಕೇರಳ ಸಿದ್ಧಪಡಿಸಿದೆ. ಈ ಸ್ತಬ್ಧ ಚಿತ್ರದ ಮುಂದೆ ಶ್ರೀ ನಾರಾಯಣ ಗುರು(Sree Narayana Gurudevan) ಪ್ರತಿಮೆಯನ್ನು ಇರಿಸಲು ರಾಜ್ಯವು ಉದ್ದೇಶಿಸಿತ್ತು. ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಅಂಗವಾಗಿ “ವಿವಿಧ ಕ್ಷೇತ್ರಗಳಲ್ಲಿನ ಸಾಧನೆಗಳು” ಎಂಬ ವಿಷಯವನ್ನು ಆಧರಿಸಿದ ಸ್ತಬ್ಧ ಚಿತ್ರವಾಗಿದೆ ಇದು. ಸ್ತಬ್ಧ ಚಿತ್ರದ ಮೌಲ್ಯಮಾಪನ ಮಾಡಲು ಮತ್ತು ಶಿಫಾರಸು ಮಾಡಲು ರಕ್ಷಣಾ ಸಚಿವಾಲಯವು ನೇಮಿಸಿದ ತೀರ್ಪುಗಾರರು ಎಲ್ಲಾ ಐದು ಸುತ್ತಿನ ಚರ್ಚೆಗಳಲ್ಲಿ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದರು. ಡಿಸೆಂಬರ್ 18 ರಂದು ನಡೆದ ಅಂತಿಮ ಸುತ್ತಿನಲ್ಲಿ ತೀರ್ಪುಗಾರರು ಕೇರಳದ ಸ್ತಬ್ಧ ಚಿತ್ರವನ್ನು ಅನುಮೋದಿಸಿದರು ಮತ್ತು ಸಂಗೀತ ಸಂಯೋಜಿಸಲು ನಿರ್ದೇಶಿಸಿದರು.

ಸ್ತಬ್ಧ ಚಿತ್ರವನ್ನು ಆಯ್ಕೆ ಮಾಡಲಾಗಿದೆ ಎಂದು ರಕ್ಷಣಾ ಸಚಿವಾಲಯದಿಂದ ಪತ್ರ ಬರದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದಾಗ 12 ರಾಜ್ಯಗಳ ಪಟ್ಟಿಯಲ್ಲಿ ಕೇರಳ ಇಲ್ಲ ಎಂಬುದು ತಿಳಿದುಬಂದಿದೆ. ಅರುಣಾಚಲ ಪ್ರದೇಶ, ಹರ್ಯಾಣ, ಛತ್ತೀಸ್‌ಗಢ, ಗೋವಾ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಹಾರಾಷ್ಟ್ರ, ಮೇಘಾಲಯ, ಪಂಜಾಬ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಿಂದ ಸ್ತಬ್ಧ ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಪಂಜಾಬ್, ಮಹಾರಾಷ್ಟ್ರ ಮತ್ತು ಛತ್ತೀಸಗಢ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಕೇರಳದ ಸ್ತಬ್ಧ ಚಿತ್ರ ಈ ಹಿಂದೆ ಐದು ಬಾರಿ ಪ್ರಶಸ್ತಿ ಗೆದ್ದಿದೆ.

ತೀರ್ಪುಗಾರರು ಆದಿ ಶಂಕರರನ್ನು ಕೇಳಿದ್ದರು, ಕೇರಳ ಗುರುದೇವನನ್ನು ಶಿಫಾರಸು ಮಾಡಿತ್ತು

ಜಟಾಯುಪಾರ ದ್ವಾರದ ಮಾದರಿಯ ಸ್ತಬ್ಧಚಿತ್ರದ ಮುಂಭಾಗದಲ್ಲಿ ಶ್ರೀನಾರಾಯಣ ಗುರು ಪ್ರತಿಮೆ  ಇರಿಸಿ ಸಿದ್ಧಪಡಿಸಲಾಗಿತ್ತು. ಆದರೆ ಶ್ರೀಶಂಕರಾಚಾರ್ಯರ ಪ್ರತಿಮೆಯನ್ನು ಮುಂಭಾಗದಲ್ಲಿ ಇಡಬೇಕು ಎಂದು ರಕ್ಷಣಾ ಸಚಿವಾಲಯ ಸೂಚಿಸಿದೆ. ಒಂದು ವೇಳೆ ಈ ಬದಲಾವಣೆಯನ್ನು ಬಯಸದೇ ಇದ್ದರೆ ಸ್ತಬ್ಧಚಿತ್ರವನ್ನು ಹಿಂಪಡೆಯಬಹುದು ಎಂದು ಸಚಿವಾಲಯ ಹೇಳಿತ್ತು ಎಂದು ಮಾತೃಭೂಮಿ ನ್ಯೂಸ್ ವರದಿ ಮಾಡಿದೆ. ಆದರೆ ಆದಿಶಂಕರರ ಪ್ರತಿಮೆಯನ್ನು ಜಟಾಯುಪಾರದ ಜತೆ ಇರಿಸುವ ಮೂಲಕ ಇದನ್ನು ತೀರ್ಥಯಾತ್ರೆ ಎಂದು ಪರಿಗಣಿಸಲಾಗುವುದು. ಜಟಾಯುಪಾರ ಇರುವ ಚಡಯಮಂಗಲಂ, ವರ್ಕಲ ಮತ್ತು ಚೆಂಪಳಂತಿಗೆ ಸಮೀಪದಲ್ಲಿರುವುದರಿಂದ ಗುರುದೇವನ ಪ್ರತಿಮೆ ಉತ್ತಮವಾಗಿರುತ್ತದೆ ಎಂದು ರಾಜ್ಯವು ವಿವರಣೆ ನೀಡಿದೆ. ತೀರ್ಪುಗಾರರ ಕೋರಿಕೆಯಂತೆ ಕೇರಳವೂ ಆದಿಶಂಕರರ ಪ್ರತಿಮೆ ಇರುವ ರೇಖಾಚಿತ್ರವನ್ನು ಸಲ್ಲಿಸಿತ್ತು ಎಂದು ಮಲಯಾಳಂ ಪತ್ರಿಕೆ ಕೇರಳ ಕೌಮುದಿ ವರದಿ ಮಾಡಿದೆ.

ಇದನ್ನೂ ಓದಿGender neutral ಶಿಕ್ಷಕರನ್ನು ಸರ್, ಮೇಡಂ ಎನ್ನುವ ಬದಲು ಟೀಚರ್ ಎಂದು ಸಂಬೋಧಿಸಲು ವಿದ್ಯಾರ್ಥಿಗಳಿಗೆ ನಿರ್ದೇಶಿಸಿದ ಕೇರಳದ ಶಾಲೆ

Published On - 8:20 pm, Thu, 13 January 22

Follow Us
ಯಾವ ರಾಶಿಗೆ ಇಂದು ರಾಯರ ಅನುಗ್ರಹ
ಯಾವ ರಾಶಿಗೆ ಇಂದು ರಾಯರ ಅನುಗ್ರಹ
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ