AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಖಾಸಗಿ ಕಂಪನಿ

ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಖಾಸಗಿ ಕಂಪನಿ

ರಮೇಶ್ ಬಿ. ಜವಳಗೇರಾ
|

Updated on: Jan 12, 2026 | 5:05 PM

Share

ನಾನ್ ಕನ್ನಡಿಗ ಹೆಚ್‌ಆರ್ (Non Kannadiga HR) ಕೆಲಸಕ್ಕೆ ಬೇಕು ಎಂದು ಪ್ರಕಟಣೆ ಹೊರಡಿಸಿ ಕನ್ನಡಿಗರನ್ನು ಕೆರಳಿಸಿದ್ದ ಬೆಂಗಳೂರಿನ ಖಾಸಗಿ ಕಂಪನಿ ಇದೀಗ ಕ್ಷಮೆಯಾಚಿಸಿದೆ. ಬೆಂಗಳೂರಿನ ಜೆಪಿ ನಗರದಲ್ಲಿರುವ ಸ್ಕಿಲ್ ಸೋನಿಕ್ಸ್ (Skill Sonics) ಎಂಬ ಕಂಪನಿ ನಾನ್ ಕನ್ನಡಿಗ ಹೆಚ್‌ಆರ್ ಕೆಲಸಕ್ಕೆ ಬೇಕು ಎಂದು ನೌಕರಿ ಡಾಟ್ ಕಾಮ್‌ನಲ್ಲಿ ಪ್ರಕಟಣೆ ಹೊರಡಿಸಿತ್ತು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಕನ್ನಡ ಸಂಘಟನೆಯವರು ಜೆಪಿ ನಗರದ ಸಂಸ್ಥೆಯ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿದ್ದರು. ಸಾಮಾಜಿಕ ಜಾಲಾತಾಣದಲ್ಲಿಯೂ ಈ ಪ್ರಕಟಣೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಈ ಸುದ್ದಿಯನ್ನು ಟಿವಿ9 ಕನ್ನಡ ಸಹ ವರದಿ ಬಿತ್ತರಿಸಿತ್ತು. ವರದಿ ಬೆನ್ನಲ್ಲೇ ಸ್ಕಿಲ್ ಸೋನಿಕ್ಸ್ ಕಂಪನಿ ಮ್ಯಾನೇಜರ್ ಕ್ಷಮೆಯಾಚಿಸಿದ್ದಾರೆ.

ಬೆಂಗಳೂರು, (ಜನವರಿ 12): ನಾನ್ ಕನ್ನಡಿಗ ಹೆಚ್‌ಆರ್ (Non Kannadiga HR) ಕೆಲಸಕ್ಕೆ ಬೇಕು ಎಂದು ಪ್ರಕಟಣೆ ಹೊರಡಿಸಿ ಕನ್ನಡಿಗರನ್ನು ಕೆರಳಿಸಿದ್ದ ಬೆಂಗಳೂರಿನ ಖಾಸಗಿ ಕಂಪನಿ ಇದೀಗ ಕ್ಷಮೆಯಾಚಿಸಿದೆ. ಬೆಂಗಳೂರಿನ ಜೆಪಿ ನಗರದಲ್ಲಿರುವ ಸ್ಕಿಲ್ ಸೋನಿಕ್ಸ್ (Skill Sonics) ಎಂಬ ಕಂಪನಿ ನಾನ್ ಕನ್ನಡಿಗ ಹೆಚ್‌ಆರ್ ಕೆಲಸಕ್ಕೆ ಬೇಕು ಎಂದು ನೌಕರಿ ಡಾಟ್ ಕಾಮ್‌ನಲ್ಲಿ ಪ್ರಕಟಣೆ ಹೊರಡಿಸಿತ್ತು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಕನ್ನಡ ಸಂಘಟನೆಯವರು ಜೆಪಿ ನಗರದ ಸಂಸ್ಥೆಯ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿದ್ದರು. ಸಾಮಾಜಿಕ ಜಾಲಾತಾಣದಲ್ಲಿಯೂ ಈ ಪ್ರಕಟಣೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಈ ಸುದ್ದಿಯನ್ನು ಟಿವಿ9 ಕನ್ನಡ ಸಹ ವರದಿ ಬಿತ್ತರಿಸಿತ್ತು. ವರದಿ ಬೆನ್ನಲ್ಲೇ ಸ್ಕಿಲ್ ಸೋನಿಕ್ಸ್ ಕಂಪನಿ ಮ್ಯಾನೇಜರ್ ಕ್ಷಮೆಯಾಚಿಸಿದ್ದಾರೆ.

ಇದನ್ನೂ ನೋಡಿ: ಕೆಲಸಕ್ಕೆ ಬೇಕು, ಆದ್ರೆ ಕನ್ನಡಿಗರು ಬೇಡ್ವಂತೆ: ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ